

ಮೇಷ: ಶಿಕ್ಷಕ ವೃಂದಕ್ಕೆ ಒತ್ತಡ. ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ಅಶುಭ. ಮಾನಸಿಕವಾಗಿ ನೊಂದುಕೊಳ್ಳುವ ಸಂದರ್ಭ. ಶುಭಸಂಖ್ಯೆ: 5
ವೃಷಭ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ಕಲಹಗಳು ಅಂತ್ಯವಾಗಿ ಸಮಾಧಾನ. ರಕ್ತದೊತ್ತಡ ಕಡಿಮೆಯಾಗುತ್ತದೆ. ಶುಭಸಂಖ್ಯೆ: 9
ಮಿಥುನ: ಲೇವಾದೇವಿ ವ್ಯವಹಾರದಲ್ಲಿ, ಆಹಾರ ಸಂಸ್ಕರಣೆ ವ್ಯಾಪಾರದಲ್ಲಿ ಉತ್ತಮ ಬೇಡಿಕೆ. ಕಟ್ಟಡ ಪರಿಕರ ವ್ಯವಹಾರಸ್ಥರಿಗೆ ಆದಾಯ. ಶುಭಸಂಖ್ಯೆ:1
ಕಟಕ: ಕೆಲಸಗಳಲ್ಲಿ ಉತ್ಸಾಹ ಇರಲಿದೆ, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಿ. ಶುಭಸಂಖ್ಯೆ: 8
ಸಿಂಹ: ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಶುಭಸಂಖ್ಯೆ:1
ಕನ್ಯಾ: ಗರ್ಭಿಣಿಯರು ಎಚ್ಚರದಿಂದಿರಿ. ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾದೀತು. ಗಣ್ಯ ವ್ಯಕ್ತಿಗಳ ಸಹಾಯ ದೊರೆಯುತ್ತದೆ. ಶುಭಸಂಖ್ಯೆ:3
ತುಲಾ: ಮಹಿಳೆಯರಿಗೆ ಉದ್ಯೋಗದಲ್ಲಿ ಶುಭ. ಅಧಿಕಾರಿಗಳಿಗೆ ಉತ್ತಮಕಾಲ. ಅನಿವಾರ್ಯವಾಗಿ ನೌಕರಿಯಲ್ಲಿ ಬದಲಾವಣೆ ಆದೀತು. ಶುಭಸಂಖ್ಯೆ: 6
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಶುಭವಾಗುವುದು. ಕೃಷಿ ವಿಸ್ತರಣೆಗೆ ಯೋಜನೆ ಹಾಕುವಿರಿ. ಇದು ಅದೃಷ್ಟದ ದಿನವಾಗಿರುತ್ತದೆ. ಶುಭಸಂಖ್ಯೆ: 4
ಧನುಸ್ಸು: ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ಹಣಕ್ಕೆ ಯಾವುದೇ ತೊಂದರೆ -ತೊಡಕು ಇರುವುದಿಲ್ಲ. ಮನೆ ಕಟ್ಟಿಕೊಳ್ಳುವ ಚಿಂತನೆ. ಶುಭಸಂಖ್ಯೆ: 9
ಮಕರ: ರಾಜಕಾರಣಿಗಳಿಗೆ ಉತ್ತಮ ಸಮಯ. ಆಂತರಿಕ ಶತ್ರುಗಳು ಹೆಚ್ಚಾಗುತ್ತಾರೆ. ಮನೆಯ ನವೀಕರಣದ ಚಿಂತನೆ ನಡೆಸುವಿರಿ. ಶುಭಸಂಖ್ಯೆ: 2
ಕುಂಭ: ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದಿರಿ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ದೈವದ ಮೇಲೆ ನಂಬಿಕೆಯಿಡಿ. ಶುಭಸಂಖ್ಯೆ: 5
ಮೀನ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ತೀರ್ಮಾನಗಳನ್ನು ಬದಲಾಯಿಸುವುದು ಸೂಕ್ತವಲ್ಲ. ಅನವಶ್ಯಕ ಖರ್ಚು ಮಾಡಬೇಡಿ. ಶುಭಸಂಖ್ಯೆ: 3