

ಮೇಷ: ಯಶಸ್ಸಿನಲ್ಲಿ ಕುಟುಂಬದೊಂದಿಗೆ ಸಂಭ್ರಮ. ನಿಮ್ಮ ಮನಸ್ಥೈರ್ಯಕ್ಕೆ ಮೆಚ್ಚುಗೆ. ವೈದ್ಯರ ಸಲಹೆ ಪಡೆದು ಮುಂದುವರೆಯಿರಿ. ಶುಭಸಂಖ್ಯೆ: 2
ವೃಷಭ: ಆತ್ಮವಿಶ್ವಾಸದಿಂದ ಕೆಲಸ ನಿರ್ವಹಣೆ ಮಾಡಿ, ಗೆಲವು ನಿಮ್ಮದೇ. ದುಂದು ವೆಚ್ಚ ಮಾಡಬೇಡಿ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 5
ಮಿಥುನ: ನಿಮ್ಮ ನಡವಳಿಕೆ ಮನಸ್ಸಿನ ನಿಯಂತ್ರಣದಲ್ಲಿರಲಿ. ಹಲವು ದಿನಗಳಿಂದ ಪಟ್ಟ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ. ಶುಭಸಂಖ್ಯೆ:3
ಕಟಕ: ಬೇರೆಯವರ ಶಿಫಾರಸಿಗೆ ಕಾಯಬೇಡಿ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಜಯ ನಿಮ್ಮದೇ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ಸಿಂಹ: ಪರರಿಂದ ನಿಮ್ಮ ಕಾರ್ಯಕ್ಕೆ ಆಕ್ಷೇಪ, ಮನಸ್ಸಿಗೆ ಬೇಸರ. ಸಂಗಾತಿಯಿಂದ ಸಲಹೆ. ವಿದೇಶ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ: 7
ಕನ್ಯಾ: ಹಿರಿಯರ ಸಲಹೆಯನ್ನು ನಿರಾಕರಿಸಬೇಡಿ. ಆಸ್ತಿ ವಿಚಾರದಲ್ಲಿ ಕಿರಿಕಿರಿ. ಸಾರ್ವಜನಿಕ ಜೀವನದಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 4
ತುಲಾ: ಕುಟುಂಬದಲ್ಲಿ ಶುಭಕಾರ್ಯ. ಆಕಸ್ಮಿಕ ಧನಲಾಭ. ಯೋಚಿಸಿ ನಿರ್ವಹಿಸಿ. ಸಂಗಾತಿಯೊಂದಿಗೆ ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ಶುಭಸಂಖ್ಯೆ: 5
ವೃಶ್ಚಿಕ: ನಿರೀಕ್ಷೆಗೂ ಮೀರಿ ನಿಮ್ಮ ಪ್ರಯತ್ನದ ಸಫಲತೆ. ಸ್ನೇಹಿತರಿಂದ ವಿಶೇಷ ಮನ್ನಣೆ. ಕುಟುಂಬದಲ್ಲಿ ವಿಶೇಷ ಗೌರವ. ಶುಭಸಂಖ್ಯೆ: 6
ಧನುಸ್ಸು: ಕಷ್ಟಕಾಲದಲ್ಲಿ ಕುಟುಂಬದಿಂದ ಸಾಂತ್ವನ. ತಾಯಿಯಿಂದ ವಿಶೇಷ ಸಲಹೆ ಮಾರ್ಗದರ್ಶನ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 7
ಮಕರ: ಧಾರ್ವಿುಕ ಕ್ಷೇತ್ರದಲ್ಲಿ ತೊಡಗಿಕೊಳ್ಳಿ, ಮನಸ್ಸಿಗೆ ಸಮಾಧಾನ ಸಿಗುತ್ತದೆ. ಕಾರ್ಯದಲ್ಲಿ ಸಿಗದ ಯಶಸ್ಸು. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6
ಕುಂಭ: ಅನಿರೀಕ್ಷಿತವಾಗಿ ಧನಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಗಳಿಗೆ ಮದುವೆ ನಿಶ್ಚಯ. ಶುಭಸಂಖ್ಯೆ: 2
ಮೀನ: ಕಲಾವಿದರಿಗೆ ಇದು ವಿಶೇಷ ದಿನ. ಬರಹಗಾರರಿಗೆ ಮಾನ ಸನ್ಮಾನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 9