

ಮೇಷ: ಪ್ರಮುಖ ವಸ್ತುವೊಂದನ್ನು ತೆಗೆದುಕೊಂಡು ಹೋಗಲು ಮರೆತು ನಂತರ ದಿನವಿಡೀ ಪರಿತಪಿಸುವ ಸಾಧ್ಯತೆ. ಅದೃಷ್ಟಸಂಖ್ಯೆ: 3
ವೃಷಭ: ಸಮಸ್ಯೆ ಆಗಬಹುದು ಎಂದುಕೊಂಡು ಸುಮ್ಮನಿದ್ದ ವಿಚಾರವೊಂದು ಸಮಸ್ಯೆ ಆಗದು ಎಂದು ಅರಿವಾಗಲಿದೆ. ಅದೃಷ್ಟಸಂಖ್ಯೆ: 7
ಮಿಥುನ: ಮಕ್ಕಳಿಗಾಗಿ ಸ್ವಲ್ಪ ಹೆಚ್ಚೇ ಖರ್ಚುಗಳನ್ನು ಮಾಡುವಿರಿ. ಸ್ವಲ್ಪ ಶಾರೀರಿಕ ಕಷ್ಟವಾದರೂ ಪ್ರಯತ್ನಿಸುತ್ತೇನೆ ಎನ್ನುತ್ತೀರಿ. ಅದೃಷ್ಟಸಂಖ್ಯೆ: 1
ಕಟಕ: ಕೈ ಕೆಳಗಿನ ಉದ್ಯೋಗಿಗಳಿಂದ ಸ್ವಲ್ಪ ಅವಮಾನ ಎದುರಾಗಲಿದೆ. ಅದರ ಬಗ್ಗೆ ಬೇಸರಪಡದೆ ನಿರ್ಲಕ್ಷಿಸಿ. ಅದೃಷ್ಟಸಂಖ್ಯೆ: 6
ಸಿಂಹ: ಬೆಂಬಿಡದೆ ಹಾಕಿದ ಶ್ರಮ ವ್ಯರ್ಥವಾಗದು. ಮೇಲಧಿಕಾರಿಗಳು ಕೂಡ ನಿಮ್ಮ ಶ್ರಮವನ್ನು ಗುರುತಿಸಲಿದ್ದಾರೆ. ಅದೃಷ್ಟಸಂಖ್ಯೆ: 2
ಕನ್ಯಾ: ಬೇಗನೆ ಕೆಲಸಕಾರ್ಯ ಮುಗಿಸಿಕೊಡುವಂತೆ ಒತ್ತಡ ಹೆಚ್ಚುತ್ತದೆ. ಇತರರಿಗೆ ಅರ್ಥ ಮಾಡಿಸಲು ಕಷ್ಟಪಡುವಿರಿ. ಅದೃಷ್ಟಸಂಖ್ಯೆ: 9
ತುಲಾ: ನಿಮಗೇ ಆಶ್ಚರ್ಯವಾಗುವಂತೆ ಜಿಪುಣತನ ತೋರುವಿರಿ. ಹೂಡಿಕೆಯ ಸಲಹೆ ಕೊಟ್ಟ ಜನರನ್ನೂ ನಂಬಲಾರಿರಿ. ಅದೃಷ್ಟಸಂಖ್ಯೆ: 4
ವೃಶ್ಚಿಕ: ಪ್ರಾಮುಖ್ಯತೆಯ ಬಗೆಗಿನ ದೃಷ್ಟಿಕೋನ ಬದಲಾದೀತು. ಅನಗತ್ಯ ವಿಚಾರಗಳಿಗೆ ಪ್ರಾಮುಖ್ಯತೆ ನೀಡದಿರಿ. ಅದೃಷ್ಟಸಂಖ್ಯೆ: 1
ಧನಸ್ಸು: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಪ್ರಮುಖ ಸಮಸ್ಯೆಗಳಿಂದ ಹೊರಬಂದು ನಿಟ್ಟುಸಿರಿಡುವಿರಿ. ಅದೃಷ್ಟಸಂಖ್ಯೆ: 5
ಮಕರ: ಸಹೋದರರಿಂದ ಸರಿಯಾಗಿ ಸಹಾಯ ಲಭಿಸದೆ ಸ್ನೇಹಿತರನ್ನೇ ಅವಲಂಬಿಸಬೇಕಾದ ಅನಿವಾರ್ಯ ಬರಬಹುದು. ಅದೃಷ್ಟಸಂಖ್ಯೆ: 7
ಕುಂಭ: ಉದ್ಯೋಗಸ್ಥಳದಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಆದರೆ ಯಾರ ಜತೆಗೂ ವಾಗ್ವಾದ ಬೇಡ. ಅದೃಷ್ಟಸಂಖ್ಯೆ: 4
ಮೀನ: ಪ್ರಯಾಣದಲ್ಲಿ ಇರುವವರಿಗೆ ಸ್ವಲ್ಪ ಕಷ್ಟ. ಆಹಾರದ ವ್ಯತ್ಯಯದಿಂದ ಆರೋಗ್ಯದಲ್ಲಿ ಬದಲಾವಣೆ ಆಗಬಹುದು. ಅದೃಷ್ಟಸಂಖ್ಯೆ: 1