

ಮೇಷ: ಕೇವಲ ಮನರಂಜನೆಗಾಗಿ ಧನಹಾನಿ ಆಗಲಿದೆ. ಸಹೋದರರಲ್ಲಿ ಸಣ್ಣ ಸಣ್ಣ ವಿಚಾರದಲ್ಲಿ ಅನರ್ಥಗಳು ನಡೆಯುವ ಸಂಭವವಿದೆ ಶುಭ ಸಂಖ್ಯೆ 5
ವೃಷಭ: ಕಾರ್ವಿುಕ ವರ್ಗದಲ್ಲಿ ಮೋಸ ಎಚ್ಚರ. ವೈಯಕ್ತಿಕ ವಿಚಾರ ಆಪ್ತರಲ್ಲಿ ಹೇಳಿಕೊಳ್ಳುವುದರಿಂದ ನೋವು ಕಡಿಮೆ. ಕೃಷಿ ಕೆಲಸದಲ್ಲಿ ಆಯಾಸ. ಶುಭ ಸಂಖ್ಯೆ 9
ಮಿಥುನ: ಮನೆಯ ಸಮಸ್ಯೆಗಳ ಪರಿಹಾರವಾಗುವುದು. ಕಾರ್ಖಾನೆಯಲ್ಲಿ ಅವಘಡ. ಖಾದ್ಯ ತೈಲ ವ್ಯಾಪಾರಿ ಗಳಿಗೆ ಲಾಭದ ನಿರೀಕ್ಷೆ ಇರುವುದು. ಶುಭ ಸಂಖ್ಯೆ 3
ಕಟಕ: ಸ್ವಂತ ಉದ್ಯೋಗದವರಿಗೆ ಹೆಚ್ಚಿನ ಪ್ರಗತಿ ಉಂಟಾಗುತ್ತದೆ. ಮನೆ ಹುಡುಕುವ ಕೆಲಸದಲ್ಲಿ ಸಹೋದ್ಯೋಗಿ ಯೊಬ್ಬರು ನೆರವಿಗೆ ಬರುವರು. ಶುಭ ಸಂಖ್ಯೆ 1
ಸಿಂಹ: ತೆಂಗಿನಕಾಯಿ ವ್ಯಾಪಾರಿಗಳಿಗೆ ಲಾಭ. ಈ ದಿನ ಮನಸ್ಸನ್ನು ಸ್ಥಿಮಿತ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. ಗಲಾಟೆ ಮಾಡಿಕೊಳ್ಳಬೇಡಿ. ಶುಭ ಸಂಖ್ಯೆ 7
ಕನ್ಯಾ: ಉದ್ಯೋಗ ಬದಲಾವಣೆ ವಿಚಮೇಲಧಿಕಾರಿಗಳ ಗಮನಕ್ಕೆ ತರುವುದು ಒಳ್ಳೆಯದು. ಹೆಚ್ಚಿನ ಕಲಿಕೆಗೆ ಸಮಯ ಮೀಸಲಿಡಿ. ಶುಭ ಸಂಖ್ಯೆ 3
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ ವಿದ್ಯಾರ್ಥಿಗಳಿಗೆ ನಿರಾಸೆ ಕಾಡಲಿದೆ. ಕಟ್ಟಡ ನಿರ್ಮಾಣ ಸಂಸ್ಥೆಯೊಂದಕ್ಕೆ ನೇಮಕಗೊಳ್ಳುವಿರಿ. ಶುಭ ಸಂಖ್ಯೆ 6
ವೃಶ್ಚಿಕ: ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಸರ್ಕಾರಿ ಗುತ್ತಿಗೆ ಕೆಲಸದ ವಿಪುಲ ಅವಕಾಶಗಳು ಒದಗಿ ಬರುವ ಸೂಚನೆ ಕಾಣುವಿರಿ ಶುಭ ಸಂಖ್ಯೆ 3
ಧನುಸ್ಸು: ಯಾವುದೇ ವಿಷಯದಲ್ಲಿ ಮುಂದುವರಿಯುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಿ ಟಿ.ವಿ, ಮೊಬೈಲ್ ಫೋನ್ಗಳ ಸಂಬಂಧಿತ ಕೆಲಸದಲ್ಲಿ ಆದಾಯ. ಶುಭ ಸಂಖ್ಯೆ 7
ಮಕರ: ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವಿರಿ. ಶುಭ ಸಂಖ್ಯೆ 4
ಕುಂಭ: ಯಶಸ್ಸು ಹೊಂದಲು ಹಲವು ಬಾರಿ ಪ್ರಯತ್ನ ಪಡಬೇಕಾದೀತು. ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು- ಪೇರು. ಶುಭ ಸಂಖ್ಯೆ 9
ಮೀನ: ಈ ದಿನ ವ್ಯವಹರಿಸುವಾಗ ಪ್ರದರ್ಶಿಸಿದ ಬುದ್ಧಿವಂತಿಕೆ ಲಾಭಕ್ಕೆ ಕಾರಣವಾಗುವುದು. ಜೀವನದಲ್ಲಿ ನಿಯಮವನ್ನು ರೂಢಿಸಿಕೊಳ್ಳಿ ಶುಭ ಸಂಖ್ಯೆ 6