

ಮೇಷ: ಕುಟುಂಬ ಸೌಖ್ಯ. ಯತ್ನ ಕಾರ್ಯದಲ್ಲಿ ಯಶಸ್ಸು. ಸಮಾಜದಲ್ಲಿ ಗೌರವ. ಷೇರು ವ್ಯವಹಾರಗಳಲ್ಲಿ ಲಾಭ. ದೂರ ಪ್ರಯಾಣ. ಶುಭಸಂಖ್ಯೆ: 2
ವೃಷಭ: ಶತ್ರುಗಳು ಮಿತ್ರರಾಗುವ ಸುದಿನ. ಅಲ್ಪ ಆದಾಯ ಅಧಿಕ ಖರ್ಚು. ಮನಸ್ಸಿಗೆ ನೆಮ್ಮದಿ. ನಿಮ್ಮ ಸದ್ವರ್ತನೆಯಿಂದ ಯಶಸ್ಸು. ಶುಭಸಂಖ್ಯೆ: 5
ಮಿಥುನ: ಸಾರಾಸಾರ ವಿವೇಚನೆಯಿಂದ ಯೋಚಿಸಿ ಕೆಲಸ ಮಾಡಿ. ಅನಾರೋಗ್ಯ ಬಾಧಿಸಬಹುದು. ದಾಂಪತ್ಯದಲ್ಲಿ ವಿರಸ ಸಾಧ್ಯತೆ. ಶುಭಸಂಖ್ಯೆ: 9
ಕಟಕ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ. ಅದೃಷ್ಟ ಒಲಿದು ಬರಲಿದೆ. ಖರ್ಚುವೆಚ್ಚಗಳಲ್ಲಿ ಹಿಡಿತವಿದ್ದರೆ ಭವಿಷ್ಯಕ್ಕೆ ಅನುಕೂಲ. ಶುಭಸಂಖ್ಯೆ: 1
ಸಿಂಹ: ಮಹಿಳೆಯರಿಗೆ ಕೆಲಸದ ಒತ್ತಡ ಹೆಚ್ಚಲಿದೆ. ಆಪ್ತ ಸ್ನೇಹಿತರ ಭೇಟಿಯಾಗುವಿರಿ. ಹಣಕಾಸಿನ ವಿಷಯದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 6
ಕನ್ಯಾ: ಉದ್ಯೋಗದಲ್ಲಿ ಪ್ರಗತಿಯಾಗುವುದು. ಆಕಸ್ಮಿಕ ಧನಲಾಭ. ತಾಳ್ಮೆ ಅಗತ್ಯ. ಶತ್ರು ನಾಶ. ಧಾರ್ವಿುಕ ವಿಷಯದತ್ತ ಆಸಕ್ತಿ. ಶುಭಸಂಖ್ಯೆ: 7
ತುಲಾ: ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಮಿತ್ರರಿಂದ ಸಹಾಯ ಹರಿದು ಬರಲಿದೆ. ಗುರುಹಿರಿಯರ ಭೇಟಿ ಮಾಡಿ. ಶುಭಸಂಖ್ಯೆ: 4
ವೃಶ್ಚಿಕ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಮನಸ್ಸಿಗೆ ಶಾಂತಿ, ನೆಮ್ಮದಿ. ತೀರ್ಥಯಾತ್ರೆ, ದೇವರ ದರ್ಶನ. ಶುಭಸಂಖ್ಯೆ: 2
ಧನುಸ್ಸು: ಅಲ್ಪ ಕಾರ್ಯಸಿದ್ಧಿಯಾಗಿ ಸ್ವಲ್ಪ ಸಮಾಧಾನ ಕೃಷಿಯಲ್ಲಿ ಲಾಭ. ಸಾಲಬಾಧೆ ಕಾಡೀತು. ಮನಕ್ಲೇಷ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ:1
ಮಕರ: ಅತಿಯಾದ ದುಃಖ. ಸ್ವಯಂ ನಿಯಂತ್ರಿಸಿಕೊಳ್ಳಿ. ವಾಹನ ಚಾಲಕರಿಗೆ ತೊಂದರೆ. ಶತ್ರು ಬಾಧೆ. ಪತಿ ಪತ್ನಿಯರಲ್ಲಿ ಸಂತೋಷ. ಶುಭಸಂಖ್ಯೆ: 5
ಕುಂಭ: ಪರಸ್ಥಳ ವಾಸ ಮಾಡಬೇಕಾದೀತು. ಶರೀರದಲ್ಲಿ ಆಲಸ್ಯ. ದಾಯಾದಿ ಕಲಹ . ಇಲ್ಲ ಸಲ್ಲದ ಅಪವಾದ, ಕಾರ್ಯಸಾಧನೆ. ಶುಭಸಂಖ್ಯೆ: 7
ಮೀನ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಧನಲಾಭ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಲ್ಲಿ ಯಶಸ್ಸು. ಶುಭಸಂಖ್ಯೆ: 9