ಈ ರಾಶಿಯವರಿಗೆ ಇಂದು ಹಳೆಯ ವಿವಾದಗಳಿಗೆ ಮುಕ್ತಿ ದೊರೆತು ಲಾಭಕ್ಕೆ ಅವಕಾಶ ಒದಗಿಬರಲಿದೆ

Nitya-Bhavishya-vvani-1-2-1
Published on

ಮೇಷ: ಮನಸ್ಸು ಗೊಂದಲಗಳ ಗೂಡಾಗಿದ್ದರೂ ಸಜ್ಜನರೊಡನೆ ಕಷ್ಟಗಳನ್ನು ಹೇಳಿಕೊಳ್ಳಿ. ತೊಂದರೆಗಳಿಗೆ ಮುಕ್ತಿ ಇದೆ. ಶುಭಸಂಖ್ಯೆ: 4

ವೃಷಭ: ಮಕ್ಕಳಿಂದ ಶುಭ ಸಮಾಚಾರವನ್ನು ಕೇಳಲಿದ್ದೀರಿ. ಚಂಡಿಕಾ ಸ್ತೋತ್ರವನ್ನು ಪಠಿಸುವುದರಿಂದ ದುಃಖಗಳು ಕೊನೆಯಾಗಲಿವೆ. ಶುಭಸಂಖ್ಯೆ: 3

ಮಿಥುನ: ನಿಮ್ಮ ಪ್ರತಿಭೆಯನ್ನು ಗುರುತಿಸುವಂಥ ಮಂದಿ ಸಿಗಲಿದ್ದಾರೆ. ನೀವು ಏನನ್ನೂ ಕೇಳದಿದ್ದರೂ ಕೂಡ ಸಹಜ ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 1

ಕಟಕ: ಅನಿರೀಕ್ಷಿತ ಅತಿಥಿಗಳಿಂದ ದಿನದ ಬಹುಭಾಗ ಕಿರಿಕಿರಿ ಎಂದು ಅನಿಸಬಹುದು. ಆತ್ಮವಿಶ್ವಾಸ ಇರಲಿ. ನೆಮ್ಮದಿ ಪಡೆಯುವಿರಿ. ಶುಭಸಂಖ್ಯೆ: 5

ಸಿಂಹ: ನಡೆದಷ್ಟೂ ಮುಂದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಸುದೈವದ ಖಜಾನೆಯ ಜತೆಜತೆಗೇ ಗೆಲುವು ಕೂಡ ನಿಮ್ಮ ಪಾಲಿಗೆ ಲಭಿಸಲಿದೆ. ಶುಭಸಂಖ್ಯೆ: 7

ಕನ್ಯಾ: ನಿಮ್ಮನ್ನು ಅತಿಯಾಗಿ ವಿಮರ್ಶೆ ಮಾಡುತ್ತ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಬಹುದು. ಅಂಥ ಜನರಿಂದ ದೂರ ಇದ್ದುಬಿಡಿ. ಶುಭಸಂಖ್ಯೆ: 2

ತುಲಾ: ಹಳೆಯ ವಿವಾದಗಳಿಗೆ ಮುಕ್ತಿ ದೊರೆತು ಲಾಭಕ್ಕೆ ಅವಕಾಶ ಒದಗಿಬರಲಿದೆ. ಲಕ್ಷ್ಮೀ ಸ್ತುತಿಯಿಂದ ಶುಭವಾಗಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಗುರಿಯ ಕಡೆಗಿನ ದಾರಿ ದೂರವಿದೆ ಎಂಬ ನಿರಾಶೆ ಬೇಡ. ಚಿಂತೆಯನ್ನು ಬಿಟ್ಟು ಮುಂದಾದರೆ ಉತ್ತಮ ಯಶಸ್ಸು ಸಾಧಿಸುವಿರಿ. ಶುಭಸಂಖ್ಯೆ: 9

ಧನುಸ್ಸು​: ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು. ನಾಲಗೆಯನ್ನು ನಿಯಂತ್ರಣ ಮಾಡಿಕೊಂಡರೆ ಆರೋಗ್ಯವನ್ನು ಪಡೆಯುವಿರಿ. ಶುಭಸಂಖ್ಯೆ: 6

ಮಕರ: ತಿಳಿದಷ್ಟು ಸುಲಭವಾಗಿ ನಿಮ್ಮ ಹಲವಾರು ಕೆಲಸಗಳು ಕೈಗೂಡಲಾರವು. ಆದರೆ ಈ ವೇಳೆ ಧನಲಾಭಕ್ಕೂ ಅವಕಾಶವಿದೆ. ಶುಭಸಂಖ್ಯೆ: 3

ಕುಂಭ: ಸಂಕಲ್ಪಿಸಿದ ಕಾರ್ಯವನ್ನು ಸಾಧಿಸುವಿರಿ. ಲಾಭ ಕಡಿಮೆಯಾದರೂ ಅಡ್ಡದಾರಿಗಳ ಕಡೆಗೆ ಮಾತ್ರ ನೋಡಲು ಹೋಗದಿರಿ. ಶುಭಸಂಖ್ಯೆ: 4

ಮೀನ: ಹೊಸ ದಾರಿ ತೋರಿಸುವ ಮಾರ್ಗದರ್ಶಿಗಳನ್ನು ಸಂಧಿಸುತ್ತೀರಿ. ಪ್ರಾಮಾಣಿಕವಾಗಿರುವ ನಿಮ್ಮ ನಡೆನುಡಿಗಳಿಗೆ ಸದಾ ಜಯವಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net