ನಿತ್ಯ ಭವಿಷ್ಯ: ಈ ರಾಶಿಯವರ ಮಾತಿನಲ್ಲಿಂದು ತುಸು ಮಿತಿ ಇರಲಿ...

Nitya-Bhavishya-vvani-1-2-1
Published on

ಮೇಷ: ಕೆಲಸದ ಸ್ಥಳದಲ್ಲಿ ಒಂಟಿಯಾಗಿ ಇರದಿರಿ. ಸ್ನೇಹಿತರೊಡನೆ ಬೆರೆತರೂ ಅವರನ್ನು ತಲೆಯ ಮೇಲೇರಿಸಿಕೊಳ್ಳದಿರಿ. ಶುಭಸಂಖ್ಯೆ: 7

ವೃಷಭ: ಚಿತ್ರರಂಗದ ಕಲಾವಿದರಿಗೆ ಮುಂದಿನ ಹಂತಕ್ಕಾಗಿನ ಕಾರ್ಯಯೋಜನೆಗಳು ಬೇಗನೆ ಸಾಕಾರಗೊಳ್ಳಲಿವೆ. ಶುಭಸಂಖ್ಯೆ: 4

ಮಿಥುನ: ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಭಯದ ಅನುಭವ ಆಗಬಹುದು. ಮೃತ್ಯುಂಜಯನ ನಾಮಾವಳಿಯನ್ನು ಪಠಿಸಿ. ಶುಭಸಂಖ್ಯೆ: 1

ಕಟಕ: ಪ್ರತಿದಿನ ಕೂಡ ಹೊಸತನವೇ ತುಂಬಿಕೊಂಡು ಬರುವುದರಿಂದ ನೀವೂ ಹೊಸಬರಾದರೆ ಕಾರ್ಯಗಳಲ್ಲಿ ಸಿದ್ಧಿ ಲಭಿಸಲಿದೆ. ಶುಭಸಂಖ್ಯೆ: 2

ಸಿಂಹ: ವ್ಯಾಪಾರ ವಹಿವಾಟುಗಳಲ್ಲಿ ದೊರೆಯುವ ಲಾಭದಲ್ಲಿ ಏರಿಕೆ ಇದೆ. ಕುಟುಂಬದಲ್ಲಿ ಹರ್ಷದ ವಾತಾವರಣವಿದೆ. ಶುಭಸಂಖ್ಯೆ: 6

ಕನ್ಯಾ: ಊಹೆಗಳಿಂದಲೇ ಮುಂದಿನ ಯೋಜನೆಗಳ ಸಫಲತೆ-ವಿಫಲತೆಗಳನ್ನು ನಿರ್ಧರಿಸಬೇಡಿ. ತಜ್ಞರ ಸಲಹೆಯನ್ನು ಸ್ವೀಕರಿಸಿ. ಶುಭಸಂಖ್ಯೆ: 9

ತುಲಾ: ನಿಮ್ಮ ಕಾಳಜಿ, ಆರೈಕೆಗಳಿಂದ ಮಕ್ಕಳು ಚೇತರಿಸಿಕೊಳ್ಳಲಿದ್ದಾರೆ. ಅವರಿಗೆ ಶುಭ ತರುವ ದಿನವೂ ಇದಾಗಿದೆ. ಶುಭಸಂಖ್ಯೆ: 8

ವೃಶ್ಚಿಕ: ವಿದ್ಯಾರ್ಥಿಗಳು ಮುಂದಿನ ಓದಿನಲ್ಲಿ ಏಕಾಗ್ರತೆ ಸಾಧಿಸಿಕೊಳ್ಳಲು ವಿದ್ಯಾದೇವತೆ ಸರಸ್ವತಿಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 3

ಧನುಸ್ಸು: ನಡೆಯುವವರು ಎಡವಿ ಬೀಳುವಂತೆ ನಿಮ್ಮ ಯೋಜನೆ ಕೆಲವು ಸಲ ವಿಫಲತೆಯನ್ನು ಹೊಂದಬಹುದು. ಚಿಂತೆ ಬೇಡ. ಶುಭಸಂಖ್ಯೆ: 5

ಮಕರ: ಕುಟುಂಬದ ಸದಸ್ಯರೊಂದಿಗೆ ಪುಟ್ಟ ಪ್ರವಾಸ ಕೈಗೊಳ್ಳುವ ಯೋಜನೆ ಸಾಕಾರಗೊಳ್ಳಲಿದೆ. ಮಾತಿನಲ್ಲಿ ತುಸು ಮಿತಿ ಇರಲಿ. ಶುಭಸಂಖ್ಯೆ: 7

ಕುಂಭ: ಸ್ನೇಹಿತರಿಂದ ಉತ್ತಮ ವಿಚಾರ ತಿಳಿಯುವ ಅವಕಾಶ ಲಭಿಸಲಿದೆ. ಪಾಲುದಾರಿಕೆಯುಳ್ಳ ವ್ಯವಹಾರಗಳು ಮಾತ್ರ ಬೇಡ. ಶುಭಸಂಖ್ಯೆ: 4

ಮೀನ: ಈಗಿನ ಸಂದರ್ಭದಲ್ಲಿ ಹಿಂದಿನ ಅನೇಕ ಅನುಭವಗಳು ನೆರವಿಗೆ ಒದಗಿಬರಲಿವೆ. ಕ್ರಿಯಾಶೀಲತೆಯಿಂದ ಜಯ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net