ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಪತ್ನಿಯೊಂದಿಗೆ ವಿರಸ...

nity
Published on

ಮೇಷ: ದೂರದ ಊರಿಂದ ನೆಂಟರ ಆಗಮನವಾಗುತ್ತದೆ. ಸ್ನೇಹಿತರೊಂದಿಗೆ ವಾಗ್ವಾದ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ಮಾನ. ಶುಭಸಂಖ್ಯೆ: 9

ವೃಷಭ: ಕಲಾವಿದರಿಗೆ ಉತ್ತಮ ಅವಕಾಶ. ಹಲವು ದಿನಗಳಿಂದ ನನೆಗುದಿಯಲ್ಲಿದ್ದ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಅಸಮಾಧಾನ. ಶುಭಸಂಖ್ಯೆ: 2

ಮಿಥುನ: ಅಷ್ಟಮದ ಶನಿ ಅನಿರೀಕ್ಷಿತ ಆಘಾತಗಳಿಗೆ ಕಾರಣ ಆಗಬಹುದು. ದುರ್ಗೆಯನ್ನು ಆರಾಧಿಸಿ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 3

ಕಟಕ: ಪತ್ನಿಯೊಂದಿಗೆ ವಿರಸ. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಹಿರಿಯರ ಸಲಹೆ ಪಡೆಯಿರಿ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭಸಂಖ್ಯೆ: 3

ಸಿಂಹ: ಮಿತ್ರರೇ ಶತ್ರುಗಳಾಗಬಹುದು ಜೋಕೆ. ಮಹತ್ವದ ತೀರ್ಮಾನಕ್ಕೆ ಮನೆಯವರಿಂದಲೇ ವಿರೋಧ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 6

ಕನ್ಯಾ: ಆಸ್ತಿ ವಿಚಾರದ ತೀರ್ಪು ಪ್ರಕಟವಾಗಲಿದೆ. ಕುಟುಂಬದೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2

ತುಲಾ: ಮಕ್ಕಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಕುಟುಂಬ ದಲ್ಲಿ ಅನಿರೀಕ್ಷಿತ ತಿರುವು. ಕಚೇರಿಯಲ್ಲಿ ಹಿರಿಯ ಅಧಿಕಾರಿಯಿಂದ ನಿಂದನೆ. ಶುಭಸಂಖ್ಯೆ: 6

ವೃಶ್ಚಿಕ: ಸಹೋದರರೊಂದಿಗೆ ಅಸಮಾಧಾನ. ಸಹೋದರಿಯರೊಂದಿಗೆ ಭೋಜನ. ಆತ್ಮೀಯ ಸ್ನೇಹಿತನ ಸಲಹೆ ಪಡೆಯುವಿರಿ. ಶುಭಸಂಖ್ಯೆ: 5

ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಅಪವ್ಯಯ ಬೇಡ. ಮಾತನಾಡುವಾಗ ಯೋಚಿಸಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರ. ಶುಭಸಂಖ್ಯೆ: 2

ಮಕರ: ಆರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಆಹಾರ ಸೇವಿಸುವಾಗ ಹಿತ ಮಿತವಾಗಿರಲಿ. ಧನ್ವಂತರಿಯನ್ನು ಭಜಿಸಿ. ಶುಭಸಂಖ್ಯೆ: 7

ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ಸಂಗೀತಗಾರರಿಗೆ ವಿಶೇಷ ದಿನ. ಧನದ ಅಪವ್ಯಯ ಸಾಧ್ಯತೆ. ಶುಭಸಂಖ್ಯೆ: 3

ಮೀನ : ಅನಪೇಕ್ಷಿತ ಘಟನೆಗಳು ನಡೆಯಬಹುದು. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯವಾಗಿ ಸಂಭ್ರಮ. ಶುಭ ಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net