ಈ ರಾಶಿಯವರನ್ನು ಅಲೌಕಿಕ ಶಕ್ತಿಯೊಂದು ಪ್ರಸಿದ್ಧಿಯತ್ತ ಕರೆದೊಯ್ಯಲಿದೆ: ನಿತ್ಯ ಭವಿಷ್ಯ

Nithya Bhavishya vvani
Published on

ಮೇಷ: ಜಾಣತನದಿಂದಲೇ ಗೆಲುವು ಸಾಧಿಸಬೇಕೆಂದು ನಿರ್ಧರಿಸಿದ್ದೀರಿ. ಮನದೊಳಗಿನ ಮಾತುಗಳೇ ನಿಮಗೆ ದಾರಿ ತೋರಿಸಲಿವೆ. ಶುಭಸಂಖ್ಯೆ: 4

ವೃಷಭ: ಪ್ರಯತ್ನಿಸಿದಲ್ಲೆಲ್ಲ ಸೋಲುತ್ತಿರುವೆ ಎಂಬ ಭಯದಲ್ಲಿದ್ದೀರಿ. ಲಕ್ಷ್ಮೀನೃಸಿಂಹನನ್ನು ಸ್ತುತಿಸಿ. ಹೊಸ ತಂತ್ರದಿಂದ ಜಯವಿದೆ. ಶುಭಸಂಖ್ಯೆ: 2

ಮಿಥುನ: ವೃಥಾ ಸಿಟ್ಟಾಗುತ್ತಿದ್ದೀರಿ. ಇದರಿಂದ ನಿಮ್ಮನ್ನು ದ್ವೇಷಿಸುವವರ ಗುಂಪು ದೊಡ್ಡದೇ ಆದೀತು. ನಗುನಗುತ್ತಿರಲು ಪ್ರಯತ್ನಿಸಿ. ಶುಭಸಂಖ್ಯೆ: 6

ಕಟಕ: ದತ್ತಾತ್ರೇಯನ ಆರಾಧನೆ ಮುಂದುವರಿಸಿ. ಮನೆಯೊಳಗಿನ ಭಿನ್ನಾಭಿಪ್ರಾಯಗಳನ್ನು ಇದರಿಂದ ನಿಯಂತ್ರಿಸಬಹುದು. ಶುಭಸಂಖ್ಯೆ: 7

ಸಿಂಹ: ನೀರಿಗೆ ಸಂಬಂಧಿಸಿದ ತೊಂದರೆ ಕಾಡಬಹುದು. ಆದಷ್ಟು ಬೇಗ ತಜ್ಞ ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆದರೆ ಒಳಿತಾಗಲಿದೆ. ಶುಭಸಂಖ್ಯೆ: 3

ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ವಿಚಾರವನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಹಲವು ದಿನಗಳ ಕಾಲದ ಸಿಟ್ಟು ಕಟ್ಟೆ ಒಡೆದೀತು. ಎಚ್ಚರ. ಶುಭಸಂಖ್ಯೆ: 5

ತುಲಾ: ಅಲೌಕಿಕ ಶಕ್ತಿಯೊಂದು ನಿಮ್ಮನ್ನು ಪ್ರಸಿದ್ಧಿಯತ್ತ ಕರೆದೊಯ್ಯಲಿದೆ. ಆಲಸ್ಯವನ್ನು ಬಿಟ್ಟು ಸ್ವಲ್ಪ ಕ್ರಿಯಾಶೀಲರಾದರೆ ಶುಭವಿದೆ. ಶುಭಸಂಖ್ಯೆ: 9

ವೃಶ್ಚಿಕ: ಇಷ್ಟದೇವರ ಆರಾಧನೆಯನ್ನು ಬಿಡಲಾರಿರಿ. ಹೀಗಾಗಿ ದೇವರೂ ನಿಮ್ಮ ಕೈಬಿಡಲಾರ. ಉತ್ಸಾಹದಿಂದ ಲಾಭವಿದೆ. ಶುಭಸಂಖ್ಯೆ: 1

ಧನುಸ್ಸು: ದೂರದ ಬಂಧುಗಳ ಅನಿರೀಕ್ಷಿತ ಭೇಟಿ ಸಾಧ್ಯ. ಮೃದು ಮಾತಿನಿಂದ ಅವರನ್ನು ಒಲಿಸಿದರೆ ಕಷ್ಟ ದೂರವಾಗಲಿದೆ. ಶುಭಸಂಖ್ಯೆ: 8

ಮಕರ: ನಿರಂತರವಾದ ಪರಿಶ್ರಮ, ಒತ್ತಡಗಳಿಂದ ಹೊರಬರುವ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚು ಪ್ರಯತ್ನ ಮಾಡಿ. ಶುಭಸಂಖ್ಯೆ: 4

ಕುಂಭ: ವಿವೇಕವೇ ಮನುಷ್ಯತ್ವದ ಮುಖ್ಯವಾದ ಆಧಾರಸ್ತಂಭ ಎಂದು ನಂಬಿದ್ದೀರಿ. ಈ ನಂಬಿಕೆಗೆ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 2

ಮೀನ: ಖರ್ಚು, ವೆಚ್ಚಗಳಿಗೆ ಮಿತಿ ಹಾಕಲು ಯೋಚನೆ ಮಾಡುತ್ತಿದ್ದೀರಿ. ಕುಲದೇವತೆಯ ಆರಾಧನೆ ಮಾಡಿ. ಯಶಸ್ಸು ಸಾಧ್ಯವಿದೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net