ಈ ರಾಶಿಯವರಿಗೆ ಇಂದು ತುಂಬ ಆಯಾಸವಾಗಲಿದೆ...ಖರ್ಚು ಕೂಡ ಹೆಚ್ಚು

Nitya-Bhavishya-vvani-1-2-1
Published on

ಮೇಷ: ಕರಿದ ಪದಾರ್ಥದ ಪ್ರಭಾವವನ್ನು ಅನುಭವಿಸುವಿರಿ. ಕೆಲವರಿಗೆ ರಜೆಯ ನೆಮ್ಮದಿ ಸಿಗದಷ್ಟು ಕೆಲಸಗಳಿವೆ. ಅದೃಷ್ಟಸಂಖ್ಯೆ: 2

ವೃಷಭ: ಹೊಸ ವಾತಾವರಣ, ಪರಿಚಯ, ಮಿತ್ರರು ಸಿಗುತ್ತಾರೆ. ಆದರೆ ಅವರೊಂದಿಗೆ ಆರ್ಥಿಕ ವ್ಯವಹಾರ ಬೇಡ. ಅದೃಷ್ಟಸಂಖ್ಯೆ: 4

ಮಿಥುನ:ಪ್ರೀತಿ ಪ್ರೇಮಗಳೆಲ್ಲ ಖರ್ಚಿನ ವಿಚಾರ ಎಂದು ಗಾಢವಾಗಿ ಅನಿಸಬಹುದು. ಆದರೂ ಮೋಹ ಬಿಡದು. ಅದೃಷ್ಟಸಂಖ್ಯೆ: 1

ಕಟಕ:ದೂರಪ್ರಯಾಣ, ತೀರ್ಥಕ್ಷೇತ್ರ ದರ್ಶನ ಯೋಗ ಬರಬಹುದು. ಮೈಕೈ ನೋವು ಕೂಡ ಜಾಸ್ತಿಯಾದೀತು. ಅದೃಷ್ಟಸಂಖ್ಯೆ: 3

ಸಿಂಹ: ಕೈಲಾಗದೆ ಮೈ ಪರಚಿಕೊಂಡ ಗಾದೆ ನೆನಪಾಗುತ್ತದೆ. ಒಬ್ಬರ ಬಗ್ಗೆ ಸಿಟ್ಟು ಬಂದರೂ ಏನೂ ಮಾಡಲಾಗದು. ಅದೃಷ್ಟಸಂಖ್ಯೆ: 9

ಕನ್ಯಾ:ಅನಿವಾರ್ಯ ಕಾರಣಗಳಿಂದ ಉತ್ತಮ ಅವಕಾಶ ಕೈ ತಪ್ಪಬಹುದು. ಅದನ್ನು ಪುನಃ ಪಡೆಯಲು ಪ್ರಯತ್ನಿಸಿ. ಅದೃಷ್ಟಸಂಖ್ಯೆ: 2

ತುಲಾ:ನಿಮ್ಮ ಕಷ್ಟದ ಸಮಯದಲ್ಲಿ ಬರದ ಸ್ನೇಹಿತ ನಿಮ್ಮ ಮುಂದೆ ಸಹಾಯ ಯಾಚಿಸುತ್ತ ನಿಲ್ಲುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 3

ವೃಶ್ಚಿಕ:ಒಂದಿಷ್ಟು ಸಂತಸ, ಹೇಳಿಕೊಳ್ಳಲು ಆಗದ ದುಃಖ ಎರಡೂ ಇರುತ್ತದೆ. ಆಯಾಸ, ಖರ್ಚುಗಳೂ ಇರಲಿವೆ. ಅದೃಷ್ಟಸಂಖ್ಯೆ: 7

ಧನಸ್ಸು: ನಿಮ್ಮ ಸಮಸ್ಯೆಯ ಬಗ್ಗೆ ಏನೇನೂ ತಿಳಿಯದ ಜನರಿಂದ ದಾನ ಮಾಡಿ ಎಂಬ ಒತ್ತಾಯ ಎದುರಾಗಲಿದೆ. ಅದೃಷ್ಟಸಂಖ್ಯೆ: 2

ಮಕರ: ಮುಜುಗರಪಟ್ಟು ಅವಕಾಶವೊಂದನ್ನು ಕಳೆದುಕೊಳ್ಳುತ್ತೀರಿ. ಕೆಲವು ವ್ಯಕ್ತಿಗಳನ್ನು ಮತ್ತೆ ನೋಡಬೇಕಲ್ಲ ಎನಿಸಲಿದೆ. ಅದೃಷ್ಟಸಂಖ್ಯೆ: 9

ಕುಂಭ:ತಡವಾದರೂ ಅಂದುಕೊಂಡ ಒಳ್ಳೆಯ ಕೆಲಸ ಮುಗಿಸುತ್ತೀರಿ. ಒಂದು ಥರದ ಸಮಾಧಾನವೂ ಸಿಗುತ್ತದೆ. ಅದೃಷ್ಟಸಂಖ್ಯೆ: 6

ಮೀನ: ಎಷ್ಟೇ ಸಿಟ್ಟು ಬಂದರೂ ಅವಾಚ್ಯ ಶಬ್ದ ಪ್ರಯೋಗಿಸದಿರಿ. ನೀರು ಹೆಚ್ಚಾಗಿರುವ ಜಾಗದಲ್ಲಿ ಓಡಾಡದಿರಿ. ಅದೃಷ್ಟಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net