ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ

Nitya-Bhavishya-vvani-1-2-1
Published on

ಮೇಷ: ಕೆಲವು ಜನರು ನಿಮ್ಮ ನಿರೀಕ್ಷೆಗಳನ್ನು ಹುಸಿ ಮಾಡುವುದಕ್ಕೆ ಕಾಯುತ್ತಿರುತ್ತಾರೆ. ಅಂಥವರಿಗೆ ಅಂಜದೆಯೇ ಮುಂದೆ ಸಾಗಿ. ಶುಭಸಂಖ್ಯೆ: 6

ವೃಷಭ: ಮನೆಯ ಸದಸ್ಯರಿಂದ ಒಳಿತಾಗಲಿದೆ. ಅವರ ಬಗೆಗೆ ಅಭಿಮಾನಪಡುವಂತಹ ಪವಾಡ ಕೂಡ ಜರುಗಲಿದೆ. ಶುಭಸಂಖ್ಯೆ: 2

ಮಿಥುನ: ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡರೆ ಮಾತ್ರವೇ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಕಾಳಜಿ ಇರಲಿ. ಶುಭಸಂಖ್ಯೆ: 8

ಕಟಕ: ಕುಲದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಿ. ಲಾಭದ ಕುರಿತಾಗಿ ಅನೇಕ ಹೊಳಹುಗಳು ನಿಮಗೆ ಲಭ್ಯವಾಗಲಿವೆ. ಶುಭಸಂಖ್ಯೆ: 1

ಸಿಂಹ: ಅನೇಕ ಬಗೆಯ ಜನರನ್ನು ಅನಿವಾರ್ಯವಾಗಿ ಭೇಟಿ ಮಾಡಬೇಕಾಗುತ್ತದೆ. ಕಷ್ಟವಾದರೂ ಕೆಲಸ ಮುಂದುವರಿಸಿ. ಶುಭಸಂಖ್ಯೆ: 7

ಕನ್ಯಾ: ಕಳೆದ ದಿನಗಳ ಚಿಂತೆಯನ್ನು ಹೊತ್ತುಕೊಳ್ಳದೆ ಈ ದಿನದ ವಿದ್ಯಮಾನಗಳಿಗೆ ತಕ್ಕಂತೆ ಸ್ಪಂದಿಸಿದರೆ ಒಳಿತೇ ಆಗಲಿದೆ. ಶುಭಸಂಖ್ಯೆ: 3

ತುಲಾ: ಧೈರ್ಯದಿಂದ ಮುನ್ನುಗ್ಗುವ ಮೂಲಕ ಅನೇಕ ವಿಷಯಗಳಲ್ಲಿ ಬಲವಾದಂತಹ ಹಿಡಿತವನ್ನು ಸಾಧಿಸಲಿದ್ದೀರಿ. ಶುಭಸಂಖ್ಯೆ: 5

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆದ್ದರಿಂದ ಯೋಗ, ಧ್ಯಾನಾಭ್ಯಾಸಗಳಲ್ಲಿ ತೊಡಗಿಸಿಕೊಂಡರೆ ಉತ್ತಮ. ಶುಭಸಂಖ್ಯೆ: 9

ಧನುಸ್ಸು: ಮಾನಸಿಕವಾಗಿ ಕಿರುಕುಳ ನೀಡುವಂತಹ ಜನರಿಂದ ದೂರವೇ ಇರಿ. ಅದರಲ್ಲಿ ನೀವು ಪರಿಣತರೇ ಆಗಿದ್ದೀರಿ. ಶುಭಸಂಖ್ಯೆ: 4

ಮಕರ: ಅಸಹಾಯಕ ಪರಿಸ್ಥಿತಿ ಎದುರಿಸಬೇಕಾದ ಸಂಭವ ಹೆಚ್ಚು. ಆದರೆ ವ್ಯವಧಾನವನ್ನು ಖಂಡಿತ ಕಳೆದುಕೊಳ್ಳದಿರಿ. ಶುಭಸಂಖ್ಯೆ: 5

ಕುಂಭ: ತಂದೆ-ತಾಯಿಯ ಪ್ರಯತ್ನಗಳಿಂದ ನಿಮ್ಮ ಪಾಲಿಗೆ ಅನೇಕ ರೀತಿಯಲ್ಲಿ ಒಳಿತುಗಳಾಗಲು ಸಾಧ್ಯವಿದೆ. ಶುಭಸಂಖ್ಯೆ: 9

ಮೀನ: ಹಣದ ಅಪವ್ಯಯವನ್ನು ಬಿಟ್ಟುಬಿಡಲು ಪ್ರಯತ್ನಿಸಿ. ಸದ್ಯ ಆರ್ಥಿಕ ಸ್ಥಿರತೆಗೆ ಇದರ ಹೊರತಾಗಿ ಬೇರೆ ದಾರಿ ಇಲ್ಲ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net