ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಅನಿರೀಕ್ಷಿತವಾಗಿ ಧನಲಾಭ

nity
Published on

ಮೇಷ: ನಿಮ್ಮ ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 8

ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಧನಾತ್ಮಕ ಚಿಂತನೆ ಮಾಡಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 9

ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಲಿದೆ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ. ಅಕ್ಕ ತಂಗಿಯರೊಂದಿಗೆ ಭೋಜನ. ಶುಭಸಂಖ್ಯೆ: 1

ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 2

ಸಿಂಹ: ಅನವಶ್ಯಕ ತಿರುಗಾಟ. ಸ್ವಂತ ಗ್ರಾಮಕ್ಕೆ ಭೇಟಿ. ಕೃಷಿಕರಿಗೆ ವಿಶೇಷ ಲಾಭವಾಗಲಿದೆ. ಭೂ ವಿವಾದಕ್ಕೆ ಅಂತ್ಯ. ಶುಭಸಂಖ್ಯೆ: 4

ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಸಂಜೆಯ ಹೊತ್ತಿಗೆ ಶುಭವಾರ್ತೆ. ಶುಭಸಂಖ್ಯೆ: 7

ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸ ಪೂರ್ಣ. ಸಂಗಾತಿಯೊಂದಿಗೆ ವಿರಸ. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 8

ವೃಶ್ಚಿಕ: ಮನೆ ಬದಲಾವಣೆ ಸಾಧ್ಯತೆ. ಭೂವಿವಾದದ ತೀರ್ಪ. ನಿರಾಸೆ. ಕುಟುಂಬದೊಂದಿಗೆ ಚರ್ಚೆ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 9

ಧನಸ್ಸು: ಕೆಲವೊಂದು ಘಟನೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಲಿವೆೆ. ಸಾರ್ವಜನಿಕವಾಗಿ ಅವಮಾನ. ಸ್ನೇಹಿತನಿಂದ ಸಮಾಧಾನ. ಶುಭಸಂಖ್ಯೆ: 6

ಮಕರ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಅಸಮಾಧಾನ. ಸ್ತ್ರೀಯರಿಂದ ಸಹಾಯ. ಶುಭಸಂಖ್ಯೆ: 6

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ದಿನ. ಪತ್ನಿಯೊಂದಿಗೆ ಧಾರ್ವಿುಕ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 5

ಮೀನ : ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಆರ್ಥಿಕ ವಿಚಾರದಲ್ಲಿ ಹಿರಿಯರ ಸಲಹೆ ತೆಗೆದುಕೊಳ್ಳಿ. ಮನೆ ಖರೀದಿ ನಿರ್ಧಾರ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net