ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ ಕಂಡು ಬರಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವಾಹನ ಚಲಾಯಿಸು ವಲ್ಲಿ ಎಚ್ಚರ ಅಗತ್ಯ. ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಲೇಬೇಕು. ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ತೊಂದರೆಯಾಗುವ ಸಾಧ್ಯತೆ. ವಾದ ವಿವಾದಗಳಲ್ಲಿ ಅಪಜಯ. ಅನವಶ್ಯಕ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 1

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಆಸಕ್ತಿ. ಲೇಖಕರಿಗೆ ಅವಕಾಶಗಳು ಲಭ್ಯ. ವ್ಯಾಪಾರಸ್ಥರಿಗೆ ಮಧ್ಯಮ ಪ್ರಮಾಣದ ಲಾಭ. ಶುಭಸಂಖ್ಯೆ: 5

ಕಟಕ: ಖರ್ಚು ವೆಚ್ಚಗಳಲ್ಲಿ ಹೆಚ್ಚಳ. ಸ್ನೇಹಿತರೊಂದಿಗೆ ಸಾಮರಸ್ಯ ಭಾವ ಮೂಡುವುದು. ಹೊಸ ವ್ಯಾಪಾರದ ಚಿಂತನೆ ನಡೆಸುವಿರಿ. ಶುಭಸಂಖ್ಯೆ: 2

ಸಿಂಹ: ಆಡಳಿತ ವರ್ಗದವರಿಂದ ಸಹಾಯ ದೊರೆಯುತ್ತದೆ. ಆದಾಯದಲ್ಲಿ ಏರಿಕೆ ಕಂಡು ಬರಲಿದೆ. ಸಂತಾನಾಕಾಂಕ್ಷಿಗಳಿಗೆ ಶುಭಸುದ್ದಿ. ಶುಭಸಂಖ್ಯೆ: 8

ಕನ್ಯಾ: ಅಧಿಕಾರಿಗಳಿಗೆ ಅಶುಭಕಾರಕ ದಿನ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಗಾಯಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 7

ತುಲಾ: ತಾಯಿಯ ಆರೋಗ್ಯದಲ್ಲಿ ಎಚ್ಚರವಿರಲಿ. ವ್ಯಾಪಾರದಲ್ಲಿ ಹಾನಿಯಾಗುವುದು. ಮನಸ್ಸಿಗೆ ಬೇಸರ. ಧ್ಯಾನದಿಂದ ಸಮಾಧಾನ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿಯಾಗುವುದು. ಭೂಮಿ ಸಂಬಂಧಿತ ವ್ಯಾಜ್ಯಗಳಲ್ಲಿ ಜಯದೊರೆತು ಮನಸ್ಸಿಗೆ ನಿರಾಳ. ಶತ್ರುದಮನ. ಶುಭಸಂಖ್ಯೆ: 9

ಧನುಸ್ಸು: ಅಧಿಕಾರಿಗಳಿಗೆ ಶುಭದಿನ. ಕೃಷಿಕರಿಗೆ ನಿರೀಕ್ಷಿತ ಸಹಾಯ ದೊರೆಯುವುದು. ರಾಜಕೀಯ ಪ್ರವೇಶಿಸಲು ಇದು ಸುಸಮಯ. ಶುಭಸಂಖ್ಯೆ: 2

ಮಕರ: ಸಲಹೆಗಳನ್ನು ಸ್ವೀಕರಿಸಲು ಯಾವುದೇ ಹಿಂಜರಿಕೆ ಬೇಡ. ಷೇರು ವ್ಯವಹಾರದಲ್ಲಿ ನಷ್ಟ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ಶುಭಸಂಖ್ಯೆ: 6

ಕುಂಭ: ಹಳೆಯ ಸಾಲ ಮರುಪಾವತಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭಯ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2

ಮೀನ: ಅನಿರೀಕ್ಷಿತ ಧನ ಸಹಾಯ ಒದಗಿ ಬರಲಿದೆ. ವಕೀಲರಿಗೆ ಉತ್ತಮವಾದ ದಿನವಾಗಿದೆ. ಹೈನುಗಾರಿಕೆ ಯಲ್ಲಿ ಲಾಭ ಬರುವುದು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net