

ಮೇಷ: ಇತರರ ಸಂತಸಕ್ಕೆ ನೀವು ತ್ಯಾಗ ಮಾಡುತ್ತೀರಿ. ಅದೇ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹಸಿದವರಿಗೆ ಅನ್ನ ಕೊಡಿಸಿ. ಅದೃಷ್ಟಸಂಖ್ಯೆ: 7
ವೃಷಭ: ನಿಮ್ಮ ಮಾತುಗಳು ಮರೆಯಲಾರದ ಗಾಯ ಉಂಟುಮಾಡುತ್ತವೆ. ಅಂಥ ಮಾತಾಡುವ ಮುನ್ನ ತುಸು ಆಲೋಚಿಸಿ. ಅದೃಷ್ಟಸಂಖ್ಯೆ: 5
ಮಿಥುನ: ನಿರೀಕ್ಷಿಸದ ಅನಿರೀಕ್ಷಿತ ಬದಲಾವಣೆ ನಿಮ್ಮನ್ನು ಕಾಡುತ್ತದೆ. ಆದರೆ ಮೌನ ಹಾಗೂ ತಾಳ್ಮೆಗಳೇ ನಿಮ್ಮನ್ನು ಗೆಲ್ಲಿಸುತ್ತವೆ. ಅದೃಷ್ಟಸಂಖ್ಯೆ: 9
ಕಟಕ: ನಿಮಗೆ ಸ್ವಾತಂತ್ರ್ಯ ಹೆಚ್ಚುತ್ತಿದೆ ಎನಿಸಿ ಸ್ನೇಹಿತವರ್ಗದವರು ನಿಮ್ಮನ್ನು ತುಳಿಯುವ ಕಾರ್ಯ ನಡೆಸಬಹುದು. ಅದೃಷ್ಟಸಂಖ್ಯೆ: 1
ಸಿಂಹ: ಮಧ್ಯೆ ನಿಂತುಹೋಗಿದ್ದ ಕೆಲಸಕಾರ್ಯಗಳು ಸಲೀಸಾಗಿ ನೆರವೇರುತ್ತವೆ. ದೇಗುಲಕ್ಕೆ ದಾನವಾಗಿ ಎಳ್ಳೆಣ್ಣೆ ನೀಡಿ. ಅದೃಷ್ಟಸಂಖ್ಯೆ: 3
ಕನ್ಯಾ: ದೂರಪ್ರಯಾಣ ಹಾಗೂ ದೈಹಿಕ ಶ್ರಮ ಹೆಚ್ಚು ಕಾಡುತ್ತದೆ. ನಿಮ್ಮ ಆರೋಗ್ಯದತ್ತ ಕೂಡ ಗಮನ ಇರಲಿ. ಅದೃಷ್ಟಸಂಖ್ಯೆ: 6
ತುಲಾ: ಆಶ್ಚರ್ಯಪಡುವ ರೀತಿಯಲ್ಲಿ ಶತ್ರುಗಳು ಸಹಾಯ ಮಾಡುತ್ತಾರೆ. ಅದರ ಹಿಂದಿನ ಗೂಡಾರ್ಥ ತಿಳಿಯದು. ಅದೃಷ್ಟಸಂಖ್ಯೆ: 7
ವೃಶ್ಚಿಕ: ಗೆಳೆಯರ ಜತೆ ಸಂತಸದ ಕ್ಷಣ ಕಳೆಯುವಿರಿ. ಮನರಂಜನೆಗಷ್ಟೇ ಆದ್ಯತೆ ಕೊಡಬೇಡಿ. ಗಣಪತಿಗೆ ಗರಿಕೆ ಅರ್ಪಿಸಿ. ಅದೃಷ್ಟಸಂಖ್ಯೆ: 2
ಧನಸ್ಸು: ಸುಳ್ಳು ಹೇಳಬೇಕಾಗಬಹುದು. ಹೇಳಿದರೆ ನಿಮ್ಮ ಇಷ್ಟು ದಿನಗಳ ಶ್ರಮ ವ್ಯರ್ಥ ಆದೀತು. ಇದು ಪರೀಕ್ಷಾಕಾಲ. ಅದೃಷ್ಟಸಂಖ್ಯೆ: 4
ಮಕರ: ಹೊಸ ಗೆಳೆತನದ ಸಾಧ್ಯತೆ. ಓಡಾಟ ಹೆಚ್ಚು. ಹೊಸ ವಸ್ತ್ರ ಖರೀದಿ ಯೋಗ. ಖರ್ಚುಗಳು ಮಾತ್ರ ಜಾಸ್ತಿ. ಅದೃಷ್ಟಸಂಖ್ಯೆ: 5
ಕುಂಭ: ಅರ್ಥವಾಗದ ವಿಚಾರಗಳತ್ತ ಗಮನ ಕೊಟ್ಟು ತೊಳಲಾಡುತ್ತೀರಿ. ಬಿಳಿಯ ಬಣ್ಣದ ವಸ್ತ್ರಧಾರಣೆ ಉತ್ತಮ. ಅದೃಷ್ಟಸಂಖ್ಯೆ: 9
ಮೀನ: ಕೈಯಲ್ಲಿ ಹಣ ಓಡಾಡುತ್ತದೆ. ವೃಥಾ ಖರ್ಚು ಬೇಡ. ಒಂದು ಮುಷ್ಟಿ ಉಪ್ಪು ನಿವಾಳಿಸಿ ಕೆಲಸಕ್ಕೆ ಹೋಗಿ. ಅದೃಷ್ಟಸಂಖ್ಯೆ: 2