ನಿತ್ಯ ಭವಿಷ್ಯ: ಈ ರಾಶಿಯವರಿಗೆ ಪ್ರಪಂಚದ ಕಣ್ಣಿಗೆ ನೀವು ಸಂತೋಷದಲ್ಲಿ ಇದ್ದೀರಿ. ಆದರೆ ನಿಮ್ಮ ಒಳಗೆ ಚಿಂತೆ, ಆತಂಕ ಹೆಚ್ಚಿದೆ

Nitya-Bhavishya-vvani-1-2-1
Published on

ಮೇಷ: ಇಂದು ಸಾರ್ವಜನಿಕ ವಾಹನ ಬಳಸಿ. ಯಾರೊಂದಿಗೂ ಜಗಳ ಬೇಡ. ಜಗಳ ಆದಲ್ಲಿ ತಪ್ಪು ನಿಮ್ಮದೇ ಎನ್ನುತ್ತಾರೆ. ಅದೃಷ್ಟಸಂಖ್ಯೆ: 3

ವೃಷಭ: ಚಿಕ್ಕ ಬದಲಾವಣೆ ದೊಡ್ಡ ಲಾಭ ತರಲಿದೆ. ಇಷ್ಟ ಇಲ್ಲದ ಒಬ್ಬ ವ್ಯಕ್ತಿಯನ್ನು ಇಂದು ನಿರಾಕರಿಸದೆ ಹೊಗಳಬೇಕಾಗುತ್ತದೆ. ಅದೃಷ್ಟಸಂಖ್ಯೆ:1

ಮಿಥುನ: ಇಂದು ಯಾರಿಗೂ ಸಲಹೆ ಸೂಚನೆ ಕೊಡಬೇಡಿ. ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ. ದೇಸಿ ಹಸುವಿನ ಪೂಜೆ ಮಾಡಿ. ಅದೃಷ್ಟಸಂಖ್ಯೆ: 4

ಕಟಕ: ಪ್ರಪಂಚದ ಕಣ್ಣಿಗೆ ನೀವು ಸಂತೋಷದಲ್ಲಿ ಇದ್ದೀರಿ. ಆದರೆ ನಿಮ್ಮ ಒಳಗೆ ಚಿಂತೆ, ಆತಂಕ ಹೆಚ್ಚಿದೆ. ಆರೋಗ್ಯದ ಬಗ್ಗೆ ಗಮನಿಸಿ. ಅದೃಷ್ಟಸಂಖ್ಯೆ: 5

ಸಿಂಹ: ಚಿನ್ನ, ಬೆಳ್ಳಿ, ಹಾಲಿನ ವ್ಯಾಪಾರಿಗಳಿಗೆ ಲಾಭವಿದೆ. ಸಾಲಗಳ ಪಾವತಿಗೆ ಒತ್ತಾಯ ಬರಬಹುದು. ಮೈಕೈ ನೋವು ಕಾಡುತ್ತದೆ. ಅದೃಷ್ಟಸಂಖ್ಯೆ: 7

ಕನ್ಯಾ: ಅನಿರೀಕ್ಷಿತವಾಗಿ ಕೀರ್ತಿ ಬರುತ್ತದೆ. ದೇವತಾ ಕಾರ್ಯಗಳು ಪುರುಸೊತ್ತು ಇಲ್ಲದಂತೆ ಆಗುತ್ತದೆ. ಉಳಿತಾಯದ ಬಗ್ಗೆ ಚಿಂತೆ. ಅದೃಷ್ಟಸಂಖ್ಯೆ: 9

ತುಲಾ: ಹಣದ ವಿಚಾರದಲ್ಲಿ ಪ್ರಮಾದ ಆಗಬಹುದು. ಚಲನಚಿತ್ರ ರಂಗದವರಲ್ಲಿ ಎಚ್ಚರಿಕೆ ಬೇಕು. ಹಣ ಕೀಳುವ ಜನರ ಬಗ್ಗೆ ಎಚ್ಚರ. ಅದೃಷ್ಟಸಂಖ್ಯೆ: 6

ವೃಶ್ಚಿಕ: ರಾತ್ರಿಯಿಂದ ಕಾಡುತ್ತಿರುವ ಸಮಸ್ಯೆಯ ಬಗ್ಗೆ ಚಿಂತೆ ಬೇಡ. ಅದು ದೊಡ್ಡ ಸಮಸ್ಯೆ ಅಲ್ಲ. ಗಣೇಶನನ್ನು ಸ್ತುತಿಸಿ. ಅದೃಷ್ಟಸಂಖ್ಯೆ: 2

ಧನಸ್ಸು: ನಿಮಗೆ ವಹಿಸಿದ ಹೊಸ ಕೆಲಸಕ್ಕೆ ಹಿಂದೇಟು ಹಾಕುತ್ತೀರಿ. ಎಡವಟ್ಟಾದರೆ ಎಂಬ ಭಯ. ಹನುಮಂತನ ನೆನೆಯಿರಿ. ಅದೃಷ್ಟಸಂಖ್ಯೆ: 6

ಮಕರ: ಯಾವ ಕೆಲಸ ಮೊದಲು ಮಾಡಬೇಕು ಎಂದೆಲ್ಲಾ ಯೋಚಿಸುವ ಲೆಕ್ಕಾಚಾರ ಬುಡ ಮೇಲಾಗುವ ಸಾಧ್ಯತೆಗಳು ಕಾಣಿಸುತ್ತಿದೆ. ಅದೃಷ್ಟಸಂಖ್ಯೆ: 5

ಕುಂಭ: ಇಂದು ಸಿಟ್ಟು ಸ್ವಲ್ಪ ಜಾಸ್ತಿಯೇ ಬರುತ್ತದೆ ನಿಮಗೆ. ಈಶ್ವರನ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಮಾಡಿ. ಅದೃಷ್ಟಸಂಖ್ಯೆ: 9

ಮೀನ: ಸಂಬಳದ ವಿಚಾರವಾಗಿ ಜಗಳವಾಗಬಹುದು. ತಾಳ್ಮೆಯ ಕಟ್ಟೆ ಒಡೆಯುವ ದಿನ. ಶಾಂತವಾಗಿ ಇರಲು ಪ್ರಯತ್ನಿಸಿ. ಅದೃಷ್ಟಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net