ನಿತ್ಯ ಭವಿಷ್ಯ: ಈ ರಾಶಿಯವರು ವೃಥಾ ಗಾಳಿಗೆ ಗುದ್ದಿ ಕೈ ನೋವು ಮಾಡಿಕೊಳ್ಳುವ ಸಾಹಸಕ್ಕೆ ಮುಂದಾಗುವುದು ಬೇಡ

Nitya-Bhavishya-vvani-1-2-1
Published on

ಮೇಷ: ಹೊಸದೇ ರೀತಿಯ ಲಾಭದ ಪ್ರಾಪ್ತಿಗೆ ಅನಿರೀಕ್ಷಿತ ಮೂಲದಿಂದ ಜಾಸ್ತಿ ಅವಕಾಶಗಳು ಎದುರಾಗಲಿವೆ. ಶುಭಸಂಖ್ಯೆ: 8

ವೃಷಭ: ಆರ್ಥಿಕ ವಿಚಾರಗಳ ಕುರಿತು ಎಲ್ಲರ ಬಳಿಯೂ ಚರ್ಚೆ ಮಾಡದಿರಿ. ಸುಖಾಸುಮ್ಮನೆ ತೊಂದರೆಯಾಗಬಹುದು. ಶುಭಸಂಖ್ಯೆ: 2

ಮಿಥುನ: ಮಾನಸಿಕ ನೆಮ್ಮದಿಗಾಗಿ ಶಿವಾನುಗ್ರಹವು ದೊರೆಯಲಿದೆ. ಶ್ರದ್ಧಾಭಕ್ತಿಗಳಿಂದ ಪರಶಿವನ ಸ್ತುತಿ ಮಾಡಿ. ಶುಭಸಂಖ್ಯೆ: 4

ಕಟಕ: ವೃಥಾ ಗಾಳಿಯನ್ನು ಗುದ್ದಿ ಕೈ ನೋವು ಮಾಡಿಕೊಳ್ಳುವ ಸಾಹಸ ಬೇಡ. ಸಂಗಾತಿಯೊಡನೆ ಜಗಳ ಬೇಡ. ಶುಭಸಂಖ್ಯೆ: 7

ಸಿಂಹ: ಧೈರ್ಯದಿಂದ ಅನೇಕ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಆದರೆ ಕೋಪದ ಮಾತು ಮಾತ್ರ ಬೇಡವೇ ಬೇಡ. ಶುಭಸಂಖ್ಯೆ: 3

ಕನ್ಯಾ: ಯಾವುದೋ ಕೃತ್ರಿಮ ಶಕ್ತಿಯು ನಿಮ್ಮ ಅಭ್ಯುದಯವನ್ನು ತಡೆಯದ ಹಾಗೆ ದತ್ತಾತ್ರೇಯನನ್ನು ಆರಾಧಿಸಿ. ಶುಭಸಂಖ್ಯೆ: 6

ತುಲಾ: ಹಿರಿಯರ ಆಸ್ತಿಯ ವಿಚಾರದಲ್ಲಿ ನಿಮ್ಮ ಕಣ್ತಪ್ಪಿನಿಂದಾಗಿ ತೊಂದರೆಗಳು ಎದುರಾಗಲು ಅವಕಾಶವಿದೆ. ಶುಭಸಂಖ್ಯೆ: 8

ವೃಶ್ಚಿಕ: ಮತ್ತೆ ಮತ್ತೆ ಹಿಂದಿನ ತಪ್ಪುಗಳನ್ನೇ ಮಾಡದಿರಲು ನಿರ್ಧರಿಸಿ. ವರ್ಚಸ್ಸನ್ನು ಇನ್ನಷ್ಟು ವೃದ್ಧಿ ಮಾಡಿಕೊಳ್ಳಿ. ಶುಭಸಂಖ್ಯೆ: 1

ಧನಸ್ಸು: ತಲೆತಲಾಂತರದಿಂದ ಬಂದಿರುವ ಕುಟುಂಬದ ಸಂಪ್ರದಾಯಗಳನ್ನು ಏಕಾಏಕಿ ನಿಲ್ಲಿಸದಿದ್ದರೆ ಒಳಿತಿದೆ. ಶುಭಸಂಖ್ಯೆ: 5

ಮಕರ: ನಿಮ್ಮದು ಸಾಹಸ, ಧೈರ್ಯಗಳಿಂದಲೇ ರೂಪುಗೊಂಡ ಪರಂಪರೆ. ಇದನ್ನು ಮುಂದುವರಿಸಿ ಕ್ಷೇಮವಿದೆ. ಶುಭಸಂಖ್ಯೆ: 3

ಕುಂಭ: ಯಾವುದೇ ಕೆಲಸಕ್ಕೆ ಮುಂದಾಗಲು ಅವ್ಯಕ್ತ ಭಯದಿಂದ ಹಿಂಜರಿಯುವಿರಿ. ಅದರಿಂದ ಹೊರಬಂದರೆ ಉತ್ತಮ. ಶುಭಸಂಖ್ಯೆ: 6

ಮೀನ: ಅನಿವಾರ್ಯ ಕೆಲಸಗಳ ನಡುವೆ ಬೇಕಿರದ ಕೆಲಸಗಳನ್ನು ಬೆರೆಸಲು ಹೋಗಬೇಡಿ. ನಿರೀಕ್ಷಿತ ಫಲವನ್ನು ಪಡೆಯಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net