

ಮೇಷ: ತಾಯಿಗೆ ಅನಾರೋಗ್ಯ. ಸೂಕ್ತ ವೈದ್ಯರಿಗೆ ತೋರಿಸಿ. ಮಕ್ಕಳಿಂದ ತೊಂದರೆ. ಹಿರಿಯ ಅಧಿಕಾರಿಗಳ ಕೋಪಕ್ಕೆಗುರಿಯಾಗುವಿರಿ. ಶುಭಸಂಖ್ಯೆ: 9
ವೃಷಭ: ಸಾಲದಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ ತಲೆದೋರೀತು. ಶುಭಸಂಖ್ಯೆ: 5
ಮಿಥುನ: ಆರ್ಥಿಕವಾಗಿ ಕಷ್ಟಕ್ಕೆ ಸಿಲುಕುವಿರಿ. ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ. ಶುಭಸಂಖ್ಯೆ: 6
ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ. ಶುಭಸಂಖ್ಯೆ: 8
ಸಿಂಹ: ಸಂಗಾತಿಯಿಂದ ಕಿರಿಕಿರಿ. ಅನಾರೋಗ್ಯ ಸಾಧ್ಯತೆ, ವೈದ್ಯರ ಸಲಹೆ ಪಡೆಯಿರಿ. ಕೆಲಸ ಕಾರ್ಯಗಳಲ್ಲಿ ವಿಘ್ನ ಉಂಟಾಗಲಿದೆ. ಶುಭಸಂಖ್ಯೆ: 4
ಕನ್ಯಾ: ಉದ್ಯೋಗ ಲಾಭ. ಸಾಲಗಾರರಿಂದ ಮುಕ್ತಿ ದೊರೆತು ಸಂತಸ. ಶತ್ರು ದಮನ. ಗುರುಗಳಿಂದ ಮಾರ್ಗದರ್ಶನ. ಶುಭಸಂಖ್ಯೆ: 1
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಒತ್ತಡಗಳು. ಕಾಲು ನೋವು. ಬುದ್ಧಿ ಚಂಚಲತೆಯಿಂದ ಗೊಂದಲ. ಆಕಸ್ಮಿಕ ಅಪಘಾತ ಸಾಧ್ಯತೆ. ಶುಭಸಂಖ್ಯೆ: 9
ವೃಶ್ಚಿಕ: ಅಚಾನಕ್ ಅವಘಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ. ಶುಭಸಂಖ್ಯೆ: 1
ಧನುಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ. ಅವಮಾನಗಳಿಗೆ ಗುರಿಯಾಗುವ ಸಂದರ್ಭವಿದೆ, ಹುಷಾರು. ಶುಭಸಂಖ್ಯೆ: 8
ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ. ಆರ್ಥಿಕ ಸಹಾಯ. ದಾಯಾದಿ ಕಲಹ. ಕೋರ್ಟ್ ಕೇಸುಗಳಲ್ಲಿ ಜಯ. ಮಹಿಳೆಯರಿಗೆ ಶುಭ ದಿನ. ಶುಭಸಂಖ್ಯೆ: 2
ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 5
ಮೀನ: ಅನಿರೀಕ್ಷಿತ ಘಟನೆಯಿಂದ ಕಿರಿಕಿರಿ. ವಾಹನಗಳಿಂದ ಮತ್ತು ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 1