ಈ ರಾಶಿಯವರಿಗಿಂದು ಸ್ತ್ರೀಯರಿಂದ ನೆರವು, ವ್ಯಾಪಾರದಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ. ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಆದಾಯ. ನಿಮ್ಮ ಮನದಾಸೆ ಈಡೇರುವುದು. ಶುಭಸಂಖ್ಯೆ:1

ವೃಷಭ: ಕೃಷಿಯಲ್ಲಿ ಅಲ್ಪ ಲಾಭ. ಅನಾರೋಗ್ಯ. ವಿದ್ಯಾರ್ಥಿ ಗಳಲ್ಲಿ ಗೊಂದಲ. ಶತ್ರು ಬಾಧೆ. ದಾಂಪತ್ಯದಲ್ಲಿ ವಿರಸ. ಸ್ಥಳ ಬದಲಾವಣೆ. ಶುಭಸಂಖ್ಯೆ: 3

ಮಿಥುನ: ಋಣಬಾಧೆ ಕಾಡುವುದು. ಸ್ನೇಹಿತರಿಗೆ ಹಿತವಚನ ಹೇಳುವಿರಿ. ಉದ್ಯೋಗ ಲಭ್ಯ. ಕುಟುಂಬ ಸೌಖ್ಯ ದೊರೆತು ಸಮಾಧಾನ. ಶುಭಸಂಖ್ಯೆ: 8

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ. ಕುಲದೇವರ ಅನುಗ್ರಹದಿಂದ ಅನುಕೂಲ. ಮನೆಯಲ್ಲಿ ಧಾರ್ವಿುಕ ಸಮಾರಂಭ. ಶುಭಸಂಖ್ಯೆ: 4

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ. ಮನಃಶಾಂತಿ. ವಾಹನ ಖರೀದಿ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 2

ಕನ್ಯಾ: ವಿಪರೀತ ಖರ್ಚು. ಯತ್ನ ಕಾರ್ಯಗಳಲ್ಲಿ ಜಯ. ಆರ್ಥಿಕ ಪರಿಸ್ಥಿತಿ ಉತ್ತಮ. ಸ್ವಜನರಲ್ಲಿ ಪ್ರೀತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 6

ತುಲಾ: ಉಪಕಾರ ಮಾಡುವಿರಿ. ಬದುಕಿಗೆ ಉತ್ತಮ ತಿರುವು ದೊರೆಯುವುದು. ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ. ಜಾಗರೂಕರಾಗಿ ಮುಂದಡಿ ಇಡಿ. ಭೋಗವಸ್ತು ಪ್ರಾಪ್ತಿ. ಮಿತ್ರರ ಆಗಮನದಿಂದ ಸಂತಸ. ಶುಭಸಂಖ್ಯೆ: 2

ಧನುಸ್ಸು: ಸ್ತ್ರೀಯರಿಂದ ನೆರವು. ಆತ್ಮೀಯರೊಂದಿಗೆ ಕಲಹ. ವ್ಯಾಪಾರದಲ್ಲಿ ಲಾಭ. ಆಭರಣ ಖರೀದಿಸುವಿರಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ: 7

ಮಕರ: ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಸಾರಾಸಾರ ಯೋಚಿಸಿ. ದೂರ ಪ್ರಯಾಣ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 3

ಕುಂಭ: ಕಾರ್ಯ ಅನುಕೂಲ. ಸೇವಕ ವರ್ಗದಿಂದ ಸಹಾಯ ದೊರೆಯುವುದು. ಸ್ಥಳ ಬದಲಾವಣೆ ಸಾಧ್ಯತೆ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 2

ಮೀನ: ಆಲಸ್ಯ ಮನೋಭಾವ. ಸಲ್ಲದ ಅಪವಾದ ಬಂದೀತು. ಚಂಚಲ ಮನಸ್ಥಿತಿ. ಸಕಾಲಕ್ಕೆ ಭೋಜನ ಮಾಡಲಾಗದಷ್ಟು ಒತ್ತಡ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net