

ಮೇಷ: ಇಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಪ್ರಯಾಣಕ್ಕೆ ಒಳ್ಳೆಯ ದಿನ ಅಲ್ಲ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 9
ವೃಷಭ: ಸಹೋದ್ಯೋಗಿಗಳಿಂದ ನಿಮ್ಮ ಕೆಲಸದ ಪ್ರಶಂಸೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ವಿಶೇಷ ಗಳಿಕೆ. ಭೂಮಿಯಿಂದ ಅಧಿಕ ಲಾಭ. ಶುಭಸಂಖ್ಯೆ: 6
ಮಿಥುನ: ರಾಜಕೀಯ ವಿಷಯಗಳಲ್ಲಿ ಆಸಕ್ತಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕಚೇರಿಯಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ: 1
ಕಟಕ: ಕೆಲಸದಲ್ಲಿ ಒತ್ತಡವು ಕಂಡುಬರುವುದು. ಆರ್ಥಿಕ ಮಿತವ್ಯಯವನ್ನು ಪಾಲಿಸಿ. ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ಶುಭಸಂಖ್ಯೆ: 3
ಸಿಂಹ: ಸರ್ಕಾರಿ ಕಚೇರಿಗಳಲ್ಲಿ ಕಾರ್ಯಸಿದ್ಧಿ. ಉನ್ನತ ಸ್ಥಾನವನ್ನು ಹೊಂದುವ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಶುಭಸಂಖ್ಯೆ: 1
ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಫಲಪ್ರಾಪ್ತಿ. ಆಲಸ್ಯದಿಂದ ದೂರವಿರುವುದು ಉತ್ತಮ. ಹಿರಿಯರ ಮಾರ್ಗದರ್ಶನದಿಂದ ಪ್ರಗತಿ. ಶುಭಸಂಖ್ಯೆ: 6
ತುಲಾ: ತಂದೆ-ತಾಯಿ ಸಹೋದರಿಯರಿಂದ ಸಂತೋಷ ಪ್ರಾಪ್ತಿ. ಕೌಟುಂಬಿಕವಾಗಿ ಎಲ್ಲ ವಿಧದಲ್ಲಿ ನೆಮ್ಮದಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 3
ವೃಶ್ಚಿಕ: ಸಹೋದ್ಯೋಗಿಗಳಿಂದ, ಆತ್ಮೀಯರಿಂದ ಸೂಕ್ತ ಸಲಹೆ. ಆರೋಗ್ಯ ಸ್ಥಿತಿ ಉತ್ತಮ. ಗೃಹೋಪಯೋಗಿ ಸಾಮಗ್ರಿ ಖರೀದಿ. ಶುಭಸಂಖ್ಯೆ: 4
ಧನುಸ್ಸು: ಕೋರ್ಟು-ಕಚೇರಿ ಕಲಹಗಳಲ್ಲಿ ಜಯ ಪ್ರಾಪ್ತಿ. ಕೃಷಿರಂಗದಲ್ಲಿ ಇರುವವರಿಗೆ ಉತ್ತಮ ಲಾಭ. ಆರ್ಥಿಕ ಉನ್ನತಿ ಕಾಣುವಿರಿ. ಶುಭಸಂಖ್ಯೆ: 5
ಮಕರ: ವಾಹನ ಮಾರಾಟಗಾರರಿಗೆ ಲಾಭ. ಷೇರು ವ್ಯವಹಾರದಲ್ಲಿ ಉತ್ತಮ ಅನುಭವ ಪಡೆಯುವಿರಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 7
ಕುಂಭ: ಕಲಾವಿದರಿಗೆ ಪುರಸ್ಕಾರ. ಆರ್ಥಿಕವಾಗಿ ಬಲಗೊಳ್ಳುವಿರಿ. ಸಾಂಸಾರಿಕ ಸಂತೋಷ. ನಿಮ್ಮ ಕೆಲಸಗಳಿಗೆ ಹಿರಿಯರ ಪ್ರಶಂಸೆ. ಶುಭಸಂಖ್ಯೆ: 6
ಮೀನ: ಮಧ್ಯವರ್ತಿಗಳಿಗೆ ಅಧಿಕ ಲಾಭ. ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಮನಸ್ತಾಪ. ಮಗನ ಮದುವೆ ನಿಶ್ಚಯ ಸಾಧ್ಯತೆ. ಶುಭಸಂಖ್ಯೆ: 9