ನಿತ್ಯ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳಿಂದ ಕಾಯುತ್ತಿದ್ದ ಕೆಲಸ ನೆರವೇರಿದರೂ ಫಲಿತಾಂಶ ತೃಪ್ತಿ ನೀಡದು

Nitya-Bhavishya-vvani-1-2-1
Published on

ಮೇಷ: ದೊಡ್ಡ ಸಾಹಸ ಮಾಡಲು ಕೇಳುತ್ತ ನಿಮ್ಮ ಬಳಿಗೆ ಬರುವವರನ್ನು ನಿರಾಕರಿಸಿ. ಮನೆಯವರು ನಿಮ್ಮ ಮೇಲೆ ಸಿಟ್ಟಾಗಬಹುದು. ಅದೃಷ್ಟಸಂಖ್ಯೆ: 7

ವೃಷಭ: ಕೆಲವರನ್ನು ಅರ್ಥ ಮಾಡಿಕೊಳ್ಳಲಾಗದು ಎಂಬುದು ಗೊತ್ತಾಗುತ್ತದೆ. ಸ್ನೇಹಿತರ ಹೀಯಾಳಿಕೆಯಿಂದ ಬೇಸರ. ಅದೃಷ್ಟಸಂಖ್ಯೆ: 9

ಮಿಥುನ: ಮುಖ್ಯ ಕೆಲಸದ ಮಧ್ಯೆ ನಿತ್ಯದ ಪ್ರಮುಖ ಕೆಲಸ ಮರೆಯಬಹುದು. ಒಂದೇ ವೇಳೆ ನಾನಾ ಕೆಲಸ ಮಾಡಬೇಕಿದೆ. ಅದೃಷ್ಟಸಂಖ್ಯೆ: 5

ಕಟಕ: ಕಷ್ಟದಲ್ಲಿದ್ದಾಗ ನಿಮಗೆ ಸಹಾಯ ಮಾಡದವರು ನೆರವು ಕೇಳಲು ಬರಲಿದ್ದಾರೆ. ಅವರಿಗೆ ಸಹಾಯ ನೀಡಿ ದೊಡ್ಡವರೆನಿಸಿಕೊಳ್ಳಿ. ಅದೃಷ್ಟಸಂಖ್ಯೆ: 2

ಸಿಂಹ: ಬಹಳ ದಿನಗಳಿಂದ ಕಾಯುತ್ತಿದ್ದ ಕೆಲಸ ನೆರವೇರಿದರೂ ಫಲಿತಾಂಶ ತೃಪ್ತಿ ನೀಡದು. ಪ್ರಯತ್ನವನ್ನು ಬಿಡಬೇಡಿ. ಅದೃಷ್ಟಸಂಖ್ಯೆ: 6

ಕನ್ಯಾ: ಯಾರದೋ ಮೇಲಿನ ಸಿಟ್ಟಿನಿಂದಾಗಿ ಮನೆಯಲ್ಲಿ ಜಗಳ ಆಗಬಹುದು. ಯಾರಿಗೂ ಸಾಲ ಕೊಡಬೇಡಿ, ಸಾಲ ಮಾಡದಿರಿ. ಅದೃಷ್ಟಸಂಖ್ಯೆ: 1

ತುಲಾ: ನಿಮ್ಮ ಮೇಲಿದ್ದ ಕೆಲವರ ನಿಷ್ಠೆ ಬದಲಾಗುತ್ತದೆ. ಮಾತು ಮನೆ ಕೆಡಿಸುವ ಗಾದೆ ಅರ್ಥವಾಗಲಿದೆ. ಹೊಸ ವಸ್ತ್ರ ಖರೀದಿ ಬೇಡ. ಅದೃಷ್ಟಸಂಖ್ಯೆ: 7

ವೃಶ್ಚಿಕ: ಕೆಲಸಕಾರ್ಯಗಳು ತಡವಾಗಿ ನೆರವೇರಿದವೆಂದು ಉದ್ವಿಗ್ನಗೊಳ್ಳದಿರಿ. ಎಲ್ಲೆಡೆ ಅಪ್ರಾಮಾಣಿಕತೆ ತುಂಬಿಕೊಂಡಿದೆ ಎನಿಸುತ್ತಿದೆ. ಅದೃಷ್ಟಸಂಖ್ಯೆ: 1

ಧನಸ್ಸು: ನಿಮ್ಮ ಶಕ್ತಿಯ ಮೇಲೆ ನಿಮಗೇ ಅನುಮಾನ ಬಂದೀತು. ಸಂಶಯ ಬೇಡ. ಧೈರ್ಯವಾಗಿ ಒಳ್ಳೆಯ ಕೆಲಸಗಳನ್ನು ಮಾಡಿ. ಅದೃಷ್ಟಸಂಖ್ಯೆ: 4

ಮಕರ: ಕೆಲಸ ಮಾಡಿಕೊಡುತ್ತೇನೆಂದು ಯಾರಿಗೂ ಮಾತು ಕೊಡದಿರಿ. ಯಾರ ಪರವೂ ಇರಬೇಡಿ. ಜಾಣ್ಮೆಯಿಂದ ನಿರ್ಧರಿಸಿ. ಅದೃಷ್ಟಸಂಖ್ಯೆ: 9

ಕುಂಭ: ಯಾರದೋ ಪಿತೂರಿಯ ಮಾತು ಕೇಳಿ ಮುನ್ನುಗ್ಗುವ ಮೊದಲು ಚಿಂತಿಸಿ. ದ್ವಿಚಕ್ರ ವಾಹನ ಪ್ರಯಾಣ ಬೇಡ. ಅದೃಷ್ಟಸಂಖ್ಯೆ: 3

ಮೀನ: ಬಹಳ ಕೆಲಸವಿದ್ದೂ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ನಿಮ್ಮ ಮೇಲೆ ಹಿರಿಯರು ಮುನಿಸಿಕೊಳ್ಳಬಹುದು. ಅದೃಷ್ಟಸಂಖ್ಯೆ: 5 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net