ಕನಕಧಾರಾ ಸ್ತೋತ್ರ ಓದಿದರೆ ಈ ರಾಶಿಯವರ ಸಂಪತ್ತು ವೃದ್ಧಿಯಾಗುತ್ತೆ, ಇಷ್ಟಾರ್ಥ ನೆರವೇರುತ್ತದೆ.

Nithya Bhavishya
Published on

ಮೇಷ: ಎಲ್ಲರೂ ದೂರ ಮಾಡಿದ್ದಾರೆ ಎಂಬ

ಹತಾಶಾ ಭಾವ ಬೇಡ. ಜನ ನಿಮ್ಮನ್ನು

ಆರಾಧಿಸುವ ಸಂದರ್ಭವೂ ಬರಲಿದೆ. ಶುಭಸಂಖ್ಯೆ: 8

ವೃಷಭ: ನಿಮ್ಮನ್ನು ಅವಮಾನಿಸುವ ಜನ

ಸಿಗುತ್ತಾರೆ. ಆದರೂ ಬೇಸರಪಡಬೇಡಿ.

ನಿಮ್ಮನ್ನು ನೀವು ತಿದ್ದಿಕೊಳ್ಳಬಹುದು. ಶುಭಸಂಖ್ಯೆ: 4

ಮಿಥುನ: ನಿಮ್ಮ ಭಾವನಾತ್ಮಕ ತಳಮಳಗಳನ್ನು

ಮನೆಯ ಸದಸ್ಯರೊಂದಿಗೆ ಹಂಚಿಕೊಳ್ಳಿ. ಇದರಿಂದ

ನಿರಾಳತೆ ಹೊಂದುವಿರಿ. ಶುಭಸಂಖ್ಯೆ: 2

ಕಟಕ: ಕನಕಧಾರಾ ಸ್ತೋತ್ರವನ್ನು ಓದುವುದರಿಂದ

ಇಷ್ಟಾರ್ಥಗಳು ಸಿದ್ಧಿಸಿ ಧನಸಂಪಾದನೆಯ

ದಾರಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 6

ಸಿಂಹ: ಯಾವುದೋ ಕೆಲಸ ಸಿಕ್ಕಿದರೆ ಎಂದುಕೊಂಡ

ನಿಮಗೆ ಸದ್ಯದಲ್ಲೇ ಹೊಸ ಕೆಲಸ ಸಿಗುವ

ಅವಕಾಶ ಹೇರಳವಾಗಿದೆ. ಶುಭಸಂಖ್ಯೆ: 9

ಕನ್ಯಾ: ನಿಮ್ಮನ್ನು ಅನೇಕ ಜನ ಪ್ರಶಂಸಿಸುತ್ತಾರೆ

ಎಂಬುದು ನಿಜ. ಆದರೂ ಆತ್ಮವಿಮರ್ಶೆ

ಮಾಡಿಕೊಳ್ಳಲು ಮರೆಯದಿರಿ. ಶುಭಸಂಖ್ಯೆ: 5

ತುಲಾ: ಕಷ್ಟಕೋಟಲೆಗಳಿಂದ ಬೇಸತ್ತಿದ್ದೀರಿ.

ಸಹೋದ್ಯೋಗಿಯೊಬ್ಬರ ನೆರವಿನಿಂದ

ಬದುಕಿನ ನೆಮ್ಮದಿಗೆ ಅವಕಾಶವಿದೆ. ಶುಭಸಂಖ್ಯೆ: 3

ವೃಶ್ಚಿಕ: ಮಹಾವಿಷ್ಣುವನ್ನು ತುಳಸಿಯಿಂದ ಅರ್ಚನೆ

ಮಾಡಿ. ಬಹು ದಿನಗಳಿಂದ ಕಂಡಿರುವ

ಕನಸು ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 1

ಧನುಸ್ಸು: ನಿಮ್ಮನ್ನು ಮೆಚ್ಚುವವರ ಬಗ್ಗೆ ಮಾತ್ರ

ಆದರ ತೋರಿಸಬೇಡಿ. ಇತರರ ಸಾಧನೆಯನ್ನೂ

ಮೆಚ್ಚಿದರೆ ಶುಭವಾಗಲಿದೆ. ಶುಭಸಂಖ್ಯೆ: 7

ಮಕರ: ಹಳೆಯ ಕಾಲದ ವಿಚಾರಗಳೆಂದು

ತಿರಸ್ಕರಿಸದಿರಿ. ಅವುಗಳ ಪ್ರಾಮುಖ್ಯತೆಯ

ಅರಿವು ಇಂದು ಉಂಟಾಗಲಿದೆ. ಶುಭಸಂಖ್ಯೆ: 8

ಕುಂಭ: ಹಲವು ದಿನಗಳ ಆಲೋಚನೆಗಳು

ಕಾರ್ಯರೂಪಕ್ಕೆ ಬರಲಿವೆ. ವಿಷಾದದಿಂದ

ಹೊರಬಂದು ಕ್ರಿಯಾಶೀಲರಾಗಿರಿ. ಶುಭಸಂಖ್ಯೆ: 4

ಮೀನ: ಬರೀ ಮಾತುಗಳ ಬಂಡವಾಳ ಬೇಡ.

ನಿಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಿ.

ಇತರರ ಬೆಂಬಲವೂ ಸಿಗಲಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net