ಈ ರಾಶಿಯವರಿಗಿಂದು ಅಧಿಕ ಲಾಭ ಸಾಧ್ಯತೆ, ಸಂಕಷ್ಟದಿಂದ ಮುಕ್ತಿಗೆ ಸುಸಂದರ್ಭ: ನಿತ್ಯಭವಿಷ್ಯ

Daily Horoscope
Published on

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸುಸಮಯ, ಆರ್ಥಿಕ ಸಂಕಷ್ಟ ಬಗೆಹರಿಯುವುದು. ಶುಭಸಂಖ್ಯೆ: 1

ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆ, ಆಕಸ್ಮಿಕ ಘಟನೆಗಳಿಂದ ನೆಮ್ಮದಿ ಭಂಗ. ಶುಭಸಂಖ್ಯೆ: 8

ಮಿಥುನ: ಅಧಿಕ ಧನವ್ಯಯ, ಅಧಿಕಾರಿಯಿಂದ ಅಥವಾ ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆ ಬಾಧಿಸುವುದು. ಶುಭಸಂಖ್ಯೆ: 5

ಕಟಕ: ಅಧಿಕ ಲಾಭ ಸಾಧ್ಯತೆ, ಸಂಕಷ್ಟದಿಂದ ಮುಕ್ತಿಗೆ ಸುಸಂದರ್ಭ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು ಉಂಟಾಗುವುದು. ಶುಭಸಂಖ್ಯೆ: 2

ಸಿಂಹ: ಉದ್ಯೋಗ ಲಾಭ, ಆರೋಗ್ಯದಲ್ಲಿನ ವ್ಯತ್ಯಾಸಗಳಿಂದ ವೃಥಾ ಖರ್ಚು, ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಶುಭಸಂಖ್ಯೆ: 3

ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ ನಿರೀಕ್ಷೆ, ಆತಂಕ ಮತ್ತು ನಿದ್ರಾಭಂಗ ಸಾಧ್ಯತೆ, ತಂದೆಯ ಮಿತ್ರರಿಂದ ಲಾಭ ಉಂಟಾಗುವುದು. ಶುಭಸಂಖ್ಯೆ: 7

ತುಲಾ: ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿಯೂ ಬರಬಹುದು. ಶುಭಸಂಖ್ಯೆ: 3

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ. ಶುಭಸಂಖ್ಯೆ: 7

ಧನುಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ ಮಾಡುವಿರಿ, ಸಾಲಗಾರರಿಂದ ತೊಂದರೆ ಆಗುವುದು, ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ. ಶುಭಸಂಖ್ಯೆ: 4

ಮಕರ: ಮಕ್ಕಳಿಂದ ಆಕಸ್ಮಿಕ ಅವಘಡಗಳು, ಪೊಲೀಸ್ ಸ್ಟೇಷನ್​ಗೆ ಅಲೆದಾಡುವ ಸ್ಥಿತಿ, ದುರಾಲೋಚನೆಗಳಲ್ಲಿ ವಿಹರಿಸುವಿರಿ. ಶುಭಸಂಖ್ಯೆ: 8

ಕುಂಭ: ಆಸ್ತಿ ಅಥವಾ ವಾಹನ ಮಾರಾಟ ಸಂಭವ, ಪ್ರಯಾಣದಲ್ಲಿ ವಸ್ತುಗಳ ಕಳವು, ಶತ್ರುಗಳು ಅಧಿಕವಾಗುವ ಸಾಧ್ಯತೆ. ಶುಭಸಂಖ್ಯೆ: 4

ಮೀನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ ಲಭಿಸುವುದು. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net