ಈ ರಾಶಿಯವರಿಗಿಂದು ಹೆಚ್ಚಿನ ಧನಸಂಪಾದನೆ ಬಗ್ಗೆ ಯೋಚಿಸಲು ಸೂಕ್ತ ಕಾಲ

Nitya-Bhavishya-vvani-1-2-1
Published on

ಮೇಷ: ನಿಮ್ಮ ತಪ್ಪುಗಳೇ ನಿಮ್ಮನ್ನು ಸುತ್ತಿಕೊಂಡಾವು. ಮೇಲಧಿಕಾರಿಗಳ ಮೇಲಿನ ಭಿನ್ನಾಭಿಪ್ರಾಯವನ್ನು ಸದ್ಯಕ್ಕೆ ಮರೆತುಬಿಟ್ಟರೆ ಒಳಿತು. ಶುಭಸಂಖ್ಯೆ: 1

ವೃಷಭ: ಸಹೋದರರೂ ವಿರೋಧ ವ್ಯಕ್ತಪಡಿಸಬಹುದು. ಸಹನೆಯೊಂದೇ ಸದ್ಯಕ್ಕೆ ವಜ್ರಾಯುಧವಾಗಿ ನಿಮ್ಮನ್ನು ರಕ್ಷಣೆ ಮಾಡಲಿದೆ. ಶುಭಸಂಖ್ಯೆ: 4

ಮಿಥುನ: ಅಂತಿಮ ಗೆಲುವು ನಿಮಗೇ ದೊರೆಯಬೇಕು ಎಂಬ ರೀತಿಯ ಹಠಮಾರಿ ಧೋರಣೆಯು ತೊಂದರೆ ತಂದೀತು. ಎಚ್ಚರ. ಶುಭಸಂಖ್ಯೆ: 7

ಕಟಕ: ದ್ವಂದ್ವಮಯ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿ ಸಾಗಬೇಕಾದ ದಾರಿಯನ್ನು ತೋರಿಸಲು ಹಿರಿಯರ ಬೆಂಬಲ ಸಿಗಲಿದೆ. ಶುಭಸಂಖ್ಯೆ: 9

ಸಿಂಹ: ಬೇರೆಯವರು ನಿಮ್ಮ ದಾರಿಯನ್ನು ತಪ್ಪಿಸಲು ಬಯಸುತ್ತಿದ್ದಾರೆ. ಧೂರ್ತರಾದ ಜನರನ್ನು ನಯವಾಗಿಯೇ ದೂರ ಇಡಿ. ಶುಭಸಂಖ್ಯೆ: 6

ಕನ್ಯಾ: ಭೂಸಂಬಂಧಿ ವಿಚಾರದ ವ್ಯಾಜ್ಯಗಳೆಲ್ಲ ಪರಿಹಾರಗೊಳ್ಳಲಿವೆ. ಆದರೆ ನೀವು ಸ್ವಲ್ಪ ಶಾಂತತೆಯಿಂದ ವರ್ತಿಸಿ. ಶುಭಸಂಖ್ಯೆ: 8

ತುಲಾ: ಅವಮಾನಿಸುವ ಜನರ ಮೇಲೆ ಸಿಟ್ಟಾಗದೆಯೇ ನಿರ್ಲಕ್ಷಿಸಿಬಿಡಿ. ಆತ್ಮಸ್ಥೈರ್ಯದಿಂದಲೇ ನಿಮ್ಮ ಪಾಲಿಗೆ ಗೆಲುವಿದೆ. ಶುಭಸಂಖ್ಯೆ: 3

ವೃಶ್ಚಿಕ: ಒಳಿತಿನ ದಾರಿಯ ಹುಡುಕಾಟದಲ್ಲಿ ಬಾಳಸಂಗಾತಿಯಿಂದ ಉತ್ತೇಜಕ ಸಲಹೆ ಸಿಗಲಿದೆ. ಅಹಂಕಾರ ಬೇಡ. ಶುಭಸಂಖ್ಯೆ: 5

ಧನಸ್ಸು: ಈ ವೇಳೆ ದೂರದ ಪ್ರವಾಸವನ್ನು ಬಿಡುವುದೇ ಉತ್ತಮ. ಆರೋಗ್ಯದ ವಿಚಾರಕ್ಕೆ ಮಾತ್ರ ಪ್ರಾಮುಖ್ಯತೆ ಇದ್ದಿರಲಿ. ಶುಭಸಂಖ್ಯೆ: 2

ಮಕರ: ಹಳೆಯ ವಿಧಾನಗಳನ್ನು ಹೊಸ ಶಿಸ್ತಿನಲ್ಲಿ ಪ್ರಯೋಗಿಸಿ. ಅತ್ಯುತ್ತಮವಾದ ಲಾಭಕ್ಕೆ ಮಾರ್ಗವೊಂದು ಲಭ್ಯವಾಗಲಿದೆ. ಶುಭಸಂಖ್ಯೆ: 1

ಕುಂಭ: ಕುಟುಂಬದ ಸದಸ್ಯರು ನಿಮ್ಮಿಂದ ಒಳ್ಳೆಯ ಮಾತುಗಳ ನಿರೀಕ್ಷೆಯಲ್ಲಿರುತ್ತಾರೆ. ಅವರನ್ನು ಖಂಡಿತ ನಿರಾಸೆಗೊಳಿಸದಿರಿ. ಶುಭಸಂಖ್ಯೆ: 4

ಮೀನ: ಬೌದ್ಧಿಕ ಸಾಮರ್ಥ್ಯವನ್ನು ಸುಯೋಗ್ಯವಾಗಿ ಬಳಸಿಕೊಂಡರೆ ಹೆಚ್ಚಿನ ಧನಸಂಪಾದನೆಯ ಬಗೆಗೆ ಯೋಚಿಸಬಹುದು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net