

ಮೇಷ: ಬಂಧುಗಳ ಆಗಮನ. ಸ್ನೇಹಿತರ ಜತೆ ವಿಹಾರಕ್ಕೆ ತೆರಳುವಿರಿ. ಹೊಸ ಭೂಮಿ ಖರೀದಿಗೆ ನಿರ್ಧರಿಸಿ ಚಾಲನೆ ನೀಡುವಿರಿ. ಶುಭಸಂಖ್ಯೆ: 6
ವೃಷಭ: ಅವಕಾಶಗಳಿಂದ ಯಶಸ್ಸು ನಿಮ್ಮೆಡೆಗೆ ಸಾಗಿ ಬರಲಿದೆ. ಸಂಗೀತಗಾರರಿಗೆ ವಿಶೇಷ ಅವಕಾಶ. ಅನವಶ್ಯಕ ಅಪವ್ಯಯ. ಶುಭಸಂಖ್ಯೆ: 5
ಮಿಥುನ: ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡುವುದು ಅಗತ್ಯ. ಮಕ್ಕಳಿಂದ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 6
ಕಟಕ: ಅಕ್ಕ-ತಂಗಿಯರ ಆಗಮನ. ಆತ್ಮೀಯ ಗೆಳತಿಯ ಭೇಟಿ. ವಿಶೇಷ ಪುರಸ್ಕಾರ. ಸಾಮಾಜಿಕವಾಗಿ ಮನ್ನಣೆ ದೊರೆತು ಸಂತಸ. ಶುಭಸಂಖ್ಯೆ: 3
ಸಿಂಹ: ಶತ್ರುಗಳ ಉಪಟಳ. ಪಿತ್ರಾರ್ಜಿತ ಆಸ್ತಿ ವಿವಾದ. ತಾಯಿಯ ಮಾತನ್ನು ತಪ್ಪದೆ ಪಾಲಿಸಿ. ದಿನಾಂತ್ಯದಲ್ಲಿ ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 2
ಕನ್ಯಾ: ಯಾರೋ ಮಾಡಿದ ತಪ್ಪಿಗೆ ನೀವು ಉದ್ಯೋಗ ಕಳೆದುಕೊಳ್ಳುವ ದುಸ್ಥಿತಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 8
ತುಲಾ: ಸಂಗಾತಿಯೊಂದಿಗೆ ವಿರಸ. ಮಕ್ಕಳ ವಿಷಯದಲ್ಲಿ ಶುಭ ಸುದ್ದಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ದೇವಾಲಯ ಭೇಟಿ. ಶುಭಸಂಖ್ಯೆ:1
ವೃಶ್ಚಿಕ: ನಿರೀಕ್ಷಿಸುತ್ತಿದ್ದ ಕೆಲಸಕ್ಕೆ ಚಾಲನೆ. ಕುಟುಂಬದವರೊಂದಿಗೆ ಔತಣಕೂಟ. ಆಕಸ್ಮಿಕ ಧನಲಾಭ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 2
ಧನುಸ್ಸು: ಯೋಚಿಸಿ ಮಾತನಾಡುವುದು ಕ್ಷೇಮ. ಹಿತಶತ್ರುಗಳ ಬಗ್ಗೆ ಜಾಗರೂಕತೆಯಿಂದ ಇರಿ. ಅನಾರೋಗ್ಯ ಕಾಡಬಹುದು, ಹುಷಾರು. ಶುಭಸಂಖ್ಯೆ: 6
ಮಕರ: ನಿಮ್ಮಲ್ಲಿರುವ ಪ್ರತಿಭೆಗೆ ಸರಿಯಾದ ಪುರಸ್ಕಾರ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ದಿನಾಂತ್ಯದಲ್ಲಿ ಆಯಾಸ ಕಾಣಿಸುವುದು. ಶುಭಸಂಖ್ಯೆ: 6
ಕುಂಭ: ಸಾಲಗಾರರ ಕಾಟ. ಕುಟುಂಬದಲ್ಲಿ ಒತ್ತಡ. ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 7
ಮೀನ: ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ದಿಯಾಗಿ ಸಮಾಧಾನ. ಗ್ರಾಮದಿಂದ ಆತ್ಮೀಯ ಬಂಧುಗಳ ಆಗಮನ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 4