

ಮೇಷ: ನ್ಯಾಯವಾದಿಗಳಿಗೆ, ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಮಕ್ಕಳಿಂದಲೇ ವಾದ-ವಿವಾದ ಗಳು ಹೆಚ್ಚಾಗಬಹುದು. ಶುಭಸಂಖ್ಯೆ: 4
ವೃಷಭ: ಮುಕ್ತ ಭಾವನೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳಿಂದಲೂ ಬೆಂಬಲ. ಶುಭಸಂಖ್ಯೆ: 7
ಮಿಥುನ: ಹಿರಿಯರ ಸಲಹೆಗಳಿಂದ ಆಗಬಹುದಾಗಿದ್ದ ಸಾಕಷ್ಟು ನಷ್ಟವನ್ನು ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಗಮನ ಅಗತ್ಯ. ಶುಭಸಂಖ್ಯೆ:1
ಕಟಕ: ಪದೇಪದೇ ನಿರ್ಧಾರ ಬದಲಿಸುವ ನಡವಳಿಕೆ ಯಿಂದಾಗಿ ಕುಟುಂಬದಲ್ಲಿ ಅಸಹನೆ. ಕರಿದ ಪದಾರ್ಥ ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 9
ಸಿಂಹ: ಯಾವುದೇ ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕುಟುಂಬ ವ್ಯವಹಾರಗಳಲ್ಲಿ ತೃಪ್ತಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 8
ಕನ್ಯಾ: ಸ್ನೇಹಿತರೊಂದಿಗೆ ಸಮಾಲೋಚಿಸಿ. ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಶುಭಸಂಖ್ಯೆ:4
ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಹಲವು ಪ್ರಯತ್ನಗಳನ್ನು ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ ಎದುರಾಗಬಹುದು. ಶುಭಸಂಖ್ಯೆ:1
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಸಾಧ್ಯತೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 7
ಧನುಸ್ಸು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಶುಭಸಂಖ್ಯೆ: 1
ಮಕರ: ಸತ್ಯಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಶುಭಸಂಖ್ಯೆ:7
ಕುಂಭ: ಕೃಷಿ ಯಂತ್ರಗಳನ್ನು ಹೊಂದಿರುವವರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೀತಿ-ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆಯಾಗಲಿದೆ. ಶುಭಸಂಖ್ಯೆ:1
ಮೀನ: ಸಾಮರ್ಥ್ಯವನ್ನು ಅರಿತು ಕೆಲಸ ಕಾರ್ಯಗಳನ್ನು ಆಯ್ಕೆಮಾಡಿಕೊಳ್ಳಿ. ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 9