

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಕೃಷಿಕರಿಗೆ ಅನಾನುಕೂಲ. ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ. ಶುಭಸಂಖ್ಯೆ: 9
ವೃಷಭ: ದೂರ ಪ್ರಯಾಣ. ನೆರೆಹೊರೆಯವರಿಂದ ನೋವು. ಗಂಟಲು ಸಮಸ್ಯೆ. ಪ್ರಯೋಗಾತ್ಮಕ ಆಲೋಚನೆ, ಮನಸ್ತಾಪ. ಶುಭಸಂಖ್ಯೆ: 7
ಮಿಥುನ: ಮಾತಿನಿಂದ ಕಲಹ. ಆರ್ಥಿಕ ಚೇತರಿಕೆ. ಕಣ್ಣಿನ ಸಮಸ್ಯೆ. ಹಿರಿಯರೊಂದಿಗೆ ಕಲಹ. ಆಸ್ತಿ ಚಿಂತೆ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 1
ಕಟಕ: ಸ್ವಾಭಿಮಾನಕ್ಕೆ ಧಕ್ಕೆ. ದೈಹಿಕ ಅಸಮರ್ಥತೆ. ಪಾಲುದಾರಿಕೆಯಲ್ಲಿ ಸಮಸ್ಯೆಗಳು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 6
ಸಿಂಹ: ಮಾನಸಿಕ ಅಸಮತೋಲನ. ಅನಗತ್ಯ ಖರ್ಚು. ದೀರ್ಘಕಾಲದ ಅನಾರೋಗ್ಯ ಬಿಗಡಾಯಿಸೀತು. ಹಿರಿಯರಿಂದ ಮನ್ನಣೆ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ಸಹಾಯ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಅನಾರೋಗ್ಯದಿಂದ ಗುಣಮುಖರಾಗುವಿರಿ. ಹಿಡಿತ ಸಾಧಿಸುವ ಯೋಜನೆ. ಶುಭಸಂಖ್ಯೆ: 4
ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ. ಅಧಿಕಾರ ವರ್ಗದವರಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಮಾನಸಿಕ ನೋವು. ಭವಿಷ್ಯದ ಚಿಂತೆ. ಶುಭಸಂಖ್ಯೆ: 7
ವೃಶ್ಚಿಕ: ತಂದೆಯಿಂದ ಸಹಾಯ-ಸಹಕಾರ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಪೂರ್ವಿಕರ ನೆನಪು ಕಾಡುವುದು. ಶುಭಕಾರ್ಯಕ್ಕೆ ಆಹ್ವಾನ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ಚಿಂತೆ. ಕೋರ್ಟ್ ಕೇಸುಗಳ ಯೋಚನೆ. ಕುಟುಂಬದ ಸ್ಥಿತಿಗತಿಗಳಿಂದ ನೋವು, ನೆರೆಹೊರೆಯವರಿಂದ ನಷ್ಟ. ಶುಭಸಂಖ್ಯೆ: 8
ಮಕರ: ವ್ಯವಹಾರದಲ್ಲಿ ಹಿನ್ನಡೆ. ಅನಗತ್ಯ ಆಸೆಗಳು. ನೆನಪಿನ ಶಕ್ತಿ ಕುಂಠಿತವಾಗಿ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಅನಾರೋಗ್ಯ ಭೀತಿ. ಶುಭಸಂಖ್ಯೆ: 6
ಕುಂಭ: ದೂರ ಪ್ರದೇಶಕ್ಕೆ ತೆರಳುವಿರಿ. ಊಟ- ಉಪಚಾರಗಳಲ್ಲಿ ವ್ಯತ್ಯಾಸ. ರಾಜಕೀಯ ವ್ಯಕ್ತಿಗಳಿಂದ ತೊಂದರೆ. ಪ್ರಾಣಿಗಳಿಂದ ಸಮಸ್ಯೆ. ಶುಭಸಂಖ್ಯೆ: 2
ಮೀನ: ರಹಸ್ಯ ಸ್ಥಳಕ್ಕೆ ಭೇಟಿ. ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ. ಹಿರಿಯರಿಂದ ಸಹಾಯ. ಏಕಾಗ್ರತೆಯ ಕೊರತೆ. ಶುಭಸಂಖ್ಯೆ: 6