

ಮೇಷ: ಆದಾಯವು ನಿರೀಕ್ಷೆಯಷ್ಟಿರುತ್ತದೆ. ಕೆಲ ವಿಷಯದಲ್ಲಿ ಸಂಗಾತಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಸಮಾಧಾನಚಿತ್ತರಾಗಿರಿ. ಶುಭಸಂಖ್ಯೆ: 1
ವೃಷಭ: ಮಾತಿಗೆ ಮನ್ನಣೆ ದೊರೆಯುತ್ತದೆ. ಬುದ್ಧಿವಂತಿಕೆ ಯಿಂದ ನಡೆದುಕೊಳ್ಳುವಿರಿ. ಹಣದ ಸಮಸ್ಯೆ ಈ ದಿನ ಅಷ್ಟಾಗಿ ಇರುವುದಿಲ್ಲ. ಶುಭಸಂಖ್ಯೆ: 5
ಮಿಥುನ: ಮಿತ್ರ ವರ್ಗದವರಿಂದ ಅನುಕೂಲ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ. ಧನಾದಾಯವು ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಶುಭಸಂಖ್ಯೆ: 3
ಕಟಕ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ. ಶಾಂತವಾಗಿರಿ. ಸ್ಥಿರಾಸ್ತಿಯಿಂದ ಲಾಭವಿದೆ. ವ್ಯವಹಾರಗಳಲ್ಲಿ ಜವಾಬ್ದಾರಿಗಳು ಹೆಚ್ಚುತ್ತವೆ. ಶುಭಸಂಖ್ಯೆ: 5
ಸಿಂಹ: ಅಧಿಕ ವಿಲಾಸಿಯಾಗಿ ಜವಾಬ್ದಾರಿಗಳನ್ನು ಮರೆಯದಿರಿ. ಖರ್ಚುಗಳು ಹೆಚ್ಚಾಗಬಹುದು, ನಿಯಂತ್ರಿಸಿ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 7
ಕನ್ಯಾ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ ವಹಿಸಿ. ವಿದೇಶಿ ವ್ಯವಹಾರಸ್ಥರಿಗೆ ಸೌಲಭ್ಯಗಳು ದೊರೆಯುವವು. ಆತ್ಮಗೌರವ ಹೆಚ್ಚಾಗಿರುತ್ತದೆ. ಶುಭಸಂಖ್ಯೆ: 2
ತುಲಾ: ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಿದೆ. ನಡವಳಿಕೆಯಲ್ಲಿ ಕಠಿಣತೆ ಅಗತ್ಯ. ಶುಭಸಂಖ್ಯೆ: 8
ವೃಶ್ಚಿಕ: ಕೃಷಿಯಿಂದ ಲಾಭ. ವ್ಯವಹಾರದ ವಿಷಯದಲ್ಲಿ ಸಮಾಧಾನದಿಂದ ನಡೆದುಕೊಳ್ಳಿ. ತಾಯಿಯಿಂದ ಬೆಂಬಲ ದೊರೆಯುವುದು. ಶುಭಸಂಖ್ಯೆ: 4
ಧನುಸ್ಸು: ನೆಮ್ಮದಿ ಇರುತ್ತದೆ. ಕೆಲಸಗಳಲ್ಲಿ ಮೇಲುಗೈ ಸಾಧಿಸುವ ಯತ್ನ. ಮಕ್ಕಳ ವಿಚಾರದಲ್ಲಿ ಅಸಮಾಧಾನ. ಸಮಸ್ಯೆಗಳಿಗೆ ಪರಿಹಾರ. ಶುಭಸಂಖ್ಯೆ: 6
ಮಕರ: ಉಸಿರಾಟದ ತೊಂದರೆಯಾದೀತು, ಎಚ್ಚರ. ಅನಾರೋಗ್ಯಕ್ಕೆ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಿರಿ. ಗೌರವಾದಿಗಳು ಪ್ರಾಪ್ತಿ. ಶುಭಸಂಖ್ಯೆ: 9
ಕುಂಭ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ. ಸಂಗಾತಿಯಿಂದ ಸಹಾಯ ದೊರೆಯುತ್ತದೆ. ಶುಭಸಂಖ್ಯೆ: 2
ಮೀನ: ಆರೋಗ್ಯದ ಕಡೆ ಗಮನಹರಿಸುವುದು ತೀರ ಅಗತ್ಯ. ಉದ್ಯೋಗದಲ್ಲಿ ಏರಿಳಿತ ಕಡಿಮೆ. ಆಸ್ತಿ ವಿಚಾರದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ. ಶುಭಸಂಖ್ಯೆ: 2