ಈ ರಾಶಿಯವರಿಗೆ ಜೂಜಾಡೋ ಅಭ್ಯಾಸ ಇದ್ರೆ ಹುಷಾರು..

Nithya Bhavishya
Published on

ಮೇಷ: ದಾನ, ಧರ್ಮ, ದಯಾಶೀಲ ಗುಣಗಳಿಂದ

ಕೆಲವರ ಸಮಸ್ಯೆ ಪರಿಹರಿಸುವ ನಿಮಗೆ

ಮಾನಸಿಕ ನೆಮ್ಮದಿ ಇದೆ. ಶುಭಸಂಖ್ಯೆ: 9

ವೃಷಭ: ಭೂಸಂಬಂಧಿ ವ್ಯವಹಾರಗಳಲ್ಲಿ ತೊಡಗಿರುವ

ದಲ್ಲಾಳಿಗಳಿಗೆ ಲಾಭದ ದಾರಿಯೊಂದು

ಸಹಜವಾಗಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 7

ಮಿಥುನ: ಷೇರು ವಹಿವಾಟು, ಜೂಜು, ಬೆಟ್ಟಿಂಗ್

ಮುಂತಾದ ಅನಿಶ್ಚಿತ ಆಟಗಳು ಬೇಡ.

ಧನನಾಶವಾದೀತು. ಎಚ್ಚರ. ಶುಭಸಂಖ್ಯೆ: 1

ಕಟಕ: ಮನೆಯ ಸದಸ್ಯರಲ್ಲಿ ಮನಸ್ತಾಪ ಸಂಭವಿಸುವ

ಸಾಧ್ಯತೆಯಿದೆ. ಒರಟು ಮಾತುಗಳನ್ನು

ಮಾತ್ರ ಖಂಡಿತ ಆಡಲೇಬೇಡಿ. ಶುಭಸಂಖ್ಯೆ: 3

ಸಿಂಹ: ಕೆಲಸದ ಸ್ಥಳದಲ್ಲಿ ಸಹನೆ ಮತ್ತು ಉನ್ನತ

ತಂತ್ರಗಾರಿಕೆಯಿಂದ ಪದೋನ್ನತಿಯನ್ನು

ಪಡೆದುಕೊಳ್ಳುವ ಅವಕಾಶವಿದೆ. ಶುಭಸಂಖ್ಯೆ: 8

ಕನ್ಯಾ: ಸಂಗಾತಿಯ ಜತೆಗಿನ ಭಿನ್ನಾಭಿಪ್ರಾಯಗಳು

ಉಪಶಮನವಾಗಲಿವೆ. ಆದರೂ ತುಸು ಎಚ್ಚರ

ಇದ್ದೇ ಇರಲಿ. ಅವಸರ ಬೇಡ. ಶುಭಸಂಖ್ಯೆ: 2

ತುಲಾ: ಕೌಟುಂಬಿಕ ವಲಯದಲ್ಲಿ ಶಾಂತಿ ಸಮಾಧಾನಗಳು

ಇರಲಿವೆ. ಕಿರಿಕಿರಿ ಉಂಟುಮಾಡುವ ನೆಂಟರಿಂದ

ಸಾಧ್ಯವಾದಷ್ಟು ದೂರವೇ ಇರಿ. ಶುಭಸಂಖ್ಯೆ: 5

ವೃಶ್ಚಿಕ: ಸಹೋದ್ಯೋಗಿಗಳಿಂದ ಸ್ವಲ್ಪ ಅಸಮಾಧಾನ

ಉಂಟಾಗಬಹುದು. ಮಿತವಾಗಿ ಮಾತಾಡಿದರೆ

ಸಮಸ್ಯೆಗಳು ಶಮನಗೊಳ್ಳಲಿವೆ. ಶುಭಸಂಖ್ಯೆ: 6

ಧನುಸ್ಸು: ಸಮಸ್ಯೆಯ ಆಳಕ್ಕಿಳಿದು ಪರಿಹರಿಸುವಂತಹ

ದಾರಿಯನ್ನು ಕಂಡುಕೊಳ್ಳಿ. ಮೇಲಧಿಕಾರಿಗಳ

ಪ್ರಶಂಸೆ ಕೂಡ ಸಿಗಲಿದೆ. ಶುಭಸಂಖ್ಯೆ: 4

ಮಕರ: ಧ್ಯಾನ, ಯೋಗಾದಿಗಳ ಸತತ ಅಭ್ಯಾಸದಿಂದ

ಮಾನಸಿಕ ಚೈತನ್ಯ ವೃದ್ಧಿ ಹೊಂದಿ ಆಂತರಿಕವಾದ

ಒತ್ತಡಗಳು ದೂರವಾಗಲಿವೆ. ಶುಭಸಂಖ್ಯೆ: 9

ಕುಂಭ: ದೂರಪ್ರಯಾಣದ ಅವಕಾಶ ಒದಗಿಬರಲಿದೆ.

ಅದಕ್ಕೆ ಹಿಂಜರಿಯದೆಯೇ ಮುಂದುವರಿದರೆ

ಜ್ಞಾನಕ್ಕೆ ಹೊಸ ವಿಸ್ತಾರ ಲಭ್ಯ. ಶುಭಸಂಖ್ಯೆ: 1

ಮೀನ: ಸಾಮಾಜಿಕ ಕಾರ್ಯಕರ್ತರಿಗೆ ಅಡೆತಡೆಗಳ

ನಡುವೆಯೂ ಜಯವಾಗಲಿದೆ. ಲೇಖಕರಿಗೆ

ಅನಿರೀಕ್ಷಿತ ಮನ್ನಣೆಯಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net