

ಮೇಷ: ಸಾಹಸಪ್ರವೃತ್ತಿಯವರಾದ ನೀವು ಧೈರ್ಯದಿಂದ ಮುನ್ನುಗ್ಗುವುದರಲ್ಲಿ ಹಿಂದೆ ಬೀಳದಿರಿ. ಆದರೆ ಅತಿಯಾದ ಅವಸರವೂ ಬೇಡ. ಶುಭಸಂಖ್ಯೆ: 8
ವೃಷಭ: ದೂರಪ್ರವಾಸದ ನಿರ್ಧಾರವು ದಿಢೀರ್ ಎಂದು ಎದುರಾಗಬಹುದು. ಶಿಸ್ತಿನಿಂದ ಮುಂದಾದರೆ ನಿಮ್ಮ ಪಾಲಿಗೆ ಲಾಭವಾಗಲಿದೆ. ಶುಭಸಂಖ್ಯೆ: 4
ಮಿಥುನ: ಋಣಾತ್ಮಕ ಧೋರಣೆಗಳನ್ನು ಕೂಡಲೇ ಕೈಬಿಡಿ. ನಿಮಗೆ ಉತ್ತಮ ಜನರಿಂದ ವಿಶೇಷವಾದಂತಹ ಬೆಂಬಲ ಸಿಗುವ ಯೋಗವಿದೆ. ಶುಭಸಂಖ್ಯೆ: 9
ಕಟಕ: ನೋಯಿಸುವಂತಹ ಮಾತುಗಳನ್ನು ಆಡಿ ವೃಥಾ ಕಿರಿಕಿರಿಗೆ ಒಳಗಾಗದಿರಿ. ಈ ವೇಳೆ ಚಾತುರ್ಯದ ನಡೆಯೇ ಉತ್ತಮ. ಶುಭಸಂಖ್ಯೆ: 1
ಸಿಂಹ: ವಿಘ್ನಸಂತೋಷಿಗಳು ನಿಮಗೆ ದುಃಖವನ್ನು ಉಂಟುಮಾಡಲಿದ್ದಾರೆ. ಆದರೆ ಸ್ವಲ್ಪವೂ ವ್ಯಥೆಪಡದೆಯೇ ಧೈರ್ಯವಾಗಿರಿ. ಶುಭಸಂಖ್ಯೆ: 5
ಕನ್ಯಾ: ಮಕ್ಕಳ ಕಾರಣದಿಂದ ಕೆಲವು ಒತ್ತಡಗಳು ಸೃಷ್ಟಿಯಾಗಬಹುದು. ಆದರೆ ಅವರನ್ನು ನಾಜೂಕಾಗಿಯೇ ನಿಯಂತ್ರಿಸಿ. ಶುಭಸಂಖ್ಯೆ: 3
ತುಲಾ: ತಾಳ್ಮೆಯೇ ಕಾರ್ಯಸಾಧನೆಗೆ ಉತ್ತಮವಾದ ಅಡಿಪಾಯ ಹಾಕಿಕೊಡಲಿದೆ. ಆದರೆ ಯಾವ ಕಾರಣಕ್ಕೂ ಸಿಡುಕಾಡದಿರಿ. ಶುಭಸಂಖ್ಯೆ: 7
ವೃಶ್ಚಿಕ: ಆರೋಗ್ಯವೇ ಪರಮ ಭಾಗ್ಯ ಎಂಬುದನ್ನು ಕೇವಲ ತಿಳಿದರೆ ಸಾಲದು. ಅದನ್ನು ಅವಶ್ಯವಾಗಿ ಕಾರ್ಯರೂಪಕ್ಕೂ ತರಬೇಕು. ಶುಭಸಂಖ್ಯೆ: 2
ಧನಸ್ಸು: ಹಲವಾರು ಕಡೆಗಳಿಂದ ಮೆಚ್ಚುಗೆಯ ಮಾತುಗಳು ದೊರೆಯುವ ಅವಕಾಶವಿದೆ. ಕಾರ್ಯಕ್ಷಮತೆ ದೃಢವಾಗಿರಲಿ. ಶುಭಸಂಖ್ಯೆ: 6
ಮಕರ: ನೂರೆಂಟು ರೀತಿಯ ಖರ್ಚಿನ ಪಟ್ಟಿಗಳು ಎದುರಿಗೆ ಬರಬಹುದು. ಆದರೂ ಅವುಗಳನ್ನು ಜಾಣ್ಮೆಯಿಂದ ನಿಯಂತ್ರಿಸಿ. ಶುಭಸಂಖ್ಯೆ: 9
ಕುಂಭ: ಮನೆಯಲ್ಲಿ ಒಳಗೊಳಗೇ ಅಸಮಾಧಾನದ ಮನೋಭಾವ ಹೊಗೆಯಾಡದಂತೆ ನೋಡಿಕೊಳ್ಳಿ. ದುರ್ಗಾಸ್ತುತಿಯಿಂದ ಕ್ಷೇಮವಿದೆ. ಶುಭಸಂಖ್ಯೆ: 4
ಮೀನ: ವಿಶೇಷ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗುವ ಕಾಲ ಇದಾಗಿದೆ. ಆ ಬಗ್ಗೆ ದೃಢ ಪ್ರಯತ್ನ ಮಾಡಿ. ಶುಭಸಂಖ್ಯೆ: 8