ಈ ರಾಶಿಯವರಿಗೆ ಇಂದು ಸ್ನೇಹಿತನ ಭೇಟಿಯಿಂದ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಳೆಯ ಸ್ನೇಹಿತರ ಪುನರ್ವಿುಲನ. ನ್ಯಾಯಾಲಯದ ಪ್ರಕರಣದಲ್ಲಿ ಜಯ. ಕಾರಣವಿಲ್ಲದ ವಿಷಯಗಳ ಬಗ್ಗೆ ಸಮಯ ವ್ಯರ್ಥ. ಶುಭಸಂಖ್ಯೆ: 2

ವೃಷಭ: ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುವುದು. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಸಾರ್ವಜನಿಕ ರಂಗದಲ್ಲಿ ಸನ್ಮಾನ. ಶುಭಸಂಖ್ಯೆ: 7

ಮಿಥುನ: ಪ್ರಮುಖ ನಿರ್ಧಾರದಲ್ಲಿ ತೊಂದರೆಯ ಸಾಧ್ಯತೆ. ಕಚೇರಿಯಲ್ಲಿ ಅಸಹನೆಯಿಂದ ವರ್ತಿಸಬೇಡಿ. ಹಿತಶತ್ರುಗಳಿಂದ ಅಪಪ್ರಚಾರ. ಶುಭಸಂಖ್ಯೆ: 6

ಕಟಕ: ಹೃದಯ ಸಂಬಂಧಿ ತೊಂದರೆಗಳು ಹೆಚ್ಚಬಹುದು. ಸಣ್ಣಪುಟ್ಟ ಕಾರಣಗಳಿಗೂ ಕೋಪಿಸಿಕೊಳ್ಳಬೇಡಿ. ಮಗಳ ಮದುವೆ ನಿಶ್ಚಯ. ಶುಭಸಂಖ್ಯೆ: 7

ಸಿಂಹ: ಧಾರ್ವಿುಕ ಚಟುವಟಿಕೆಯಲ್ಲಿ ಭಾಗವಹಿಸಿ. ಹಣದ ಅಪವ್ಯಯದ ಬಗ್ಗೆ ನಿಗಾ ಇರಲಿ. ನಿಮ್ಮ ಹಲವು ದಿನಗಳ ಪ್ರಯತ್ನ ಸಫಲ. ಶುಭಸಂಖ್ಯೆ: 8

ಕನ್ಯಾ: ಸುತ್ತಮುತ್ತಲಿನ ವಾತಾವರಣ ನಿಮ್ಮ ಧೈರ್ಯ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಶೇರು ಮಾರುಕಟ್ಟೆಯಲ್ಲಿ ವೈಯಕ್ತಿಕ ನಷ್ಟ. ಶುಭಸಂಖ್ಯೆ: 2

ತುಲಾ: ಒತ್ತಡವನ್ನು ಉಪೇಕ್ಷಿಸಬೇಡಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕಚೇರಿಯಲ್ಲಿ ತೊಂದರೆ. ಕಲಾವಿದರಿಗೆ ಪೋ›ತ್ಸಾಹ. ಶುಭಸಂಖ್ಯೆ: 1

ವೃಶ್ಚಿಕ: ಉನ್ನತ ವ್ಯಕ್ತಿಗಳ ಭೇಟಿ. ವ್ಯಾಪಾರಕ್ಕೆ ಬಂಡವಾಳ ತೊಡಗಿಸುವಿಕೆಯಲ್ಲಿ ಎಚ್ಚರವಾಗಿರಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 6

ಧನುಸ್ಸು: ಕಚೇರಿಯಲ್ಲಿ ಒತ್ತಡ ಮತ್ತು ಸಂದಿಗ್ಧತೆಯ ವಾತಾವರಣ. ಮಕ್ಕಳ ಬಗ್ಗೆ ಹೆಮ್ಮೆ. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ಪ್ರಾಪ್ತಿ. ಶುಭಸಂಖ್ಯೆ: 9

ಮಕರ: ಮುಂಗೋಪದಿಂದ ಹಾನಿ. ಕಟ್ಟಡ ಸಾಮಗ್ರಿಗಳ ಉದ್ದಿಮೆದಾರರಿಗೆ ಅಧಿಕ ಲಾಭ. ಅವಿವಾಹಿತರಿಗೆ ವಿವಾಹದ ಭರವಸೆ. ಶುಭಸಂಖ್ಯೆ: 5

ಕುಂಭ: ನೂತನ ದಂಪತಿಗಳಿಗೆ ಶುಭ ಸುದ್ದಿ. ಮನೆಯ ಪರಿಸ್ಥಿತಿಯಲ್ಲಿ ಸುಧಾರಣೆ. ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 6

ಮೀನ: ಸಭ್ಯ ವರ್ತನೆಯಿಂದ ಕಚೇರಿಯಲ್ಲಿ ಮೆಚ್ಚುಗೆ. ಸ್ನೇಹಿತನ ಭೇಟಿಯಿಂದ ಧನಲಾಭ. ಸಹೋದ್ಯೋಗಿಗಳೊಂದಿಗೆ ವಿಹಾರ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net