ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭವಾಗಿ ಸಂತಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯವಹಾರದಲ್ಲಿ ಎಚ್ಚರದಿಂದಿರಿ. ಉನ್ನತ ಸ್ಥಾನ. ಹೇಳಿಕೆ ಮಾತನ್ನು ಕೇಳಬಾರದು. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 9

ವೃಷಭ: ಅಲ್ಪ ಕಾರ್ಯಸಿದ್ದಿ. ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಮನೆಯಲ್ಲಿ ಶುಭ ಕಾರ್ಯ. ದಿನಸಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:1

ಮಿಥುನ: ನಂಬಿಕೆದ್ರೋಹ. ದುರಭ್ಯಾಸಕ್ಕೆ ಹಣ ವ್ಯಯ. ಸ್ತ್ರೀಯರಿಗೆ ತೊಂದರೆ. ಮನಸ್ಸಿನಲ್ಲಿ ಗೊಂದಲ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 5

ಕಟಕ: ತೀರ್ಥಯಾತ್ರಾ ದರ್ಶನ ಮಾಡುವಿರಿ. ಗೆಳೆಯರಿಗಾಗಿ ಖರ್ಚು. ಮನೋವ್ಯಥೆ ಕಾಡಲಿದೆ. ಅಮೂಲ್ಯ ವಸ್ತುಗಳ ಕಳವು. ಶುಭಸಂಖ್ಯೆ: 4

ಸಿಂಹ: ಸ್ವಯಂಕೃತ ಅಪರಾಧದಿಂದ ತೊಂದರೆಯಾಗಲಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸುವಿರಿ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಗಾಗಿ ದೂರ ಪ್ರವಾಸ. ಸುಖ ಭೋಜನ. ವ್ಯಾಪಾರದಲ್ಲಿ ಅಲ್ಪ ಲಾಭ. ಅಪಘಾತವಾಗುವ ಸಂಭವ ಎಚ್ಚರ. ಶುಭಸಂಖ್ಯೆ: 6

ತುಲಾ: ಕುಟುಂಬದಲ್ಲಿ ಸಂತಸ. ಕಾರ್ಯಸಾಧನೆಯಿಂದ ನೆಮ್ಮದಿ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಮಿತ್ರರಿಂದ ಸಹಾಯ ದೊರೆಯುವುದು. ಶುಭಸಂಖ್ಯೆ: 3

ವೃಶ್ಚಿಕ: ಅನಗತ್ಯ ಅಲೆದಾಟ ಮಾಡಬೇಕಾಗುವುದು. ಹಿತಶತ್ರುಗಳಿಂದ ತೊಂದರೆ. ಆರೋಗ್ಯದಲ್ಲಿ ಏರುಪೇರು. ನಂಬಿಕೆ ದ್ರೋಹ. ಶುಭಸಂಖ್ಯೆ: 9

ಧನುಸ್ಸು: ಶ್ರಮಕ್ಕೆ ತಕ್ಕ ಫಲ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ದೂರ ಪ್ರಯಾಣ ಮಾಡುವಿರಿ, ವಾಹನ ಯೋಗ, ಸ್ತ್ರೀ ಲಾಭ, ಧನಲಾಭ. ಶುಭಸಂಖ್ಯೆ: 1

ಮಕರ: ಮನಸ್ಸಿಗೆ ಚಿಂತೆ. ಮಾತಿನ ಚಕಮಕಿ. ಕೆಲಸ ಕಾರ್ಯಗಳಲ್ಲಿ ವಿಘ್ನವಾಗಲಿದೆ. ಇಷ್ಟಾರ್ಥಸಿದ್ಧಿ, ಭೂಮಿ ಕೊಳ್ಳುವ ಯೋಗ. ಶುಭಸಂಖ್ಯೆ: 5

ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆಯಾಗಲಿದೆ. ಕೋರ್ಟ್ ಕೆಲಸಗಳಲ್ಲಿ ವಿಳಂಬವಾಗಲಿದೆ. ಆಪ್ತರಿಂದ ಸಹಾಯ ಸಿಗಲಿದೆ. ಶುಭಸಂಖ್ಯೆ: 7

ಮೀನ: ಆಕಸ್ಮಿಕ ಧನಲಾಭವಾಗಿ ಸಂತಸ. ಮಕ್ಕಳಿಂದ ನಿಂದನೆ. ಸಾಲ ವಿಮೋಚನೆ. ಶೀತ ಸಂಬಂಧಿ ರೋಗ ಕಾಡಲಿದೆ. ಮನಃಸ್ತಾಪ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net