

ಮೇಷ: ನಿಮ್ಮ ಕುರಿತಾಗಿ ಜನರು ತುಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಕಿರಿಕಿರಿಯಾಗದಂತೆ ಅದನ್ನು ನಿರ್ವಹಿಸಿದರೆ ಒಳಿತು. ಶುಭಸಂಖ್ಯೆ: 7
ವೃಷಭ: ಕೆಲವು ಸಲ ದಡ್ಡರಿಂದಲೂ ಉಪದೇಶಗಳನ್ನು ಕೇಳಬೇಕಾಗುತ್ತದೆ. ಅದರ ಬಗ್ಗೆ ಚಿಂತಿಸದೆ ಹಸನ್ಮುಖಿಗಳಾಗಿಯೇ ವರ್ತಿಸಿ. ಶುಭಸಂಖ್ಯೆ: 4
ಮಿಥುನ: ಮನೆಗೆ ಬರುವಂತಹ ದೂರದ ಸಂಬಂಧಿಗಳು ಅಶಾಂತಿಯನ್ನು ನಿರ್ವಿುಸಬಹುದು. ಮೌನವೇ ನಿಮ್ಮ ಮುಖ್ಯ ಉತ್ತರವಾಗಲಿ. ಶುಭಸಂಖ್ಯೆ: 6
ಕಟಕ: ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲು ಹೊರಟಿದ್ದೀರಿ. ಅದು ಸ್ಪಷ್ಟತೆಯಿಂದ ಕೂಡಿರಲಿ. ಶುಭಸಂಖ್ಯೆ: 5
ಸಿಂಹ: ಶ್ರೇಷ್ಠವಾದ ಸಮಯವು ಹೋದರೆ ಮತ್ತೆ ಮರಳಿ ಬರಲಾರದು. ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಶುಭವಾಗಲಿದೆ. ಶುಭಸಂಖ್ಯೆ: 1
ಕನ್ಯಾ: ವಿಶೇಷ ಭೋಜನ ಸ್ವೀಕಾರಕ್ಕೆ ಸ್ನೇಹಿತರಿಂದ ಒತ್ತಡ ಬರಲಿದೆ. ಆದರೆ ಅದನ್ನು ನಿರಾಕರಣೆ ಮಾಡುವುದೇ ಸದ್ಯಕ್ಕೆ ಸೂಕ್ತ. ಶುಭಸಂಖ್ಯೆ: 3
ತುಲಾ: ಒಳಿತನ್ನು ಹೇಳಿದರೂ ಜನ ಕೂಗಾಡಬಹುದು. ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸಗಳನ್ನು ನೀವು ಮಾಡಿದರೆ ಕ್ಷೇಮವಿದೆ. ಶುಭಸಂಖ್ಯೆ: 8
ವೃಶ್ಚಿಕ: ಮನೆಯ ಎಲ್ಲರಿಗೂ ನಿಮ್ಮ ನಿರ್ಧಾರವನ್ನು ತಿಳಿಯುವುದಕ್ಕೆ ಆಸಕ್ತಿಯಿದೆ. ತಾಳ್ಮೆಯಿಂದ ವಿವರಿಸಿದರೆ ವಿವಾದವಾಗದು. ಶುಭಸಂಖ್ಯೆ: 2
ಧನುಸ್ಸು: ಕೆಲಸದ ಸ್ಥಳದಲ್ಲಿ ವಿಶೇಷವಾದ ಕಾರಣದಿಂದ ಪದೋನ್ನತಿಗೆ ಅವಕಾಶವು ಬರಬಹುದು. ಅತಿಯಾದ ವಿನಯವೂ ಬೇಡ. ಶುಭಸಂಖ್ಯೆ: 9
ಮಕರ: ಸಂಶಯಾಸ್ಪದವಾಗಿ ವರ್ತಿಸಬೇಕಾದಂತಹ ಸಂದರ್ಭ ಎದುರಾದರೂ ತುಸು ಜಾಣ್ಮೆಯಿಂದ ಮಾತಾಡಿ. ಜಯ ಸಾಧಿಸುವಿರಿ. ಶುಭಸಂಖ್ಯೆ: 7
ಕುಂಭ: ಜೀವನಸಂಗಾತಿಯ ತೀವ್ರ ನಿರೀಕ್ಷೆಯಲ್ಲಿದ್ದೀರಿ. ಸ್ವಲ್ಪಮಟ್ಟಿನ ಗ್ರಹದೋಷವನ್ನು ನಿವಾರಿಸಲು ದುರ್ಗಾದೇವಿಯ ಸ್ತುತಿ ಮಾಡಿ. ಶುಭಸಂಖ್ಯೆ: 4
ಮೀನ: ನಿಮ್ಮ ದೌರ್ಬಲ್ಯವೇ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಯಾರಿಗೂ ಕೂಡ ಅದರ ಸುಳಿವನ್ನು ಬಿಟ್ಟುಕೊಡದಿರಿ. ಶುಭಸಂಖ್ಯೆ: 6