ಈ ರಾಶಿಯವರಿಗೆ ಇಂದು ಆರ್ಥಿಕ ಅಡಚಣೆಗಳು ಇರುವುದಿಲ್ಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನ್ಯರ ಭಾವನೆಗಳಿಗೆ ಬೆಲೆ ಕೊಡುವ ಗುಣ ಅಭ್ಯಾಸ ಮಾಡಿಕೊಳ್ಳಿ. ಬೆಂಕಿಯಿಂದ ಅನಾಹುತ ಸಂಭವಿಸಬಹುದು. ಶುಭಸಂಖ್ಯೆ: 8

ವೃಷಭ: ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭ ಪಡೆಯುವಿರಿ. ಜತೆಗೆ ಜನರ ಮೆಚ್ಚುಗೆಗೆ ಪಾತ್ರರಾಗುವಿರಿ. ಶುಭಸಂಖ್ಯೆ: 9

ಮಿಥುನ: ಲೇವಾದೇವಿ ವ್ಯವಹಾರ ನಡೆಸುವವರಿಗೆ ಸಂಕಷ್ಟ. ಬಹು ಸಮಯದಿಂದ ಉಳಿದಿದ್ದ ಹೆಚ್ಚಿನ ಕೆಲಸಗಳು ಕಾರ್ಯಗತಗೊಳ್ಳುವವು. ಶುಭಸಂಖ್ಯೆ: 1

ಕಟಕ: ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಪರೋಪಕಾರದ ವ್ಯಕ್ತಿತ್ವಕ್ಕೆ ತಕ್ಕ ಪ್ರತಿಫಲ ಹೊಂದುವಿರಿ. ಶುಭಸಂಖ್ಯೆ: 2

ಸಿಂಹ: ಸಂತೋಷವನ್ನು ಆಸ್ವಾದಿಸಿ. ಪ್ರೀತಿ ಪಾತ್ರರೊಂದಿಗೆ ಹೊಂದಾಣಿಕೆ. ಸಾಮಾಜಿಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ. ಶುಭಸಂಖ್ಯೆ: 4

ಕನ್ಯಾ: ಕೆಲಸದ ಒತ್ತಡದಲ್ಲಿ ಮನೆಯ ಕೆಲಸಗಳತ್ತ ಗಮನ ಕಡಿಮೆಯಾಗುವುದು. ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಯಾಗಲಿದೆ. ಶುಭಸಂಖ್ಯೆ:7

ತುಲಾ: ಆರ್ಥಿಕ ವಿಚಾರದಲ್ಲಿ ಉದಾರತೆ ತೋರಿದರೆ ಸಮಸ್ಯೆಯಾದೀತು. ಬೇಗ ಗುರಿ ತಲುಪಬೇಕೆಂಬ ಹಂಬಲ ಈಡೇರುವುದು. ಶುಭಸಂಖ್ಯೆ: 3

ವೃಶ್ಚಿಕ: ನಿಮ್ಮ ಸುತ್ತಮುತ್ತಲ ಜನರೊಂದಿಗಿನ ಬಾಂಧವ್ಯವು ಉತ್ತಮಗೊಳ್ಳುವುದು. ಮನೆಯ ಜವಾಬ್ದಾರಿಗಳು ಹೆಚ್ಚಲಿವೆ. ಶುಭಸಂಖ್ಯೆ: 6

ಧನುಸ್ಸು: ಅನ್ವೇಷಣೆಯ ಹಾದಿಯಲ್ಲಿ ಮತ್ತಷ್ಟು ದೂರ ಸಾಗಿದಲ್ಲಿ ಯಶಸ್ಸಿನ ಛಾಯೆ ಕಾಣಲಿದೆ. ಸಂತಸದ ಕ್ಷಣಗಳನ್ನು ತಂದುಕೊಳ್ಳಿ. ಶುಭಸಂಖ್ಯೆ:7

ಮಕರ: ಮೆಚ್ಚಿನ ಹವ್ಯಾಸಕ್ಕೆ ಬಿಡುವು ಮಾಡಿಕೊಳ್ಳುವಿರಿ. ಆರ್ಥಿಕ ಅಡಚಣೆಗಳು ಇರುವುದಿಲ್ಲ. ಒಪ್ಪಂದದ ಬಗ್ಗೆ ದೃಢ ನಿರ್ಧಾರ ಮಾಡಿ. ಶುಭಸಂಖ್ಯೆ: 3

ಕುಂಭ: ಕಚೇರಿಯಲ್ಲಿ ತಪ್ಪಿದ ಅವಘಡ. ಸಂಗಾತಿಯೊಂದಿಗೆ ವಿರಸ. ಆಸ್ತಿ ವಿಚಾರದಲ್ಲಿ ಸಹೋದರಿಯರೊಂದಿಗೆ ವಾಗ್ವಾದ. ಶುಭಸಂಖ್ಯೆ:4

ಮೀನ: ಅಪರಿಚಿತರಿಂದ ಮೋಸ. ಗೃಹೋಪಕರಣಗಳ ಖರೀದಿ. ಮಹಿಳೆಯರಿಗೆ ಆಭರಣ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net