

ಮೇಷ: ಕುಟುಂಬದಲ್ಲಿ ಆರಂಭದ ಸಡಗರ. ಹಣಕಾಸಿನ ಸಂಸ್ಥೆಯವರಿಗೆ ಅಧಿಕ ಒತ್ತಡ. ವಿದ್ಯಾ ಇಲಾಖೆ ಉದ್ಯೋಗಿಗಳಿಗೆ ಅಶುಭ. ಶುಭಸಂಖ್ಯೆ: 9
ವೃಷಭ: ಸ್ತ್ರೀಯರಿಗೆ ಕಚೇರಿಯಲ್ಲಿ ಉತ್ತಮದಿನ. ಕೆಲಸದಲ್ಲಿ ಮಂದಗತಿ ಕಾಣಿಸುವುದು. ದುಡುಕುತನದ ನಿರ್ಧಾರ ಕೈಗೊಳ್ಳಬೇಡಿ. ಶುಭಸಂಖ್ಯೆ: 1
ಮಿಥುನ: ಆಟಗಾರರು, ಕಲಾವಿದರಿಗೆ ಶುಭದಿನ. ಮಾನಸಿಕ ಶಾಂತಿ. ಉದ್ಯೋಗದಲ್ಲಿ ಒತ್ತಡದ ಕ್ಷಣಗಳನ್ನು ಎದುರಿಸಬೇಕಾಗುವುದು. ಶುಭಸಂಖ್ಯೆ: 5
ಕಟಕ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ. ಸರ್ಕಾರಿ ಕೆಲಸಗಳಲ್ಲಿ ಒತ್ತಡ. ಬುದ್ಧಿವಂತಿಕೆಯಿಂದ ಸಮಸ್ಯೆಗಳ ನಿವಾರಣೆ ಮಾಡುವಿರಿ. ಶುಭಸಂಖ್ಯೆ: 8
ಸಿಂಹ: ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರದಲ್ಲಿ, ಪುಸ್ತಕ ವ್ಯಾಪಾರದಲ್ಲಿ ಉತ್ತಮ ಲಾಭ. ಔಷಧ ಸೇವನೆಯ ನಿರ್ಲಕ್ಷ್ಯದಿಂದ ಅನಾರೋಗ್ಯ. ಶುಭಸಂಖ್ಯೆ: 8
ಕನ್ಯಾ: ಹಿರಿಯರೊಂದಿಗೆ ಮನಸ್ತಾಪ. ಸಹನೆ ಇರಲಿ. ಧಾರ್ವಿುಕ ವಿಷಯಗಳಲ್ಲಿ ಆಸಕ್ತಿ. ಪತ್ನಿಯೊಂದಿಗೆ ವಿರಸ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 3
ತುಲಾ: ದುಂದು ವೆಚ್ಚ ಬೇಡ. ದಾಂಪತ್ಯದಲ್ಲಿ ಅಶುಭ ಲಕ್ಷಣ ಕಾಣಿಸಬಹುದು. ಹಣಕಾಸಿನ ಸಂಸ್ಥೆಯಲ್ಲಿರುವವರಿಗೆ ನಿರೀಕ್ಷಿತ ಧನಲಾಭ. ಶುಭಸಂಖ್ಯೆ: 6
ವೃಶ್ಚಿಕ: ಹೋಟೆಲ್ ವ್ಯಾಪಾರದಲ್ಲಿ ಸಾಧಾರಣ ಲಾಭ. ಸಗಟು ವ್ಯಾಪಾರದಲ್ಲಿ ನಷ್ಟ ಸಂಭವ. ಕಣ್ಣಿನ ತೊಂದರೆ. ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಶುಭಸಂಖ್ಯೆ: 4
ಧನುಸ್ಸು: ಬರಹಗಾರರಿಗೆ ಸಾರ್ವಜನಿಕ ಮನ್ನಣೆ. ಮಾರಾಟ ಪ್ರತಿನಿಧಿಗಳಿಗೆ ಒಳ್ಳೆಯ ದಿನ. ಹೋಟೆಲ್ ಕಾರ್ವಿುಕರಿಗೆ ಆರ್ಥಿಕ ಲಾಭ. ಶುಭಸಂಖ್ಯೆ: 1
ಮಕರ: ಹೋಟೆಲ್ ಉದ್ಯಮದಲ್ಲಿ ಆದಾಯ. ಕೈಕಾಲುಗಳಲ್ಲಿ ನೋವು ಕಂಡೀತು. ವಿದ್ಯಾರ್ಥಿಗಳಿಗೆ ಶುಭ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 2
ಕುಂಭ: ಭೂ ಸಂಬಂಧಿತ ವ್ಯಾಪಾರಗಳಲ್ಲಿ ಉತ್ತಮ ಆದಾಯ. ಆಭರಣಗಳ ವ್ಯಾಪಾರದಲ್ಲಿ ಧನ ನಷ್ಟ. ಮಿತ್ರರಿಂದ ವಂಚನೆ ಸಾಧ್ಯತೆ. ಶುಭಸಂಖ್ಯೆ: 8
ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ನ್ಯಾಯಾಲಯದ ವಿವಾದಗಳಲ್ಲಿ ತೀರ್ಪು ವಿಳಂಬವಾಗಿ ನಿರಾಸೆ. ಶುಭಸಂಖ್ಯೆ: 2