

ಮೇಷ: ಚಟುವಟಿಕೆಯಿಂದ ಇರಿ. ಸೋಮಾರಿತನ ನಿಮ್ಮ ಉನ್ನತಿಗೆ ಮಾರಕ. ತಪ್ಪು ನಿರ್ಧಾರದಿಂದ ಧನ ನಷ್ಟವಾದೀತು, ಜಾಗ್ರತೆ. ಶುಭಸಂಖ್ಯೆ: 6
ವೃಷಭ: ಕಾಯಕವೇ ಕೈಲಾಸ ಅನ್ನುವಂತೆ ವರ್ತಿಸಿ. ಗುರುಹಿರಿಯರ ಭೇಟಿ ಮಾಡುವಿರಿ. ತಾಯಿಯ ಮಾತನ್ನು ತಪ್ಪದೆ ಪಾಲಿಸಿ. ಶುಭಸಂಖ್ಯೆ: 7
ಮಿಥುನ: ಆರೋಗ್ಯ ಬಿಗಡಾಯಿಸೀತು. ಆಸ್ತಿ ಖರೀದಿಗೆ ನಿರ್ಧಾರ. ಕೋರ್ಟಿನಿಂದ ವಿವಾದದ ತೀರ್ಪ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 2
ಕಟಕ: ಹಲವು ವರ್ಷಗಳಿಂದ ಕಾಡುತ್ತಿದ್ದ ಕುಟುಂಬದ ವಿವಾದಕ್ಕೆ ರ್ತಾಕ ಅಂತ್ಯ. ಕುಟುಂಬದೊಂದಿಗೆೆ ವಿಹಾರ. ಸುಖ ಭೋಜನ. ಶುಭಸಂಖ್ಯೆ: 7
ಸಿಂಹ: ನಿಮ್ಮ ದುರ್ಬಲತೆಯನ್ನು ಪ್ರದರ್ಶಿಸಬೇಡಿ. ಹಿರಿಯರ ಸಲಹೆ ಪಡೆಯಲು ಮರೆಯಬೇಡಿ. ಮೇಲಧಿಕಾರಿಗಳಿಂದ ಕಿರಿಕಿರಿ ಶುಭಸಂಖ್ಯೆ: 5
ಕನ್ಯಾ: ಧಾರ್ವಿುಕ ಕ್ಷೇತ್ರಕ್ಕೆ ಭೇಟಿ ನೀಡುವಿರಿ. ದೂರದ ಪ್ರಯಾಣ. ಕುಟುಂಬದಿಂದ ವಿಶೇಷ ಸಲಹೆ. ಮಕ್ಕಳಿಂದ ಸಂತೋಷ. ಶುಭಸಂಖ್ಯೆ: 4
ತುಲಾ: ಅನವಶ್ಯಕ ತಿರುಗಾಟ, ಕಷ್ಟಪಟ್ಟರೂ ಬೆಲೆ ಇಲ್ಲ ಅಂದುಕೊಂಡಿರುವಿರಿ. ನಿರೀಕ್ಷಿಸಿದಂತೆ ಯಶಸ್ಸು ಪ್ರಾಪ್ತಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7
ವೃಶ್ಚಿಕ: ಸಂಗಾತಿಯೊಂದಿಗೆ ವಿರಸ. ಕಚೇರಿಯಲ್ಲಿ ಭಿನ್ನಾಭಿಪ್ರಾಯ. ಒತ್ತಡವನ್ನು ಸಮಾಧಾನದಿಂದ ನಿಭಾಯಿಸಿ. ಗೆಳೆಯನ ಭೆೇಟಿ. ಶುಭಸಂಖ್ಯೆ: 3
bಮಾತು ಮುತ್ತಿನಂತಿರಲಿ. ಸಹನೆ ಇರಲಿ. ರಾಜಕೀಯದಲ್ಲಿದ್ದವರಿಗೆ ಅವಮಾನ ಸಾಧ್ಯತೆ. ಸಾರ್ವಜನಿಕವಾಗಿ ಕಾರ್ಯಸಿದ್ಧಿ. ಶುಭಸಂಖ್ಯೆ: 8
ಮಕರ: ವ್ಯಾಪಾರದಲ್ಲಿ ನಷ್ಟ. ಅನವಶ್ಯಕ ಹಣದ ಖರ್ಚು. ಮಕ್ಕಳಿಂದ ಧನ ನಷ್ಟ. ಭೂ ವಿವಾದದಲ್ಲಿ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 5
ಕುಂಭ: ತಂದೆ ತಾಯಿಯನ್ನು ಗೌರವಿಸಿ. ವಿವಾದವನ್ನು ಹಿರಿಯರ ಸಲಹೆ ಮೇರೆಗೆ ಬಗೆಹರಿಸಿ. ದೀನ-ದಲಿತರಿಗೆ ದಾನ ಮಾಡಿ. ಶುಭಸಂಖ್ಯೆ: 9
ಮೀನ : ಪ್ರತಿಭಾನ್ವಿತರಿಗೆ ವಿಶೇಷ ಜನಮನ್ನಣೆ. ಹಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಬಂಧುವಿನ ಮರಣ. ಕಚೇರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 6