

ಮೇಷ: ಹತ್ತಿರದ ನೆಂಟರಿಂದಲೇ ಕಿರಿಕಿರಿಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿಮ್ಮ ತಾಳ್ಮೆಯಿಂದಲೇ ಲಾಭವಿದೆ. ಶುಭಸಂಖ್ಯೆ: 7
ವೃಷಭ: ಉತ್ಸಾಹ, ಲವಲವಿಕೆಗಳಿಂದ ಜನಮನ್ನಣೆ ಪಡೆಯುವಿರಿ. ನಿಮ್ಮ ಮಾತುಗಳು ಆದಷ್ಟು ಸೌಮ್ಯವಾಗಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 5
ಮಿಥುನ: ದಿಢೀರ್ ಎಂದು ಹಣ ಗಳಿಸುವುದರ ವಿಷಯದಲ್ಲಿನ ಆಸಕ್ತಿಯು ಕೆಲವು ಬಗೆಯ ತೊಡಕುಗಳನ್ನು ತಂದೀತು. ಶುಭಸಂಖ್ಯೆ: 3
ಕಟಕ: ಆಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ದಾಯಾದಿ ಜನರಿಂದ ಕಿರುಕುಳವಿದೆ. ಶುಭಸಂಖ್ಯೆ: 2
ಸಿಂಹ: ಹಿರಿಯ ಮಹಿಳೆಯೊಬ್ಬರಿಂದ ಅತ್ಯಗತ್ಯವಾದ ಸಲಹೆ, ನೆರವು ಲಭ್ಯವಾಗಲಿದೆ. ನಿಮ್ಮ ಕಾರ್ಯ ಕೂಡ ಸಿದ್ಧಿಸಲಿದೆ. ಶುಭಸಂಖ್ಯೆ: 8
ಕನ್ಯಾ: ಕಚೇರಿಯಲ್ಲಿ ನೀರಸ ವಾತಾವರಣವೇ ಕಂಡುಬರಲಿದೆ. ಆದರೆ ನಿಮ್ಮ ಕರ್ತವ್ಯವನ್ನು ಮಾತ್ರ ಸರಿಯಾಗಿ ನಿಭಾಯಿಸಿ. ಶುಭಸಂಖ್ಯೆ: 1
ತುಲಾ: ರಾಜಕಾರಣಿಗಳಿಗೆ ಸ್ವಲ್ಪ ನಿರಾಶೆ ಆಗಬಹುದು. ಸಾಮಾಜಿಕ ಕಳಕಳಿಯನ್ನು ಬಿಡದೆಯೇ ಮುಂದುವರಿಸಿದರೆ ಒಳಿತು. ಶುಭಸಂಖ್ಯೆ: 4
ವೃಶ್ಚಿಕ: ತಾಯಿ ಗೌರಿದೇವಿಯ ಕೃಪಾಶೀರ್ವಾದದಿಂದ ಕೈಗೊಂಡ ಕಾರ್ಯಗಳಲ್ಲಿ ಬರá-ವ ಅಡೆತಡೆಗಳು ಬೇಗನೆ ನಿವಾರಣೆಯಾಗಲಿವೆ. ಶುಭಸಂಖ್ಯೆ: 9
ಧನುಸ್ಸು: ಮಕ್ಕಳ ಬಗೆಗೆ ವಾತ್ಸಲ್ಯ ಇರಲಿ. ಕೆಲಸದ ಒತ್ತಡಗಳ ಮಧ್ಯೆ ಆರೋಗ್ಯದ ಕಾಳಜಿಗಾಗಿ ಸಮಯ ಮಾಡಿಕೊಳ್ಳಿ. ಶುಭಸಂಖ್ಯೆ: 2
ಮಕರ: ಕೆಲಸದ ನಿಮಿತ್ತ ಅನೇಕ ಜನರನ್ನು ಭೇಟಿ ಮಾಡಿದರೂ ಎಲ್ಲರೂ ನೆರವಾಗಲಾರರು. ಮನಸಾರೆ ಶಿವನ ಸ್ತುತಿ ಮಾಡಿ. ಶುಭಸಂಖ್ಯೆ: 5
ಕುಂಭ: ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಕೆಲಸಗಳ ನಡá-ವೆ ವಿಶ್ರಾಂತಿಗೂ ಸ್ವಲ್ಪ ಸಮಯವನ್ನು ಕಾದಿಟ್ಟುಕೊಳ್ಳಿ. ಶುಭಸಂಖ್ಯೆ: 7
ಮೀನ: ಮಾಡಿದ ತಪ್ಪಿನ ಬಗ್ಗೆಯೇ ಯೋಚಿಸá-ತ್ತ ಕೊರಗಬೇಡಿ. ಹೊಸ ಉತ್ಸಾಹದಿಂದ ಮುಂದá-ವರಿದರೆ ಕಾರ್ಯಸಿದ್ಧಿ. ಶುಭಸಂಖ್ಯೆ: 2