ಈ ರಾಶಿಯವರಿಗೆ ಇಂದು ಇದುವರೆಗೆ ಪಟ್ಟ ಕಷ್ಟಕ್ಕೆ ಪ್ರತಿಫಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಿರಿಯರ ಮಾರ್ಗದರ್ಶನ ಪಡೆಯಿರಿ. ಕುಟುಂಬದ ಜಟಿಲ ಸಮಸ್ಯೆಯೊಂದು ಬಗೆಹರಿಯಲಿದೆ. ಹೊಸ ಉದ್ಯಮಕ್ಕೆ ಚಾಲನೆ. ಶುಭಸಂಖ್ಯೆ: 1

ವೃಷಭ: ರಾಜಕೀಯ ರಂಗದಲ್ಲಿರುವವರು ತಾಳ್ಮೆಯಿಂದ ವರ್ತಿಸಿದರೆ ವಿಶೇಷ ಅಧಿಕಾರ ಪ್ರಾಪ್ತಿ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 5

ಮಿಥುನ: ಅನಾರೋಗ್ಯ ಕಾಡಬಹುದು. ಹಳೆಯ ವಿವಾದ ಪುನರಾವರ್ತನೆಯಾದೀತು. ಕಿರಿಕಿರಿ. ಮಕ್ಕಳೊಂದಿಗೆ ವಿಹಾರ. ಶುಭಸಂಖ್ಯೆ: 8

ಕಟಕ: ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಬಹಳ ದಿನಗಳ ಕನಸು ನನಸು. ಪತಿಯೊಂದಿಗೆ ವಿಹಾರ. ದಿನವಿಡೀ ಸಂತಸದ ವಾತಾವರಣ. ಶುಭಸಂಖ್ಯೆ: 6

ಸಿಂಹ: ನಿಮ್ಮ ವಿಶೇಷ ವಿಚಾರದಿಂದ ಜನಮನ್ನಣೆ. ಆತ್ಮಾಭಿಮಾನ ಬಿಟ್ಟುಕೊಡಬೇಡಿ. ಹಿರಿಯರೊಂದಿಗೆ ವಿಧೇಯತೆಯಿರಲಿ. ಶುಭಸಂಖ್ಯೆ: 4

ಕನ್ಯಾ: ಅನವಶ್ಯಕ ತಿರುಗಾಟ. ಪರಿಶ್ರಮವೆಲ್ಲ ವ್ಯರ್ಥವಾಗಿ ಬೇಸರ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 7

ತುಲಾ: ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಂದ ಖರ್ಚು. ಹಳೆಯ ರೋಗ ಕಾಡಬಹುದು. ಧನ್ವಂತರಿಯನ್ನು ಜಪಿಸಿ. ಶುಭಸಂಖ್ಯೆ: 6

ವೃಶ್ಚಿಕ: ಆಸ್ತಿಗೆ ಸಂಬಂಧಿಸಿ ಸ್ನೇಹಿತನಿಂದ ಸಮಾಧಾನ. ಖಾಸಗಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ. ಮನೆ ಬದಲಾವಣೆ ನಿರ್ಧಾರ. ಶುಭಸಂಖ್ಯೆ: 8

ಧನುಸ್ಸು: ಮಾತಿನಿಂದ ಅನಾಹುತವಾಗಬಹುದು. ತಾಳ್ಮೆಯಿರಲಿ. ನಿಮ್ಮ ಪರಿಶ್ರಮಕ್ಕೆ ತಕ್ಕುದಾದ ಫಲಪ್ರಾಪ್ತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 7

ಮಕರ: ಮಗಳ ಮದುವೆಯ ಪ್ರಯತ್ನ ಸಫಲವಾಗದೆ ನಿರಾಸೆ. ಹಿತೈಷಿಗಳಿಂದ ಸಮಾಧಾನ. ಆತ್ಮೀಯರೊಬ್ಬರ ಭೇಟಿ ಮಾಡುವಿರಿ. ಶುಭಸಂಖ್ಯೆ: 1

ಕುಂಭ: ಧನದ ಅಪವ್ಯಯ. ಕುಟುಂಬದಲ್ಲಿ ಪರಸ್ಪರ ಮನಸ್ತಾಪ. ಮಗಳಿಂದ ಶುಭಸುದ್ದಿ. ದಿನಸಿ ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 9

ಮೀನ: ಚಲನಚಿತ್ರ ಕಲಾವಿದರಿಗೆ ವಿಶೇಷ ದಿನ. ಇದುವರೆಗೆ ಪಟ್ಟ ಕಷ್ಟಕ್ಕೆ ಪ್ರತಿಫಲ. ಕೃಷಿಕರಿಗೆ ಅಧಿಕ ಲಾಭ. ಧಾರ್ವಿುಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net