

ಮೇಷ: ವಿಸ್ತಾರವಾದ ಅನುಭವ, ಕಾರ್ಯಕ್ಷಮತೆಗಳಿಂದ ಗೌರವಿಸಲ್ಪಡುವಿರಿ. ಆದರೆ ಕಿಡಿಗೇಡಿಗಳನ್ನು ದೂರವಿಟ್ಟರೆ ಒಳಿತಾಗಲಿದೆ. ಶುಭಸಂಖ್ಯೆ: 5
ವೃಷಭ: ಭಾವುಕವಾಗಿ ಪ್ರತಿಕ್ರಿಯಿಸುವುದೇ ತಪ್ಪಾಗಿಬಿಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಎಲ್ಲರನ್ನೂ ಒಮ್ಮೆಲೇ ನಂಬಿಕೊಂಡು ದುಃಖಪಡದಿರಿ. ಶುಭಸಂಖ್ಯೆ: 8
ಮಿಥುನ: ಸಮಸ್ಯೆಗಳ ಬಗ್ಗೆ ಬರೀ ವಿಚಾರದಲ್ಲೇ ಸಮಯ ಹಾಳುಮಾಡದಿರಿ. ಕಾರ್ಯಸಿದ್ಧಿಗೆ ಹೊಸದಾದ ದಾರಿಯೊಂದು ಲಭ್ಯವಾಗಲಿದೆ. ಶುಭಸಂಖ್ಯೆ: 1
ಕಟಕ: ಅಪರೂಪದ ಬಂಧುಬಾಂಧವರು, ಮಿತ್ರರು ಭೇಟಿಯಾಗಲಿದ್ದಾರೆ. ಅವರಿಂದ ಉತ್ತಮ ಸಲಹೆ ಸೂಚನೆಗಳು ಲಭ್ಯವಾಗಲಿವೆ. ಶುಭಸಂಖ್ಯೆ: 9
ಸಿಂಹ: ಕಿರಿಕಿರಿ ಉಂಟುಮಾಡುವಷ್ಟು ಪ್ರಯಾಣಗಳು ಎದುರಾಗಬಹುದು. ಸಹೋದ್ಯೋಗಿಗಳಿಗೂ ಜವಾಬ್ದಾರಿ ಕೊಟ್ಟು ನೋಡಿ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ಕಿರಿಕಿರಿ ಇದ್ದರೂ, ನಿಮ್ಮ ಪಾಲಿಗೆ ದೈವಬಲವಿದೆ. ಎದುರು ಕುಳ್ಳಿರಿಸಿಕೊಂಡು ಅವರಿಗೆ ಬುದ್ಧಿಮಾತು ಹೇಳಿ. ಶುಭಸಂಖ್ಯೆ: 6
ತುಲಾ: ಹಿರಿಯ ಮಹಿಳೆಯೊಬ್ಬರು ನಿಮಗೆಂದೇ ಒಳಿತಿನ ದಾರಿಯನ್ನು ತೋರಿಸಲಿದ್ದಾರೆ. ಅಂಬಾಭವಾನಿಯನ್ನು ಧ್ಯಾನಿಸಿ. ಶುಭಸಂಖ್ಯೆ: 4
ವೃಶ್ಚಿಕ: ಮನೆಯ ವ್ಯಾಜ್ಯಗಳು ಸಮಾಧಾನಕರವಾಗಿ ಬಗೆಹರಿಯುವ ಸಾಧ್ಯತೆ ಎದುರಾಗಲಿದೆ. ಸಿಕ್ಕಿದ ಅವಕಾಶಗಳನ್ನು ಬಿಡದಿರಿ. ಶುಭಸಂಖ್ಯೆ: 7
ಧನುಸ್ಸು: ಅನಿರೀಕ್ಷಿತವಾದ ಖರ್ಚುಗಳು ಒದಗಿಬರಲಿವೆ. ಆದರೂ ಸಾಲ ಪಡೆಯುವ ಆಲೋಚನೆ ಮಾಡದಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 2
ಮಕರ: ನಿಮ್ಮ ಸಮಸ್ಯೆಗೆ ನಾನಾ ಥರದ ಪರಿಹಾರಗಳು ನುಗ್ಗಿಬರಲಿವೆ. ಎಲ್ಲವನ್ನೂ ಒಂದೇ ಬಾರಿಗೆ ಪ್ರಯೋಗಿಸದಿದ್ದರೆ ಕ್ಷೇಮ. ಶುಭಸಂಖ್ಯೆ: 5
ಕುಂಭ: ವಿವಾಹಾಪೇಕ್ಷಿಗಳಿಗೆ ದೈವಸಹಾಯವು ಒದಗಲು ಅವಕಾಶವಿದೆ. ಶ್ರೀ ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಿ. ಶುಭಸಂಖ್ಯೆ: 8
ಮೀನ: ಬಾಳಸಂಗಾತಿಯ ಮಾತುಗಳನ್ನು ಕೇಳಿಸಿಕೊಂಡು ಹಾಗೆಯೇ ಮರೆತುಬಿಡದಿರಿ. ಅರಿತು ನಡೆದರೆ ಬಾಳಿನಲ್ಲಿ ಸಂತಸದ ಸವಿಯಿದೆ. ಶುಭಸಂಖ್ಯೆ: 1