

ಮೇಷ: ಕೆಲಸದ ಸ್ಥಳದಲ್ಲಿ ಒಳಿತಿನ ಸುದ್ದಿಗಳನ್ನು
ಕೇಳುವಿರಿ. ಹೊಸ ಕೆಲಸ ಒಪ್ಪಿಕೊಳ್ಳಿ. ವಿನಯದ
ಮಾತಿನಿಂದ ಜಯವಿದೆ. ಶುಭಸಂಖ್ಯೆ: 8
ವೃಷಭ: ಎಲ್ಲೆಲ್ಲೋ ದೂರದಲ್ಲಿ ದೈವವನ್ನು
ಹುಡುಕಾಡುತ್ತ ಬಳಲಿದ್ದೀರಿ. ತಂದೆತಾಯಿಯನ್ನೇ
ದೈವದಂತೆ ಪೂಜೆ ಮಾಡಿ. ಶುಭಸಂಖ್ಯೆ: 4
ಮಿಥುನ: ಹೊಸ ವಿವಾದ ಸೃಷ್ಟಿಯಾಗುವ
ಸಾಧ್ಯತೆ ಇದೆ. ಅದು ಉಲ್ಬಣಿಸದ ಹಾಗೆ
ಮಾತುಕತೆ ನಡೆಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 2
ಕಟಕ: ಕೆಂಪು ಅಥವಾ ಹಳದಿ ಬಣ್ಣಗಳನ್ನು
ಮಾತ್ರ ಇಂದು ಬಳಸಿ. ಯಾವ ಕಾರಣಕ್ಕೂ
ಕಪ್ಪುಬಣ್ಣವನ್ನು ನೆಚ್ಚಿಕೊಳ್ಳದಿರಿ. ಶುಭಸಂಖ್ಯೆ: 6
ಸಿಂಹ: ಅಗತ್ಯಕ್ಕಿಂತ ಹೆಚ್ಚಾಗಿ ಖರ್ಚುವೆಚ್ಚಗಳನ್ನು
ಮಾಡುತ್ತಿದ್ದೀರಿ. ಅದನ್ನು ಸರಿಯಾಗಿ
ನಿಯಂತ್ರಿಸಿದರೆ ನೆಮ್ಮದಿಯಿದೆ. ಶುಭಸಂಖ್ಯೆ: 1
ಕನ್ಯಾ: ಕೆಲವು ನಿಮ್ಮನ್ನು ಹೊಗಳಿದರೂ
ಹೊನ್ನಶೂಲಕ್ಕೆ ಏರಿಸುವ ಹುನ್ನಾರ ಮಾಡಬಹುದು.
ಅವರಿಂದ ದೂರ ಇರಿ. ಶುಭಸಂಖ್ಯೆ: 3
ತುಲಾ: ಪದೇಪದೆ ಮೋಸಹೋಗುತ್ತಿದ್ದೀರಿ.
ಆದರೆ ಇಂಥ ದಡ್ಡತನ ಎಂದೂ ಒಳ್ಳೆಯದಲ್ಲ.
ಕಾರ್ಯಶೀಲತೆ ತೋರಿಸಿ. ಶುಭಸಂಖ್ಯೆ: 5
ವೃಶ್ಚಿಕ: ಮನಸ್ಸಿನ ಆಶೋತ್ತರಗಳನ್ನು
ಈಡೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಿ.
ಅದರಲ್ಲಿಂದು ನಿಮಗೆ ಸೋಲಿಲ್ಲ. ಶುಭಸಂಖ್ಯೆ: 7
ಧನುಸ್ಸು: ಕೆಲಸದ ಪ್ರತಿ ಹಂತದಲ್ಲೂ ಕೆಲವು
ತೊಂದರೆಗಳು ಎದುರಾಗಬಹುದು. ಆದರೂ
ದಿನದ ಅಂತ್ಯಕ್ಕೆ ಗೆಲುವಿದೆ. ಶುಭಸಂಖ್ಯೆ: 9
ಮಕರ: ಬಹಳ ಜತನದಿಂದ ವಾಹನ
ಓಡಿಸಬೇಕಾದ ಸಂದರ್ಭ ಬಂದಿದೆ. ಮೈಯೆಲ್ಲ
ಕಣ್ಣಾಗಿರಲಿ. ಶಿವಸ್ತುತಿ ಮಾಡಿ. ಶುಭಸಂಖ್ಯೆ: 8
ಕುಂಭ: ನಿಮಗೆ ನೀವೇ ಆಗಾಗ ಪ್ರಶ್ನೆಗಳನ್ನು
ಕೇಳಿಕೊಳ್ಳುತ್ತಿದ್ದೀರಿ. ಅದನ್ನು ಮುಂದುವರಿಸಿದರೆ
ಅಂತಶ್ಶಕ್ತಿ ಹೆಚ್ಚಾಗಲಿದೆ. ಶುಭಸಂಖ್ಯೆ: 4
ಮೀನ: ಹತ್ತಿರದವರಿಂದಲೇ ಕಿರಿಕಿರಿ ಉಂಟಾಗುತ್ತದೆ.
ದುರ್ಗಾದೇವಿಯನ್ನು ಸ್ತುತಿಸಿ ಕ್ರಿಯಾಶೀಲರಾಗಿರಿ.
ಸಿದ್ಧಿ ಇದೆ. ಶುಭಸಂಖ್ಯೆ: 2