ಇಂದು ಈ ರಾಶಿಯ ಮಹಿಳೆಯರಿಗೆ ಶುಭ ಸಮಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದರನ ಆರೋಗ್ಯದಲ್ಲಿ ಸುಧಾರಣೆ. ವ್ಯಾಪಾರದಲ್ಲಿ ನಂಬಿದವರಿಂದಲೇ ಮೋಸ. ಅವಿವಾಹಿತರಿಗೆವಿವಾಹ ಯೋಗ. ಶುಭಸಂಖ್ಯೆ: 5

ವೃಷಭ: ಹಿತಶತ್ರುಗಳಿಂದ ತಪ್ಪಿದ ಪದವಿ. ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ. ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ. ಶುಭಸಂಖ್ಯೆ: 5

ಮಿಥುನ: ವೃತ್ತಿಜೀವನದಲ್ಲಿ ಅನಿರೀಕ್ಷಿತ ಬದಲಾವಣೆಯಾಗಲಿದೆ. ಉದ್ಯೋಗದಲ್ಲಿ ಯಶಸ್ಸು. ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾದೀತು. ಶುಭಸಂಖ್ಯೆ: 8

ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸೋಮಾರಿತನದಿಂದ ಧನ ನಷ್ಟ. ಕಾಲಿಗೆ ಪೆಟ್ಟಾಗುವ ಸಂಭವವಿದೆ, ಎಚ್ಚರ. ಶುಭಸಂಖ್ಯೆ:1

ಸಿಂಹ: ಯಂತ್ರೋಪಕರಣ ಮಾರಾಟದಲ್ಲಿ ಶುಭವಾಗಲಿದೆ. ಸಹೋದರರಿಂದ ಅನುಕೂಲ. ಪ್ರಯಾಣದಿಂದ ಧನಲಾಭವಾಗಲಿದೆ. ಶುಭಸಂಖ್ಯೆ: 7

ಕನ್ಯಾ: ಸಮಾಜದಲ್ಲಿ ಗೌರವ ಲಭ್ಯ. ಉದ್ಯೋಗಾಕಾಂಕ್ಷಿಗಳಿಗೆ ಶುಭದಾಯಕ ಕ್ಷಣ. ದಂಪತಿಗಳಲ್ಲಿ ವೈಮನಸ್ಸು ಉಂಟಾದೀತು. ಶುಭಸಂಖ್ಯೆ: 1

ತುಲಾ: ಉದ್ಯೋಗ ವ್ಯವಹಾರದಲ್ಲಿ ನಿರ್ಲಕ್ಷ್ಯದಿಂದ ನಷ್ಟ. ಕುಟುಂಬ ಕಲಹದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಆರ್ಥಿಕ ಸಂಕಷ್ಟ. ಶುಭಸಂಖ್ಯೆ: 9

ವೃಶ್ಚಿಕ: ಮಹಿಳೆಯರಿಗೆ ಶುಭ ಸಮಯ. ವೈದ್ಯರಿಗೆ ಅನುಕೂಲಕರ. ಬರಹಗಾರರು ಮತ್ತು ವಿಡಿಯೋಗ್ರಾಫರ್​ಗಳಿಗೆ ಪರ್ವಕಾಲ. ಶುಭಸಂಖ್ಯೆ: 9

ಧನುಸ್ಸು: ತೀರ್ಮಾನಗಳನ್ನು ಬದಲಾಯಿಸದಿರಿ. ಹವ್ಯಾಸವಾಗಿದ್ದ ಕೆಲಸವೊಂದು ನೆರವಾಗುತ್ತದೆ. ಪತ್ನಿಗೆ ಆರೋಗ್ಯದ ತೊಂದರೆ. ಶುಭಸಂಖ್ಯೆ: 6

ಮಕರ: ದಿಟ್ಟತನದ ನಿರ್ಧಾರಗಳಿಂದ ಶುಭಫಲಗಳು ದೊರೆಯುವವು. ಹಣಕ್ಕೆ ತೊಂದರೆಯಾಗಲಿದೆ. ವಕೀಲರಿಗೆ ಧನ ಲಾಭ. ಶುಭಸಂಖ್ಯೆ: 5

ಕುಂಭ: ಮುಂಗೋಪದಿಂದ ಕೆಲಸ ಹೋದೀತು. ಮಹಿಳಾ ಉದ್ಯೋಗಿಗಳಲ್ಲಿ ಬದಲಾವಣೆ ನಿರೀಕ್ಷೆ. ಪ್ರಯತ್ನಗಳ ಅವಶ್ಯಕತೆ ಇದೆ. ಶುಭಸಂಖ್ಯೆ: 6

ಮೀನ: ಮೆಕ್ಯಾನಿಕ್​ಗಳಿಗೆ ಏಕಾಗ್ರತೆ ಅವಶ್ಯ. ರಕ್ತದೊತ್ತಡದ ಸಮಸ್ಯೆ. ಔಷಧ ವ್ಯಾಪಾರಿಗಳಿಗೆ ಧನ ಲಾಭ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net