ಈ ರಾಶಿಯವರಿಗಿಂದು ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ನಷ್ಟ ಉಂಟಾಗಬಹುದು. ಮಾನಸಿಕ ಒತ್ತಡ. ಶತ್ರು ಬಾಧೆ ಮತ್ತು ಸಾಲಬಾಧೆ. ಶುಭಸಂಖ್ಯೆ: 5

ವೃಷಭ: ದಾಂಪತ್ಯದಲ್ಲಿ ಕಲಹವಾದೀತು, ಸಹನೆಯಿಂದ ವರ್ತಿಸಿ. ಮಕ್ಕಳಿಂದ ಅನುಕೂಲವಿದೆ. ಆರ್ಥಿಕ ಅಭಿವೃದ್ಧಿಯಾಗಿ ಸಮಾಧಾನ. ಶುಭಸಂಖ್ಯೆ: 9

ಮಿಥುನ: ಅನಾರೋಗ್ಯ ಸಮಸ್ಯೆ ಕಾಡಲಿದೆ. ಸ್ಥಿರಾಸ್ತಿಯಿಂದ ಅಧಿಕ ಲಾಭ. ಸಾಲಗಾರರೊಂದಿಗೆ ಮನಸ್ತಾಪ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 3

ಕಟಕ: ಉದ್ಯೋಗದಲ್ಲಿ ಪ್ರಗತಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರಲ್ಲಿ ಸಲಹೆ ಪಡೆಯುವುದು ಉತ್ತಮ. ಬುದ್ಧಿ ಚಂಚಲತೆ. ಶುಭಸಂಖ್ಯೆ: 9

ಸಿಂಹ: ತಾಯಿಯೊಂದಿಗಿನ ಮನಸ್ತಾಪವನ್ನು ನಿವಾರಿಸಿ ಕೊಳ್ಳಿ. ಅನಿರೀಕ್ಷಿತ ಆಪತ್ತು. ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿವಾದ. ಶುಭಸಂಖ್ಯೆ: 1

ಕನ್ಯಾ: ನ್ಯಾಯಾಲಯದ ವ್ಯವಹಾರದ ಚಿಂತೆ. ಅಧಿಕ ಬೇಸರವಾಗಿ ಮನಸ್ಸಿಗೆ ಕಿರಿಕಿರಿ. ಅಪರಿಚಿತ ವ್ಯಕ್ತಿಗಳಿಂದ ಆಪತ್ತು ಎದುರಾದೀತು. ಶುಭಸಂಖ್ಯೆ: 1

ತುಲಾ: ಅಧಿಕ ಕೋಪತಾಪ ಒಳ್ಳೆಯದಲ್ಲ. ಸಂಗಾತಿಯೊಂದಿಗೆ ಮನಸ್ತಾಪ ಬೇಡ. ಮೃದು ಮಾತಿನಿಂದ ಕುಟುಂಬದಲ್ಲಿ ಕಲಹ. ಶುಭ ಸಂಖ್ಯೆ 9

ವೃಶ್ಚಿಕ: ಸ್ವಂತ ಉದ್ಯಮ, ವ್ಯಾಪಾರ ಕೈಗೊಳ್ಳುವ ಯೋಚನೆ, ನೆರೆಹೊರೆಯವರಿಂದ ಕಿರಿಕಿರಿ. ಪ್ರಯಾಣದಲ್ಲಿ ಹಿನ್ನಡೆಯಾಗಲಿದೆ. ಶುಭಸಂಖ್ಯೆ: 3

ಧನುಸ್ಸು: ದಾಂಪತ್ಯದಲ್ಲಿ ವಿರಸ ತಲೆದೋರುವ ಸಾಧ್ಯತೆ. ಸಮಾಧಾನ ಮುಖ್ಯ. ಗೌರವ ಕೀರ್ತಿ. ಶುಭ ಕಾರ್ಯದ ಚಿಂತೆ. ಶುಭಸಂಖ್ಯೆ: 7

ಮಕರ: ವ್ಯವಹಾರದಲ್ಲಿ ಲಾಭವಾಗಲಿದೆ. ಬಂಧು ಬಾಂಧವ ರಿಂದ ತೊಂದರೆಯಾಗಬಹುದು. ಪ್ರಯಾಣ ಮಾಡುವ ಸಂಭವ. ಶುಭಸಂಖ್ಯೆ: 1

ಕುಂಭ: ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯಲಿದೆ. ಯತ್ನ ಕಾರ್ಯದಲ್ಲಿ ಜಯ ನಿಮ್ಮಕಡೆಗಿದೆ. ಮೋಜು-ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 4

ಮೀನ: ಸ್ನೇಹಿತರಿಂದ ನೋವು ಸಂಕಟ ಅನುಭವಿಸ ಬೇಕಾದೀತು. ಭೂಮಿಯಿಂದ ಲಾಭ. ತಾಯಿಯಿಂದ ಸಹಕಾರ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net