

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಮನಸ್ಸಿಗೆ ಅಸಮಾಧಾನ. ಶುಭಸಂಖ್ಯೆ: 7
ವೃಷಭ: ವಿದ್ಯಾರ್ಥಿಗಳಿಗೆ ವಿಶೇಷ ದಿನ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಕುಟುಂಬದ ಉನ್ನತಿಯ ಸಂಬಂಧ ಯೋಚನೆ. ಶುಭಸಂಖ್ಯೆ: 7
ಮಿಥುನ: ತಾಯಿಯಿಂದ ಆರ್ಥಿಕ ಸಹಾಯ. ಭೂಮಿ, ವಾಹನದಿಂದ ಧನಾಗಮ. ವಿದ್ಯಾರ್ಥಿಗಳಿಗೆ ಅಡೆತಡೆ. ಪ್ರೇಮ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 1
ಕಟಕ: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ. ಕಲಾವಿದರಿಗೆ ಅನುಕೂಲದ ವಾತಾವರಣ. ಲೋಹದ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 4
ಸಿಂಹ: ನಿಮ್ಮ ಮರೆವಿನಿಂದ ಪ್ರಮುಖ ವಿಷಯದಲ್ಲಿ ಸೋಲು. ಸಾಲದ ಚಿಂತೆ ಹಾಗೂ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 2
ಕನ್ಯಾ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಸಾರ್ವಜನಿಕ ರಂಗದಲ್ಲಿರುವವರಿಗೆ ಮಾನಸನ್ಮಾನ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 6
ತುಲಾ: ಗಾಯಕರಿಗೆ ಅನುಕೂಲ. ಪ್ರತಿಭಾನ್ವಿತರಿಗೆ ಆಕಸ್ಮಿಕ ಅವಕಾಶ ಪ್ರಾಪ್ತಿ. ಸ್ಥಿರಾಸ್ತಿ ಸಮಸ್ಯೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 9
ವೃಶ್ಚಿಕ: ತಂದೆಯಿಂದ ಸೂಕ್ತ ಮಾರ್ಗದರ್ಶನ. ಮಿತ್ರರಿಂದ ಅನುಕೂಲ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಂಭವ. ಶುಭಸಂಖ್ಯೆ: 4
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಲಹ. ಗೃಹ ನಿರ್ವಣಕ್ಕೆ ಹಣಕಾಸಿನ ನೆರವು ಪ್ರಾಪ್ತಿ. ಕುಟುಂಬ ನಿರ್ವಹಣೆಗೆ ಸಾಲ ಸೌಲಭ್ಯ. ಶುಭಸಂಖ್ಯೆ: 6
ಮಕರ: ಮಿತ್ರರಿಂದ ಅನನುಕೂಲ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಅಧಿಕಾರ ಪ್ರಾಪ್ತಿ ಸಾಧ್ಯತೆ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ: 6
ಕುಂಭ: ವ್ಯಾಪಾರಸ್ಥರಿಗೆ ಹಿನ್ನಡೆ. ಸಾಲಗಾರರಿಂದ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 5
ಮೀನ: ಮಗನಿಂದ ಅನುಕೂಲ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ಸಂತಾನ ಅಪೇಕ್ಷಿತರಿಗೆ ಸಿಹಿಸುದ್ದಿ. ಸಹೋದ್ಯೋಗಿಗಳಿಂದ ಸಹಕಾರ. ಶುಭಸಂಖ್ಯೆ: 3