ನಿತ್ಯ ಭವಿಷ್ಯ: ಮನಸ್ತಾಪ ತರುವವರು ಹತ್ತಿರವರೇ ಇದ್ದಾರೆ ಎಂಬುದನ್ನು ಈ ರಾಶಿಯವರು ನೆನಪಿನಲ್ಲಿಟ್ಟುಕೊಳ್ಳಿ

Nitya-Bhavishya-vvani-1-2-1
Published on

ಮೇಷ: ವಿವಿಧ ದೃಷ್ಟಿಕೋನಗಳಲ್ಲಿ ಯೋಚಿಸುತ್ತ ಕೆಲಸ ಮಾಡಲು ಮುಂದಾಗುವುದು ಯಶಸ್ಸನ್ನು ತರಬಲ್ಲುದು. ಶುಭಸಂಖ್ಯೆ: 5

ವೃಷಭ: ನಿಮ್ಮದೇ ಆದ ವಿಧಾನದಲ್ಲಿ ಚೆನ್ನಾಗಿ ಮಾತುಗಳನ್ನು ಆಡಿ ವ್ಯವಹಾರಗಳನ್ನು ಕುದುರಿಸಲು ಸಾಧ್ಯವಿದೆ. ಶುಭಸಂಖ್ಯೆ: 2

ಮಿಥುನ: ಆರೋಗ್ಯದ ವಿಚಾರದಲ್ಲಿ ಹಾಗೂ ಬಾಳಸಂಗಾತಿಯ ವಿಚಾರದಲ್ಲಿ ಖಂಡಿತ ಅಲಕ್ಷ್ಯ ತೋರಿಸದಿರಿ. ಶುಭಸಂಖ್ಯೆ: 7

ಕಟಕ: ನಿಜವಾದ ಶ್ರಮ ಹಾಕಿ ದುಡಿಯಲು ಏನೋ ಒಂದು ರೀತಿಯ ಅಸಮಾಧಾನದಿಂದಾಗಿ ಸಾಧ್ಯವಾಗಲಾರದು. ಶುಭಸಂಖ್ಯೆ: 4

ಸಿಂಹ: ವಿವಿಧ ಜನರಿಂದ ನಿಮಗೆ ಮರಳಿ ಬರಬೇಕಾದ ಹಣಕ್ಕಾಗಿ ಕುಬೇರ ಅಷ್ಟೋತ್ತರವನ್ನು ಶ್ರದ್ಧೆಯಿಂದ ಓದಿ. ಶುಭಸಂಖ್ಯೆ: 6

ಕನ್ಯಾ: ಎಲ್ಲ ರೀತಿಯಲ್ಲಿಯೂ ಮನಶ್ಶಾಂತಿ ನೆಲೆಸಲು ಶುಭಪ್ರದನಾದ ತ್ರಿಪುರಾಂತಕ ಪರಶಿವನ ಸ್ತುತಿ ಮಾಡಿ. ಶುಭಸಂಖ್ಯೆ: 4

ತುಲಾ: ಉತ್ಸಾಹ, ಲವಲವಿಕೆಯಿಂದ ಇರಲು ಪ್ರಯತ್ನಿಸುವ ನಿಮಗೆ ಅನಿರೀಕ್ಷಿತವಾದ ಒತ್ತಡ ಎದುರಾಗಬಹುದು. ಶುಭಸಂಖ್ಯೆ: 8

ವೃಶ್ಚಿಕ: ಮನಸ್ತಾಪವನ್ನು ತರುವವರು ಹತ್ತಿರವೇ ಇರುತ್ತಾರೆ ಎಂಬುದನ್ನು ನೆನಪಿಡಿ. ಉದ್ವಿಗ್ನರಾಗದೆ ಶಾಂತವಾಗಿರಿ. ಶುಭಸಂಖ್ಯೆ: 3

ಧನಸ್ಸು: ಜನ ಸೂಕ್ತವಾದ ನಿರ್ಣಯ, ಯೋಗ್ಯ ಸಲಹೆಗಳನ್ನು ಬಯಸಿ ನಿಮ್ಮತ್ತ ಬರುತ್ತಾರೆ. ಗೌರವ, ಆದರ ಪ್ರಾಪ್ತಿ. ಶುಭಸಂಖ್ಯೆ: 1

ಮಕರ: ಸಾಲದ ವಿಚಾರದಲ್ಲಿ - ಪಡೆಯುವುದಿರಲಿ, ಕೊಡುವುದಿರಲಿ - ಬಹಳ ಎಚ್ಚರಿಕೆಯಿಂದಿರಿ. ಜಾಗ್ರತೆ ವಹಿಸುವುದು ಅತ್ಯಗತ್ಯ. ಶುಭಸಂಖ್ಯೆ: 5

ಕುಂಭ: ಹಿಡಿದ ಕಾರ್ಯವನ್ನು ಬಿಡದೆ ಪೂರೈಸುವ ಗುರಿಯಿಂದ ಹೊರಬರದಿರಿ. ಅಡೆತಡೆ ತರುವವರನ್ನು ದೂರ ಇಡಿ. ಶುಭಸಂಖ್ಯೆ: 9

ಮೀನ: ನಿಮ್ಮದೇ ಆದ ಕೆಲವು ದೌರ್ಬಲ್ಯಗಳಿಂದಾಗಿ ವಿರೋಧಿಗಳು ಬಲಾಢ್ಯರಾಗಲು ಅವಕಾಶ ಮಾಡಿಕೊಡದಿರಿ. ಶುಭಸಂಖ್ಯೆ: 6 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net