ಈ ರಾಶಿಯವರಿಗಿಂದು ಹಣ ಉಳಿಕೆಗೆ ಉತ್ತಮ ಅವಕಾಶ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮೇಲಧಿಕಾರಿಗಳಿಂದ ಕಿರಿಕಿರಿ. ಸಹೋದ್ಯೋಗಿಗಳ ಜತೆ ವಾಗ್ವಾದ. ವ್ಯಾಪಾರಸ್ಥರಿಗೆ ನಷ್ಟ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ವೃಷಭ: ಹೊಸ ವ್ಯಾಪಾರಕ್ಕೆ ಚಾಲನೆ. ಭೂಮಿ ಖರೀದಿಗೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಕಿರಿಕಿರಿ. ಸಮಾಲೋಚಿಸಿ ನಿರ್ಧರಿಸಿ. ಶುಭಸಂಖ್ಯೆ:3

ಮಿಥುನ: ಕೆಲಸ ಕಳೆದುಕೊಳ್ಳುವ ಭೀತಿ. ಆರ್ಥಿಕ ಸಮಸ್ಯೆಗಳು ಕಾಡಬಹುದು. ಅನಾರೋಗ್ಯ ಅಲಕ್ಷಿಸದೇ ವೈದ್ಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ:1

ಕಟಕ: ನೀವು ನಂಬಿದವರಿಂದಲೇ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಅನಾರೋಗ್ಯ ಹೆಚ್ಚಾಗಬಹುದು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4

ಸಿಂಹ: ಹಿತಶತ್ರುಗಳ ಕಾಟ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ. ವ್ಯಾಪಾರದಲ್ಲಿ ಅಧಿಕ ನಷ್ಟ. ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 4

ಕನ್ಯಾ: ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ವಿದೇಶದಿಂದ ಮಗನ ಆಗಮನದ ಸುದ್ದಿ. ಶುಭಸಂಖ್ಯೆ: 1

ತುಲಾ: ಮನೆಯಲ್ಲಿ ಸಡಗರ. ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಶುಭಸಂಖ್ಯೆ: 3

ವೃಶ್ಚಿಕ: ಸಹೋದರರಿಂದ ಸಹಾಯ. ಮಗಳ ಮದುವೆಗೆ ಚಾಲನೆ. ವಹಿಸಿದ ಕೆಲಸದ ದಕ್ಷ ನಿರ್ವಹಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 2

ಧನುಸ್ಸು: ಮಾತನಾಡುವ ಮೊದಲು ಸಾರಾಸಾರ ಯೋಚಿಸಿ. ಹಣ ಉಳಿಕೆಗೆ ಉತ್ತಮ ಅವಕಾಶ ಸಿಗಲಿದೆ. ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6

ಮಕರ: ನಿಮ್ಮ ಕಾರ್ಯ ನೈಪುಣ್ಯಕ್ಕೆ ಪುರಸ್ಕಾರ. ಕೃಷಿಕರಿಗೆ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ನೇಹಿತನ ಸಲಹೆ. ಶುಭಸಂಖ್ಯೆ: 8

ಕುಂಭ: ಧನನಷ್ಟ. ವ್ಯಾಪಾರದಲ್ಲಿ ಮೋಸ ಹೋಗುವಿರಿ. ನಂಬಿದವರಿಂದಲೇ ದ್ರೋಹ. ಸಹೋದರಿಯ ಮನೆಗೆ ಭೇಟಿ ಕೊಡುವಿರಿ. ಶುಭಸಂಖ್ಯೆ: 3

ಮೀನ: ಕೆಲಸಗಾರರಿಂದ ಪ್ರತಿರೋಧ ಎದುರಾದೀತು. ಮನಸ್ಸಿಗೆ ಅವ್ಯಕ್ತ ಭಯ. ಪರಮೇಶ್ವರನನ್ನು ಸ್ತುತಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net