

ಮೇಷ: ನ್ಯಾಯವಾದಿಗಳಿಗೆ ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರ ಇರಲಿ. ಶುಭಸಂಖ್ಯೆ: 4
ವೃಷಭ: ಮುಕ್ತ ಭಾವನೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳ ಬೆಂಬಲ. ಶುಭಸಂಖ್ಯೆ: 7
ಮಿಥುನ: ಹಿರಿಯರ ಸಲಹೆಗಳಿಂದ ಆಗಬಹುದಾಗಿದ್ದ ನಷ್ಟವನ್ನು ತಪ್ಪಿಸಿಕೊಳ್ಳುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಶುಭಸಂಖ್ಯೆ: 1
ಕಟಕ: ಪದೇಪದೆ ನಿಮ್ಮ ನಿರ್ಧಾರ ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಅಸಹನೆ. ಹೂವಿನ ವ್ಯಾಪಾರಿಗಳಿಗೆ ಲಾಭ.ಶುಭಸಂಖ್ಯೆ: 9
ಸಿಂಹ: ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕುಟುಂಬ ವ್ಯವಹಾರದಲ್ಲಿ ತೃಪ್ತಿ ಇರುತ್ತದೆ. ವೈಯಕ್ತಿಕ ಸಮಸ್ಯೆಗಳಿಗೆ ಗಮನಕೊಡಿ. ಶುಭಸಂಖ್ಯೆ: 8
ಕನ್ಯಾ: ಸ್ನೇಹಿತರೊಂದಿಗೆ ವಿಚಾರವಿನಿಮಯ ಮಾಡಿ. ಸಾಲ ಮರುಪಾವತಿ ಮಾಡಿ ಗೌರವ ಉಳಿಸಿಕೊಳ್ಳುವಿರಿ. ಶುಭಸಂಖ್ಯೆ: 4
ತುಲಾ: ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಹಲವು ಪ್ರಯತ್ನಗಳನ್ನು ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಆದಾಯ ಹೆಚ್ಚುತ್ತದೆ. ಶುಭಸಂಖ್ಯೆ: 1
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಾಧ್ಯತೆಗಳಿವೆ. ಶುಭಸಂಖ್ಯೆ: 7
ಧನುಸ್ಸು: ಕೆಲವೊಂದು ವಿಷಯಗಳಲ್ಲಿ ನೀವು ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಶುಭಸಂಖ್ಯೆ: 1
ಮಕರ: ಸತ್ಯಶೋಧನೆಯಿಂದ ಆಂತರಿಕ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ದೂರದೂರಿಗೆ ಹೋಗಿ ಬರುವಿರಿ. ಶುಭಸಂಖ್ಯೆ: 7
ಕುಂಭ: ಕೃಷಿ ಯಂತ್ರಗಳನ್ನು ಹೊಂದಿರುವವರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೀತಿ-ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ಶುಭಸಂಖ್ಯೆ: 1
ಮೀನ: ಸಾಮರ್ಥ್ಯವನ್ನು ಅರಿತು ಕೆಲಸ ಕಾರ್ಯಗಳನ್ನು ಆಯ್ಕೆಮಾಡಿಕೊಳ್ಳಿ. ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 9