

ಮೇಷ: ವೈಯಕ್ತಿಕ ಕಾರ್ಯದೊತ್ತಡದ ನಡುವೆಯೂ ಸಾಮಾಜಿಕ ಕೆಲಸ ಮಾಡುವ ನಿಮಗೆ ರಾಜಕೀಯ ಸೇರಲು ಆಹ್ವಾನ ಬರಲಿದೆ. ಶುಭಸಂಖ್ಯೆ: 9
ವೃಷಭ: ಸ್ನೇಹಿತರು ನಿಮ್ಮ ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ತೊಂದರೆಗಳಿಂದ ಧೈರ್ಯಗೆಡದಿರಿ. ಶುಭಸಂಖ್ಯೆ: 7
ಮಿಥುನ: ನಿಮ್ಮ ಫಲಿತಾಂಶಕ್ಕೆ ಶತ್ರುಗಳಿಂದ ಅಡ್ಡಿ ಸಾಧ್ಯತೆಯಿದೆ. ಮನೆಯಲ್ಲಿ ಧಾರ್ವಿುಕ ಕಾರ್ಯ. ವಾಹನಗಳಿಂದ ಹೆಚ್ಚಿನ ಆದಾಯ. ಶುಭಸಂಖ್ಯೆ: 7
ಕಟಕ: ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಚಂಚಲ ಮನಸ್ಸು ಅಡ್ಡಿ ಮಾಡುವುದು. ಸ್ನೇಹಿತರೊಬ್ಬರು ನಿಮಗೆ ನೆರವಾಗಲಿದ್ದಾರೆ. ಶುಭಸಂಖ್ಯೆ: 9
ಸಿಂಹ: ಸ್ವಂತ ಉದ್ದಿಮೆ ಆರಂಭಿಸುವ ಮನಸ್ಸಾಗಲಿದೆ. ಆಸ್ತಿ ಕೊಳ್ಳುವ ವಿಷಯದಲ್ಲಿ ಮಾತುಕತೆ. ವ್ಯವಹಾರ ನಿಮಿತ್ತ ದೂರ ಪ್ರಯಾಣ. ಶುಭಸಂಖ್ಯೆ: 5
ಕನ್ಯಾ: ನಿಮ್ಮ ಶತ್ರುಗಳು ಮಾಡುವ ಕೆಲಸ ನಿಮಗೆ ಅನುಕೂಲವಾಗಿಯೇ ಇರುವುದು. ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಉತ್ತಮ. ಶುಭಸಂಖ್ಯೆ: 2
ತುಲಾ: ಯೋಗ್ಯ ವಯಸ್ಕರಿಗೆ ವಿವಾಹಭಾಗ್ಯ. ಈ ದಿನ ಗೋವಿನ ಸೇವೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಗೋಚರಿಸಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಮಕ್ಕಳ ಸಡಗರ. ಉನ್ನತಿ ಗೋಚರಕ್ಕೆ ಬಂದರೂ ಲೆಕ್ಕಾಚಾರದ ಬಗ್ಗೆ ಗಮನವಿರಲಿ. ತರಕಾರಿ, ಸೊಪ್ಪು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 7
ಧನುಸ್ಸು: ಕೈಗೊಂಡ ಕೆಲಸದಲ್ಲಿ ವಿಳಂಬ ಸಾಧ್ಯತೆ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬಿಡಿ. ಆತ್ಮವಿಶ್ವಾಸದಿಂದ ಪ್ರಗತಿಯತ್ತ ಗಮನಹರಿಸಿ. ಶುಭಸಂಖ್ಯೆ: 3
ಮಕರ: ಅವಕಾಶಗಳನ್ನು ಬಳಸಿಕೊಳ್ಳಿ. ಹಿಂದೆಂದೂ ಮಾಡದ ಕೆಲಸಗಳನ್ನು ಮಾಡಬೇಕಾಗುವುದು. ಜಾಣ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ: 9
ಕುಂಭ: ಬದುಕಿನಲ್ಲಿ ಮಹತ್ವದ ದಿನ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಹಲವು ದಿನಗಳಿಂದಿರುವ ದೇಹಾಯಾಸವು ಶಮನವಾಗುವುದು. ಶುಭಸಂಖ್ಯೆ: 7
ಮೀನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಿರೀಕ್ಷಿತ ಬದಲಾವಣೆ. ಮಹಿಳೆಯರಿಗೆ ಉದ್ಯೋಗ ಬದಲಾವಣೆ. ಕೆಟ್ಟ ಸುದ್ದಿ ಬಂದೀತು. ಶುಭಸಂಖ್ಯೆ: 1