ಈ ರಾಶಿಯವರಿಗಿಂದು ಆತ್ಮೀಯರಿಂದ ಸಮಸ್ಯೆಗೆ ಪರಿಹಾರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಲ್ಲದ ಅಪವಾದ ಕಾಡಲಿದೆ. ಸರ್ಕಾರಿ ಕೆಲಸದಲ್ಲಿ ಜಯ. ಸಮಾರಂಭದ ಸಡಗರ. ಅಪರಿಚಿತನಿಂದ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ: 2

ವೃಷಭ: ಕಷ್ಟಕ್ಕೆ ತಕ್ಕ ಪ್ರತಿಫಲ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ದಾಂಪತ್ಯದಲ್ಲಿ ಪ್ರೀತಿ. ಸಮಾಜಮುಖಿ ಕೆಲಸ ಮಾಡುವಿರಿ. ಆರ್ಥಿಕ ಸದೃಢತೆ. ಶುಭಸಂಖ್ಯೆ: 4

ಮಿಥುನ: ಕಲಾವಿದರಿಗೆ ಉತ್ತಮ ದಿನ. ಬರಹಗಾರರಿಗೆ, ಮಾಧ್ಯಮದವರಿಗೆ ವಿಶೇಷ ದಿನ. ಭೂವ್ಯವಹಾರದಲ್ಲಿ ನಷ್ಟ. ಅನಿರೀಕ್ಷಿತ ತಿರುವು. ಶುಭಸಂಖ್ಯೆ: 8

ಕಟಕ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ದೂರದಿಂದ ಬಂಧುಗಳ ಆಗಮನ. ನ್ಯಾಯಾಲಯ ುದ ತೀರ್ಪು ನಿಮ್ಮ ವಿರುದ್ಧ ಬಂದೀತು. ಶುಭಸಂಖ್ಯೆ: 8

ಸಿಂಹ: ಸಾರ್ವಜನಿಕ ರಂಗದಲ್ಲಿ ಮನ್ನಣೆ ದೊರೆಯಲಿದೆ. ಸಗಟು ವ್ಯಾಪಾರಿಗಳಿಗೆ ನಷ್ಟ. ಅನಾರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 3

ಕನ್ಯಾ: ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗದಲ್ಲಿ ಬದಲಾವಣೆಯತ್ತ ಒಲವು. ಸರ್ಕಾರದಿಂದ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ. ಶುಭಸಂಖ್ಯೆ: 5

ತುಲಾ: ಕಲಾವಿದರಿಗೆ ಉತ್ತಮ ದಿನ. ಸಾಹಿತಿಗಳಿಗೆ, ಪತ್ರಕರ್ತರಿಗೆ ಧನಲಾಭ. ಆಸ್ತಿ ವಿವಾದಕ್ಕೆ ಸಂಬಂಧ ಪಟ್ಟಂತೆ ಶುಭಸುದ್ದಿ ಕಾದಿದೆ. ಶುಭಸಂಖ್ಯೆ: 8

ವೃಶ್ಚಿಕ: ಬಂಧು ಮಿತ್ರರ ಸಮಾಗಮ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆಯಲಿವೆ. ಆತ್ಮೀಯರಿಂದ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 9

ಧನುಸ್ಸು: ಚಿನ್ನ- ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ. ಮಹಿಳಾ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಸಹಕಾರಿ ಕ್ಷೇತ್ರದಲ್ಲಿ ಅನಿರೀಕ್ಷಿತ ಘಟನೆ ಸಾಧ್ಯತೆ. ಶುಭಸಂಖ್ಯೆ: 1

ಮಕರ: ಸಾಲಗಾರರಿಂದ ಕಿರುಕುಳ. ಸಹೋದ್ಯೋಗಿಗಳಿಂದ ಸಲಹೆ. ಮಗಳಿಗೆ ವಿವಾಹ ನಿಶ್ಚಯ. ಅಮೂಲ್ಯ ವಸ್ತು ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 3

ಕುಂಭ: ಖರೀದಿಯಲ್ಲಿ ಮೋಸವಾದೀತು. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶತ್ರುಗಳಿಂದ ನಿಮ್ಮ ಕುರಿತು ಅಪಪ್ರಚಾರ. ಶುಭಸಂಖ್ಯೆ: 5

ಮೀನ: ದಾಂಪತ್ಯದಲ್ಲಿ ಮನಸ್ತಾಪ. ಹಣದ ಅಪವ್ಯಯ. ಸೋಮಾರಿತನದಿಂದ ಕಾರ್ಯ ವಿಫಲ. ಲೋಹದ ವ್ಯಾಪಾರಿಗಳಿಗೆ ನಷ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net