ಈ ರಾಶಿಯವರಿಗಿಂದು ಗುಪ್ತ ಧನಾಗಮನ, ದೂರದ ವ್ಯಕ್ತಿಯಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾಟ ಮಂತ್ರ ತಂತ್ರದ ಭೀತಿ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ. ತಾಯಿಯೊಂದಿಗೆ ಶತ್ರುತ್ವ. ಶುಭಸಂಖ್ಯೆ: 9

ವೃಷಭ: ಧನಾಗಮ. ಭಾವನೆಗೆ ಪೆಟ್ಟು. ಹಿಂದಿನ ತಪ್ಪು ಕಾಡುತ್ತದೆ. ಕುಟುಂಬದೊಂದಿಗೆ ವಾಗ್ವಾದ ತಪ್ಪಿಸಿ. ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ: 1

ಮಿಥುನ: ಆರ್ಥಿಕ ಬೆಳವಣಿಗೆ. ನೆಮ್ಮದಿ ಭಂಗ. ಆಸ್ತಿ ಕಳೆದುಕೊಳ್ಳುವ ಭೀತಿ. ಆರೋಗ್ಯ ಸಮಸ್ಯೆಗಳು. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 9

ಕಟಕ: ಅಧಿಕ ಖರ್ಚು. ಸೋಲು ನಷ್ಟ ನಿರಾಸೆ. ಗುಪ್ತ ವಿಷಯಗಳಿಂದ ಬೇಸರ. ಬಂಧುಗಳು ದೂರ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 8

ಸಿಂಹ: ಪ್ರೀತಿಯಲ್ಲಿ ಆಘಾತ. ದುಶ್ಚಟದಿಂದ ತೊಂದರೆ. ಗುಪ್ತ ಧನಾಗಮನ. ದೂರದ ವ್ಯಕ್ತಿಯಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ಕನ್ಯಾ: ಸ್ವಯಂಕೃತ ಅಪರಾಧದಿಂದ ತೊಂದರೆ. ಮಿತ್ರರಿಂದ ಲಾಭ. ಉದ್ಯೋಗದಲ್ಲಿ ಪ್ರಶಂಸೆ. ದೂರ ಪ್ರದೇಶದಲ್ಲಿ ಅನುಕೂಲ. ಶುಭಸಂಖ್ಯೆ: 3

ತುಲಾ: ಬೇಸರ ಅನುಭವಿಸುವಿರಿ. ಆಸ್ತಿ ಸಮಸ್ಯೆ ಬಗೆಹರಿಯುವುದು. ಅಧಿಕ ಖರ್ಚು. ದೈವನಿಂದನೆ. ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 7

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್, ಪೊಲೀಸ್ ಠಾಣೆ ಅಲೆದಾಟ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಅನಿರೀಕ್ಷಿತ ಅವಕಾಶಗಳು. ಶುಭಸಂಖ್ಯೆ: 4

ಧನುಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ. ಪಾಲುದಾರಿಕೆ ಯಲ್ಲಿ ನಷ್ಟ. ಉದ್ಯೋಗ ಕಳೆದುಕೊಳ್ಳುವಿರಿ. ಅನಿರೀಕ್ಷಿತವಾಗಿ ನಷ್ಟ ನಿರಾಸೆ. ಶುಭಸಂಖ್ಯೆ: 6

ಮಕರ: ತೊಂದರೆ ಮತ್ತು ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಸಂಗಾತಿ ಶತ್ರು ಆದಾರು. ಅನಾರೋಗ್ಯ. ಆರ್ಥಿಕ ಸಂಕಷ್ಟ ಬರುವ ಸಾಧ್ಯತೆ. ಶುಭಸಂಖ್ಯೆ: 9

ಕುಂಭ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಆಕಸ್ಮಿಕ ಲಾಭ. ದಾಂಪತ್ಯದಲ್ಲಿ ಕಿರಿಕಿರಿ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ: 6

ಮೀನ: ಬೇಜವಾಬ್ದಾರಿತನ ಬೇಡ. ಪಾಲುದಾರಿಕೆಯಲ್ಲಿ ಹಿನ್ನಡೆ. ಸ್ಥಿರಾಸ್ತಿ ನಷ್ಟ. ಮಕ್ಕಳಿಂದ ಬಾಧೆ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net