

ಮೇಷ: ದುರ್ಜನರ ಸಂಗಕ್ಕಿಂತ ಸಜ್ಜನರ
ಜತೆ ಜಗಳ ಲೇಸೆಂಬ ಮಾತು ತಪ್ಪಲ್ಲ.
ಆದರೆ ಸಜ್ಜನರ ಬಳಿ ವಿನಯವಿರಲಿ. ಶುಭಸಂಖ್ಯೆ: 2
ವೃಷಭ: ಅನಿರೀಕ್ಷಿತ ಘಟನೆಯಿಂದ ಮೊದಲು
ಗಾಬರಿಯಾದರೂ ಅಂತ್ಯದಲ್ಲಿ ಮಾತ್ರ
ಸಂತೋಷಕ್ಕೇ ಅವಕಾಶ ಸಿಗಲಿದೆ. ಶುಭಸಂಖ್ಯೆ: 8
ಮಿಥುನ: ರಾಜಕಾರಣಿಗಳಿಗೆ ಎಲ್ಲವೂ ವರ್ಚಸ್ಸು
ಹೆಚ್ಚಿಸುವ ಅವಕಾಶದಂತೆ ಕಾಣಿಸಬಹುದು.
ಪಿತೂರಿಯ ಬಗ್ಗೆ ಎಚ್ಚರ. ಶುಭಸಂಖ್ಯೆ: 6
ಕಟಕ: ಕೆಲವರು ನಿಮ್ಮ ವ್ಯವಹಾರವನ್ನು
ಮುಚ್ಚಿಸಲು ಪ್ರಯತ್ನಿಸಬಹುದು. ಕಾನೂನಿನ
ನೆರವನ್ನು ಪಡೆದರೆ ಉತ್ತಮ. ಶುಭಸಂಖ್ಯೆ: 4
ಸಿಂಹ: ವಿಘ್ನಸಂತೋಷಿಗಳು ಸಿಗುತ್ತಲೇ ಇರುತ್ತಾರೆ.
ಸಮಯಾವಧಾನದ ಮೂಲಕ ನಿಮ್ಮ
ರಕ್ಷಣೆಯನ್ನು ಮಾಡಿಕೊಳ್ಳಿ. ಶುಭಸಂಖ್ಯೆ: 1
ಕನ್ಯಾ: ಪ್ರೀತಿಯಿಂದ ಉಪಚರಿಸಲು ಹೋಗಿ
ಅಪಕಾರಿಗಳು ಗಂಟುಬೀಳಬಹುದು.
ಜಗದಂಬಿಕೆಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7
ತುಲಾ: ಆರೋಗ್ಯದ ಸಮಸ್ಯೆ ಕಾಡಬಹುದು.
ಅದನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಸ್ವೀಕರಿಸಿ.
ಕ್ರಿಯಾಶೀಲತೆ ವೃದ್ಧಿಸಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಬೆಟ್ಟಿಂಗ್ ಎಂದು ಮಾಯಾಜಿಂಕೆಯ
ಹಿಂದೆ ಬಿದ್ದಿದ್ದೀರಿ. ಇದರಿಂದ ನಿಶ್ಚಿತವಾಗಿಯೂ
ಧನನಷ್ಟ ಸಂಭವಿಸಲಿದೆ. ಶುಭಸಂಖ್ಯೆ: 3
ಧನುಸ್ಸು: ಸಾಹಿತ್ಯ ಕ್ಷೇತ್ರದವರಿಗೆ, ರಾಜಕಾರಣಿಗಳಿಗೆ
ಕಟು ವಿಮರ್ಶೆಗಳು ಎದುರಾಗುವ
ಸಾಧ್ಯತೆ ಹೆಚ್ಚು. ಜಾಗೃತರಾಗಿರಿ. ಶುಭಸಂಖ್ಯೆ: 9
ಮಕರ: ಏಳುಬೀಳುಗಳ ಮಧ್ಯೆ ಸಾಗುತ್ತ ಬಂದ
ನಿಮಗೆ ಹಲವಾರು ಆತ್ಮೀಯ ಸ್ನೇಹಿತರಿಂದ
ಬೆಂಬಲ ಲಭ್ಯವಾಗಲಿದೆ. ಶುಭಸಂಖ್ಯೆ: 2
ಕುಂಭ: ವಿವಾಹಾಕಾಂಕ್ಷಿಗಳಿಗೆ ಸಿದ್ಧಿಯ ದಿನ.
ಆಪ್ತರ ಬಳಿ ಪ್ರೀತಿಯನ್ನು ನಿವೇದಿಸಿಕೊಳ್ಳುವ
ಅವಕಾಶ ದೊರೆಯಲಿದೆ. ಶುಭಸಂಖ್ಯೆ: 8
ಮೀನ: ನಿಮ್ಮ ಸಂಕಟಗಳನ್ನು ಬೇಗನೆ
ಪರಿಹರಿಸುವುದು ಕಷ್ಟ. ತಜ್ಞರ ಬಳಿ ಮಾತನಾಡಿ
ಸಲಹೆ ಪಡೆದರೆ ಶ್ರೀರಕ್ಷೆಯಿದೆ. ಶುಭಸಂಖ್ಯೆ: 6