ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ನಿರಾಸಕ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಿತ್ರರೇ ಶತ್ರುಗಳಾಗುವರು. ಸಾಲ ಮಾಡುವ ಸನ್ನಿವೇಶ ಎದುರಾಗಬಹುದು. ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಪ್ರಾಪ್ತಿ. ಶುಭಸಂಖ್ಯೆ: 6

ವೃಷಭ: ತಂದೆಯ ಆರೋಗ್ಯದಲ್ಲಿ ಏರುಪೇರು. ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಕಿರಿಕಿರಿ ಉಂಟಾದೀತು. ಶುಭಸಂಖ್ಯೆ: 1

ಮಿಥುನ: ಧಾರ್ವಿುಕ ಕಾರ್ಯಗಳಿಗೆ ಖರ್ಚು. ಆತ್ಮೀಯ ಸ್ನೇಹಿತನಿಂದ ದ್ರೋಹ. ದಾಂಪತ್ಯದಲ್ಲಿ ನಿರಾಸಕ್ತಿ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 7

ಕಟಕ: ಬಹುದಿನಗಳಿಂದ ಕುಂಠಿತವಾಗಿದ್ದ ಕೆಲಸದ ಮುಕ್ತಾಯ. ಅಗ್ನಿ ಆಕಸ್ಮಿಕ ಸಾಧ್ಯತೆ. ಸಮಸ್ಯೆ ತಾರಕಕ್ಕೆ. ಬಂಧುಗಳೊಂದಿಗೆ ಕಲಹ. ಶುಭಸಂಖ್ಯೆ: 2

ಸಿಂಹ: ಕಚೇರಿ ಕೆಲಸದ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದ ಸಮಸ್ಯೆ ಬಿಗಡಾಯಿಸಬಹುದು. ಕಚೇರಿಯಲ್ಲಿ ಸಂತೋಷ. ಶುಭಸಂಖ್ಯೆ: 5

ಕನ್ಯಾ: ನಿರುದ್ಯೋಗಿಗಳಿಗೆ ಶುಭ ವಾರ್ತೆ. ಆರ್ಥಿಕವಾದ ಸಂತೃಪ್ತಿ. ಮಕ್ಕಳ ವಿದೇಶ ಪ್ರಯಾಣದ ಆಸೆ ನನಸು. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8

ತುಲಾ: ಅನಗತ್ಯ ಖರ್ಚು ಮಾಡಲೇಬೇಕಾದೀತು. ಮನೋರೋಗಗಳು ಉಲ್ಬಣಿಸಬಹುದು. ವಿದ್ಯಾರ್ಥಿನಿಯರಿಗೆ ಶುಭ ದಿನ. ಶುಭಸಂಖ್ಯೆ: 8

ವೃಶ್ಚಿಕ: ಸ್ಥಿರಾಸ್ತಿಯಿಂದ ಧನಲಾಭ. ಗೃಹದ ನವೀಕರಣಕ್ಕೆ ತೀರ್ಮಾನ. ಸ್ನೇಹಿತರಿಂದ ಮೋಸ. ದುಂದುವೆಚ್ಚ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ಧನುಸ್ಸು: ಅನಿರೀಕ್ಷಿತ ಧನಾಗಮನ. ಹಿರಿಯರ ವಿಯೋಗ ಸಾಧ್ಯತೆ. ದುಶ್ಚಟಗಳಿಂದ ಅನಾರೋಗ್ಯ. ದೂರ ಪ್ರಯಾಣ ಸಾಧ್ಯತೆ. ಶುಭ ಸಂಖ್ಯೆ 9

ಮಕರ: ಕೌಟುಂಬಿಕವಾಗಿ ಸಂತೋಷ. ವ್ಯವಹಾರಗಳಲ್ಲಿ ಚೇತರಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ವಿವಾಹ ಪ್ರಯತ್ನ ಸಫಲ. ಶುಭ ಸಂಖ್ಯೆ 9

ಕುಂಭ: ಸಾಹಿತಿಗಳು ಬರಹಗಾರರಿಗೆ ಪುರಸ್ಕಾರ. ಮಾಧ್ಯಮದವರಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಮಹಿಳೆಯರಿಗೆ ಅನುಕೂಲ. ಶುಭಸಂಖ್ಯೆ: 1

ಮೀನ: ದೀರ್ಘಕಾಲಿಕ ಅನಾರೋಗ್ಯದ ನಿವಾರಣೆ. ತಂದೆ-ತಾಯಿಯರ ಸಲಹೆಯಿಂದ ಧನಲಾಭ. ನ್ಯಾಯಾಲಯದಲ್ಲಿ ಜಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net